ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದು, ಹಾಲು ಖರೀದಿ ದರವನ್ನು ಪ್ರತಿ ಕೆ.ಜಿ.ಗೆ ರೂ. 2.00 ಹೆಚ್ಚಿಸಿ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರರವರ ಅದ್ಯಕ್ಷತೆಯಲ್ಲಿ ಇಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.
ಬೇಸಿಗೆ ಹಂಗಾಮಿನಲ್ಲಿ ಹೈನುರಾಸುಗಳ ನಿರ್ವಹಣಾ ವೆಚ್ಚ ಅಧಿಕಾರವಾಗುವುದರಿಂದ ಉತ್ಪಾದನಾ ವೆಚ್ಚದ ಹೆಚ್ಚಳವಾಗಿ ಲಾಭಾಂಶ ಕಡಿಮೆ ಆಗುವುದರಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಇಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.
ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಎಫ್‌ಎಟಿ 4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಕೆ.ಜಿ.ಹಾಲಿಗೆ 32.09 ರೂ. ಪರಿಷ್ಕೃತ ದರ 34.18 ರೂ. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಎಫ್‌ಎಟಿ4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಪರಿಷ್ಕೃತ ದರ 32.22 ರೂ.ಪರಿಷ್ಕೃತ ದರು ದಿ: 01/02/2025 ರಿಂದ ದಿ:31/03/2025ರವರೆಗೆ ಜಾರಿಯಲ್ಲಿರುತ್ತದೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ.ಹೆಚ್.ಎನ್. ವಿದ್ಯಾಧರ, ಉಪಾಧ್ಯಕ್ಷರಾದ ಚೇತನ್ ಎಸ್ ನಾಡಿಗರ ರವರು, ನಿರ್ದೇಶಕರುಗಳಾದ ಆರ್.ಎಂ.ಮಂಜುನಾಥ ಗೌಡ, ಡಿ.ಆನಂದ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಜಿ.ಪಿ.ರೇವಣಸಿದ್ದಪ್ಪ, ಹೆಚ್.ಕೆ.ಬಸಪ್ಪ, ಹೆಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು,
ಜಿ.ಬಿ.ಶೇಖರಪ್ಪ, ಎಸ್. ಕುಮಾರ್, ನಾಗಭೂಷಣ (DRCS ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ) ಇವರ ಪ್ರತಿನಿಧಿ ರಾಜಶೇಖರ ಮೂರ್ತಿ.ಎಂ ನಿರ್ದೇಶಕರು (ಗುಣಭರವಸೆ) ಕ.ಹಾ.ಮ, ಡಾ॥ ಬಾಬುರತ್ನ ಉಪ ನಿರ್ದೇಶಕರು ಪ ಸಂ ಇವರ ಪ್ರತಿ ಡಾ॥ ವಿನಯ್‌ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶರಾದ ಎಸ್.ಜಿ.ಶೇಖರ್ ಇವರು ಉಪಸ್ಥಿತರಿದ್ದರು.