ಸುದ್ದಿಲೈವ್/ಶಿವಮೊಗ್ಗ
2023 ಸೆ.24 ರಂದು ಮಾಚೇನಹಳ್ಳಿ ಇಂಡಸ್ಡ್ರೀಯಲ್ ಏರಿಯಾದಲ್ಲಿ ಕಂಬ ಹತ್ತಿ ವಿದ್ಯುತ್ ರಿಪೇರಿ ಮಾಡುತ್ತಿದ್ದ ವೇಳೆ ಪವರ್ ಮ್ಯಾನ್ ವಿದ್ಯುತ್ ಶಾಕ್ ನಿಂದ ಕಂಬದಲ್ಲೇ ಉರಿದು ಸತ್ತು ಹೋದ ಘಟನೆ ಈಗ ಎಫ್ಐಆರ್ ದಾಖಲಾಗಿದೆ. ಕಿರಣ್ ಅವರ ನಿರ್ಲಕ್ಷತನದಿಂದ ಸಾವಾಗಿದೆ ಎಂದು ದೂರು ದಾಖಲಾಗಿದೆ.
ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಚನ್ನಗಿರಿಯ ಕಿರಣ್ ಬಿ ಮತ್ತು ಸುನೀಲ್ ಹಾಡೋರ ಅವರು ಕಂಬ ಹತ್ತಿ ವಿದ್ಯುತ್ ರಿಪೇರಿ ಮಾಡುವಾಗ ಲೋಡ್ ಸೈಡ್ ಭಾಗದ ಅರ್ಥಿಂಗ್ ಬಂದ್ ಮಾಡಿದ್ದ ಕಿರಣ್ ನಂತರ ಕೆಲಸಕ್ಕೆ ಅಡ್ಡಿಯಾಗಲಿದೆ ಎಂದು ಲೋಡ್ ಸೈಡ್ ಅರ್ಥಿಂಗ್ ತೆಗೆದು ಕೆಲಸ ಆರಂಭಿಸಿದ್ದಾನೆ.
ಕಿರಣ್ ರವರು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವನಪ್ಪಿರುವುದಾಗಿ ದಿ: 24/09/2023 ರಂದು ಶಿವಮೊಗ್ಗ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಯು.ಡಿ.ಆರ್. ಆಗಿ ದೂರು ದಾಖಲಾಗುತ್ತು.
ಮಾಚೇನಹಳ್ಳಿ, ಇಂಡಸ್ಟ್ರಿಯಲ್ ಏರಿಯಾದ 1 ನೇ ತಿರುವಿನಲ್ಲಿರುವ 11 ಕೆ.ವಿ.ಎಫ್.-22 ವಿದ್ಯುತ್ ಮಾರ್ಗದ ಜೋಡಿ ಕಂಬದಲ್ಲಿ ಅಳವಡಿಸಿದ್ದ ಜಿ.ಓ.ಎಸ್.ನ ದುರಸ್ಥಿ ಕಾರ್ಯವನ್ನು ಮಾಡಲು ತೆರಳಿದ್ದರು. ದುರಸ್ತಿ ಕೆಲಸ ಮಾಡುವ ಮುನ್ನ ವಿದ್ಯುತ್ ಮಾರ್ಗದ ಮತ್ತು ಸಂಬಂಧಪಟ್ಟ ಇತರ ಎಲ್ಲಾ ವಿದ್ಯುತ್ ಮಾರ್ಗದ ಮುಕ್ತತೆಯನ್ನು ಸಹಾಯಕ ಇಂಜಿನಿಯರ್ ಇವರಿಂದ ಪಡೆದು ವಿದ್ಯುತ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಜೋಡಿ ಕಂಬದ ಎರಡೂ ಬದಿಗಳಲ್ಲಿನ ವಾಹಕಕ್ಕೆ ಅರ್ಥಿಂಗ್ ಮಾಡಿ, ಸುರಕ್ಷತಾ ಕ್ರಮ ತೆಗೆದುಕೊಂಡು ಬೆಳಗ್ಗೆ 11-00 ಗಂಟೆಗೆ ಜೋಡಿ ಕಂಬವನ್ನು ಹತ್ತಿದ್ದರು.
ಜಿ.ಓ.ಎಸ್. ದುರಸ್ತಿ ಕೆಲಸವನ್ನು ಕಿರಣ, ಬಿ ಹಾಗೂ ಸುನೀಲ್ ಹಾಡೋರ ಇವರು ಆರಂಭಿಸಿದಾಗ ಲೋಡ್ ಸೈಡ್ ಭಾಗದ ಅರ್ಥಿಂಗ್ ರಾಡ್ ನಿಂದ ಕೆಲಸ ಮಾಡಲು ಅಡ್ಡಿಯಾಗುತ್ತಿದೆ ಎಂದು ಲೋಡ್ ಸೈಡ್ ಭಾಗದ ಅರ್ಥಿಂಗ್ ನ್ನು ಕಿರಣನು ತೆಗೆದು ಪುನಃ ಕೆಲಸ ಆರಂಭಿಸಿದ್ದರಿಂದ ಕೆಲಸ ಆರಂಭಿಸಿದ ಕೆಲ ಸಮಯದ ನಂತರ ಲೋಡ್ ಸೈಡ್ ಭಾಗದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಲೋಡ್ ಸೈಡ್ ವಾಹಕದಿಂದ ಜಿ.ಓ.ಎಸ್.ಗೆ ಜಂಪ್ ಅಳವಡಿಸಲು ಪ್ರಯತ್ನಿಸುತ್ತಿದ್ದ ಕಿರಣ ನವರು ವಿದ್ಯುತ್ ಶಾಕ್ ಮೃತಪಟ್ಟಿದ್ದು ಕಿರಣ ರವರಿಗೆ ಸಹಾಯ ಮಾಡುತ್ತಿದ್ದ ಕಿರಿಯ ಪವರ್ ಮ್ಯಾನ್ ಸುನೀಲ್ ಹಾಡೋರ ರವರು ವಿದ್ಯುತ್ ಶಾಕ್ ನಿಂದ ಗಾಯಗೊಂಡಿದ್ದರು,
ಜೋಡಿ ವಿದ್ಯುತ್ ಕಂಬದ ಬಳಿ ಕೆಲಸ ಮಾಡುತ್ತಿರುವಾಗ ನಿರ್ಲಕ್ಷತನ ವಹಿಸಿ ಲೋಡ್ ಸೈಡ್ ಭಾಗದ ಆರ್ಥಿಂಗ್ ನ್ನು ತೆಗೆದು ಕೆಲಸ ಆರಂಭಿಸಿದ್ದರಿಂದ ವಿದ್ಯುತ್ ಶಾಕ್ ತಗುಲಿ ಕಿರಣ್, ಬಿ, ರವರು ಮೃತಪಟ್ಟಿದ್ದು, ಸುನೀಲ್ ಹಾಡೋರ ರವರು ಗಾಯಗೊಂಡಿರುತ್ತಾರೆಂದು ಕಿರಣ್ ಅವರ ಸಹೋದರ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.