MP Raghavendra appealed to the Union Minister Shivraj Singh Chouhan who was present on the dais that it is not right that peanuts are the cause of cancer.
ಸುದ್ದಿಲೈವ್/ಶಿವಮೊಗ್ಗ
ಅಡಿಕೆ ಬೆಳೆ ಕ್ಯಾನ್ಸರ್ ಗೆ ಕಾರಣ ಎಂಬುದು ಸರಿಯಲ್ಲ ಎಂದು ಸಂಸದ ರಾಘವೇಂದ್ರ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಮನವಿ ಮಾಡಿದರು.
ಅವರು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಆಪ್ಸಕೋಸ್, ತೋಟಗಾರ್ಸ್ ಸಹಯೋಗದಲ್ಲಿ ಸಾಗರದ ಸಂತೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
2004 ರಲ್ಲಿ ಡಬ್ಲುಹೆಚ್ ಒ ಅಡಿಕೆ ಬೆಳೆಯನ್ನ ಕ್ಯಾನ್ಸರ್ ಗೆ ಕಾರಣ ಎಂದು ಹೇಳಿದೆ. ಈ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಅಡಿಕೆ ಹಾನಿಕಾರಕ ಎಂಬುದನ್ನ ತೆಗೆದುಹಾಕಬೇಕು ಎಂದು ಒತ್ತಾಯಿಸಿದ ಸಂಸದರು ಇದಕ್ಕೆ ವರದಿ ತಯಾರಿಸಲು ಹೊಸ ಸಮಿತಿಯ ತಂಡವನ್ನ ರಚಿಸಲು ಕೋರಿದರು.
2022 ರಲ್ಲಿ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನ ವರದಿಯನ್ನ ನೀಡಿತ್ತು. ಎಲೆಚುಕ್ಕಿ ರೋಗದ ರೈತರ ಬೆಳೆಗೆ ಪರಿಹಾರ ನೀಡಬೇಕು ಎಂಬುದು ವರದಿಯಾಗಿತ್ತು ಇದನ್ನ ಕೇಂದ್ರ ಸಚಿವರು ಪರಿಗಣಿಸಿ ರೈತರಿಗೆ ಸಹಾಯ ಮಾಡಬೇಕು. ಅಡಿಕೆ ತೇವಾಂಶ 7% ಇದ್ದರೆ ಮಾತ್ರ ಅಡಿಕೆಯನ್ನ ಸ್ವೀಕರಿಸಲಾಗುತ್ತಿದೆ. ಈ ತೇವಾಂಶವನ್ನ 10-12% ಗೆ ಏರಿಸಬೇಕು ಎಂದರು.
ಮೆಕ್ಕೆಜೋಳ ಸಂಶೋಧನಾ ಕೇಂದ್ರ ಆರಂಭಿಸಲು ಒಪ್ಪಿಗೆ ನೀಡಿದ್ದಕ್ಕೆ ಸ್ವಾಗತಿಸಿದ ಸಂಸದರು ಭತ್ತದ ಬೆಳೆಗೆ ಎಂಎಸ್ ಪಿ ನಿಗದಿ ಪಡಿಸಬೇಕು. ಎಫ್ ಬಿ ಒ ರಚನೆಗೆ ಒತ್ತು ನೀಡಬೇಕು. ಕಾಗೋಡು ತಿಮ್ಮಪ್ಪನವರಿಗೆ ಡಾಕ್ಟರೇಟ್ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಶ್ರಮಿಸೋಣ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸುಪ್ರೀಂ ಕೇಂದ್ರ ಮತ್ತು ರಾಜ್ಯ ಒಟ್ಟಿಗೆ ಬರಲು ತಿಳಿಸಿದೆ. ಇದನ್ನ ಗಮನಿಸಿದರೆ ಒಳ್ಳೆಯ ದಿನಗಳು ಬರುತ್ತಿದೆ. ಡಬ್ಲುಹೆಚ್ ಒ ಅಡಿಕೆಯನ್ನ ಮಾತ್ರ ಸಂಶೋಧನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಗೋಡಿಗೆ ಸನ್ಮಾನ
ಈ ವೇಳೆ ಮಾಜಿ ಸಚಿವ ಡಾಕ್ಟರೇಟ್ ಪದವಿ ಪಡೆದ ಕಾಗೋಡು ತಿಮ್ಮಪ್ಪನವರಿಗೆ ಸನ್ಮಾನಿಸಲಾಯಿತು. ಈಗಾಹಲ ದೇವರಾಜು ಅರಸು ಪ್ರಶಸ್ತಿ, ಕಾಯಕಯೋಗಿ ಪ್ರಶಸ್ತಿ ಲಭಿಸಿದ್ದು ಈಗ ಡಾಕ್ಟರೇಟ್ ಪದವಿ ಲಭಿಸಿದೆ.
ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸಿ
ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಅಡಿಕೆ ಬೆಳೆಗೆ ನೀರು ಬೇಕಿದೆ. ಅಡಿಕೆ ಬೆಳೆಗಾರರಿಗೆ ನೀರು ಒದಗಿಸಲು ಬಂಗಾರಪ್ಪನವರ ಶ್ರಮ ವಹಿಸಿದ್ದರು. 2006 ರಲ್ಲಿ ಅಡಿಕೆ ಬೆಳೆಯ ಬೆಲೆ ವ್ಯತ್ಯಾಸವಾಗುತ್ತಿತ್ತು. ಆಗ ಬಂಗಾರಪ್ಪನವರು ಕೇಂದ್ರದ ಮುಲಾಯಂ ಸಿಂಗ್ ಯಾದವ್ ಮೂಲಕ ನೋಯಿಡಾದಲ್ಲಿ ಸಭೆ ನಡೆಸಿ ಅದರ ಬೆಲೆಯಲ್ಲಿ 14 ಸಾವಿರ ರೂ. ಬೆಲೆ ಏರಿಸಿಕೊಟ್ಟಿದ್ದರು ಎಂದರು.
2014 ರಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸಲು ಭರವಸೆ ನೀಡಲಾಗಿತ್ತು. ಅದಕ್ಕೆ ರಾಜ್ಯ ಸರ್ಕಾರದಿಂದ ಏನು ಸಹಾಯ ಬೇಕು ಅದನ್ನಮಾಡುವೆ. 2002 ರಲ್ಲಿ ಕಾಗೋಡು ತಿಮ್ಮಪ್ಪ ಆರೋಗ್ಯ ಸಚಿವ cftri ವರದಿ ನೀಡಿದೆ ಅಡಿಕೆ ಹಾನಿಕಾರಕ ಅಲ್ಲ ಎಂದಿದೆ. ಅದನ್ನ ಕೇಂದ್ರ ಸಚಿವರು ಬಯಸಿದರೆ ವರದಿ ನೀಡಲು ಸಿದ್ದ ಎಂದರು.