ಸುದ್ದಿಲೈವ್/ಶಿವಮೊಗ್ಗ
ಎಫ್ಐಆರ್ ದಾಖಲಾಗಲು 17 ಗಂಟೆ ತಡವಾಗಿದ್ದ ಹೆಚ್ ಸಿದ್ದಯ್ಯ ರಸ್ತೆಯ ರಸ್ತೆ ಅಪಘಾತ ಪ್ರಕರಣ ಕೊನೆಗೂ ಕೊಲೆ ಪ್ರಕರಣವೆಂದು ದೂರುದಾಖಲಾಗಿದೆ. ಮಾಹಿತಿ ಪ್ರಕರಣ ಚಾಲಕನೋರ್ವನನ್ನ ಮಾತ್ರ ಆರೋಪಿ ಎಂದು ತೋರಿಸಿ ಪ್ರಕರಣದ ಕುತೂಹಲವನ್ನ ಹೆಚ್ಚಿಸಿದೆ.
ಕಾರಿನಲ್ಲಿ ನಾಲ್ಕರಿಂದ ಐದು ಜನರವರೆಗೆ ಇದ್ದರು ಎಂಬ ಮಾಹಿತಿ ಇದ್ದರು, ಚಾಲಕನೋರ್ವನನ್ನೇ ಆರೋಪಿ ಎಂದು ತೋರಿಸಿ ಕೈತೊಳೆದುಕೊಳ್ಳಲಾಯುತಾ ಎಂಬ ಕುತೂಹಲ ಹುಟ್ಟಿಸಿದೆ. ಅಥವಾ ಜೊತೆಗಿರುವವರು ಮೂಖಪ್ರೇಕ್ಷಕರಾಗಿದ್ದರಾ ಎಂಬ ಕೆಟ್ಟಕುತೂಹಲವೂ ಹೆಚ್ಚಿಸಿದೆ? ಮಾಹಿತಿ ಪ್ರಕಾರ ಚಾಲಕ ಕಾರ್ತಿಕ್ ನನ್ನ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಕೆಎ 04 ಕೆ.ಎಸ್ 1405 ಕ್ರಮ ಸಂಖ್ಯೆಯ ಯಮಹಾ ಎಫ್ ಹೆಡ್ ಬೈಕ್ ಹತ್ತಿಕೊಂಡು ಮೇಲಿನ ತುಂಗನಗರದಿಂದ ಧನುಶ್ ಮತ್ತು ಪ್ರಜ್ವಲ್ ಎಂಬ ಯುವಕರು ಜ.1 ರ ಬೆಳಗಿನ ಜಾವ 12 ಗಂಟೆಯ ನಂತರ ಮನೆಯಿಂದ ಹೊರಡುತ್ತಾರೆ. ಕೇಕ್ ತರಲು ಮತ್ತು ಬಿಹೆಚ್ ರಸ್ತೆಯಲಲ್ಪಿರುವ ಚರ್ಚ್ ಗೆ ಹೋಗಿ ಬರಲು ಹೊರಟಿದ್ದರು.
ಸ್ಯಾಮ್ ಸಂಗ್ ಶೋರೂಮ್ ಬಳಿ KA 01ML 8549 ಕ್ರಮ ಸಂಖ್ಯೆ ವೋಲ್ವೋ ಎಸ್ ಯುವಿ ಕಾರಿನ ಮಿರರ್ ಗೆ ಬೈಕಿನ ಕ್ಲಚ್ ಹ್ಯಾಂಡ್ಲ್ ತಾಗಿದೆ. ಕಾರಿನ ಚಾಲಕ ಕಣ್ಣು ಕಾಣಲ್ವೇನ್ರೋ ಎಂದು ಬೈದಿದ್ದಾನೆ. ಏನಾಯಿತು ಎಂದು ಬೈಕ್ ಚಲಾಯಿಸುತ್ತಿದ್ದ ಧನುಶ್ ನಿಲ್ಸಿದ್ದಾನೆ.
ಮಿಸ್ ಆಯ್ತು ಸಾರಿ ಎಂದು ಕೇಳಿದ ಧನುಶ್ ಬರುವಾಗ ಕಾರಿನ ಗ್ಲಾಜ್ ಗೆ ಗುದ್ದಿದ್ದಾನೆ. ಇಷ್ಟಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಚಾಲಕ ಕಾರಿಗೆ ಗುದ್ದುಹೋಗ್ತೀರಾ, ಇವತ್ತು ನಿಮ್ಮನ್ನ ಬಿಡಲ್ಲ ಎಂದು ಬೈಕ್ ನ್ನ ಚೇಸ್ ಮಾಡಿದ್ದಾರೆ. ಅಮೀರ್ ಅಹ್ಮದ್ ಬಳಿ ಕಾರು ತಾಗಿದಂತೆ ಮಾಡಿದಾಗ ಧನುಶ್ ಎಂಕೆಕೆ ರಸ್ತೆಗೆ ಹೊಡೆದಿದ್ದಾನೆ.
ಹೆಚ್ ಸಿದ್ದಯ್ಯ ವೃತ್ತದ ಬಳಿ ಹಂಪ್ಸ್ ಇದ್ದಕಾರಣ ಬೈಕ್ ನ್ನ ಧನುಶ್ ಸ್ಲೋ ಮಾಡಿದ್ದಾನೆ. ಆದರೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಧನುಶ್ ಬೈಕ್ ನಿಂದ ಹಾರಿ ಬಿದ್ದಿದ್ದಾನೆ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕಾರು ಪಲ್ಟಿಯಾಗಿದೆ. ಪ್ರಜ್ವಲ್ ಗೆ ತೀವ್ರವಾದ ಗಾಯವಾಗಿದೆ.
ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದು 17 ಗಂಟೆಗಳ ನಂತರ ತಡವಾಗಿ ದಾಖಲಾಗಿದೆ. ಕಾರ್ತಿಕ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.