ಸುದ್ದಿಲೈವ್/ಶಿವಮೊಗ್ಗ
ಸಂಯುಕ್ತ ಕಿಸಾನ್ ಮೋರ್ಚಾ ಶಂಭುಗಡಿಯಲ್ಲಿ ಕೃಷಿ ಕಾಯ್ದೆಗೆ ಲಿಖಿತ ಭರವಸೆ ನೀಡಿರುವುದನ್ನ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ ರಾಜ್ಯ ರೈತ ಸಂಘ ಕರೆ ನೀಡಿತ್ತು.
ರಾಜ್ಯ ರೈತ ಸಂಘದ ಕರೆಯ ಹಿನ್ನಲೆಯಲ್ಲಿ ಇಂದು ಡಿಸಿ ಕಚೇರಿಯಲ್ಲಿ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ರೈತರ 3 ಕೃಷಿ ಕಾನೂನನ್ನ ವಾಪಾಸ್ ಪಡೆದು ಎಂಎಸ್ ಪಿಯನ್ನ ಕಾನೂನು ಬದ್ಧ ಜಾರಿಗೊಳಿಸಿ, ವಿದ್ಯುತ್ ನ್ನ ಖಾಸಗೀಕರಣಗೊಳಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿತ್ತು.
ಲಿಖಿತ ಭರವಸೆ ನೀಡಿ 2 ವರ್ಷ ಕಳೆದಿದೆ. ಎಂಎಸ್ ಪಿ ಜಾರಿಯಾಗಿಲ್ಲದ ಕಾರಣ ಕಳೆದ 8 ತಿಂಗಳಿಂದ ಹರಿಯಾಣದ ಶಂಭುಗಡಿಯಲ್ಲಿ ರೈತರು ಚಳುವಳಿ ನಡೆಸುತ್ತಿದೆ. ರೈತ ನಾಯ ಜಗಜೀತ್ ಸಿಂಗ್ ದಲೈವಾರ 38 ದಿನಗಳಿಂದ ಉಪವಾಸ ಕುಳಿತಿದ್ದಾರೆ. ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಸುಪ್ರೀಂ ಕೋರ್ಟ್ ಸಹ ಪಂಜಾಬ್ ಮತ್ತು ಕೇಂದ್ರ ಸರ್ಕಾರಕ್ಕೆ ದಲೈವರ ಜೀವ ಉಳಿಸಲು ಸೂಚಿಸಿತ್ತು. ಆದಾಗ್ಯೂ ಸರ್ಕಾರಗಳು ನಿರ್ಲಕ್ಷಿಸುವೆ ಎಂದು ಮನವಿಯಲ್ಲಿ ರೈತ ಸಂಘ ದೂರಿದೆ.
ಕೇಂದ್ರ ಸರ್ಕಾರ ಹಠಬಿಟ್ಟು ಕೃಷಿಗೆ ನೀಡಿರುವ ಲಿಖಿತ ಭರವಸೆ ಈಡೇರಿಸಬೇಕು. ಜೊತೆಗೆ ದಲೈವರ ಪ್ರಾಣ ಉಳಿಸಬೇಕೆಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಹಿಟ್ಟೂರು ರಾಜು, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು.