As the President of Member Departmental Employees' Housing Co-operative Society. A.M.Shivamurthy is elected. |
ಸುದ್ದಿಲೈವ್/ಶಿವಮೊಗ್ಗ
ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಅ.ಮ. ಶಿವಮೂರ್ತಿ ಚುನಾಯಿತರಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶಿವಮೂರ್ತಿ, ಕೆ.ಜಿ. ಮಂಜುನಾಥ ಶರ್ಮಾ, ಹಾಗೂ ಟಿ. ಮಂಜಪ್ಪ ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಮಂಜಪ್ಪ ಹಾಗೂ ಶಿವಮೂರ್ತಿ ಸಮ ಸಂಖ್ಯೆಯ ಮತಗಳನ್ನು ಪಡೆದಿದ್ದರು. ಇದರಿಂದಾಗಿ ಚೀಟಿ ಮೂಲಕ ಆಯ್ಕೆ ನಡೆದಾಗ ಶಿವಮೂರ್ತಿ ಅವರು ಗೆಲವು ಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಇಲಾಖೆಯ ನಿಖಿಲ್ ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ 13 ನಿರ್ದೇಶಕ ಸ್ಥಾನಕ್ಕೆ ಇದೇ ತಿಂಗಳ 6ರಂದು ಚುನಾವಣೆ ನಡೆದಿತ್ತು. ಎಲ್ಲಾ 13 ಜನ ನಿರ್ದೇಶಕರೂ ಅವಿರೋಧವಾಗಿ ಆಯ್ಕೆ ಆಗಿದ್ದರು.