ಅಕ್ಷರ ಶಾಲೆ ಮಕ್ಕಳಿಂದ ಜಾಥಾ


ಸುದ್ದಿಲೈವ್/ಶಿವಮೊಗ್ಗ

ಸೈಬರ್ ಕ್ರೈಂ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ಅಕ್ಷರ ಶಾಲೆಯ ವಿದ್ಯಾರ್ಥಿಗಳಿಂದ ಜಾಥ ನಡೆಸಲಾಗಿದೆ. ನಗರದ ಹೊಳೆ ಬಸ್ ಸ್ಟಾಪ್ ನಿಂದ ಶಿವಮೊಗ್ಗ ಅಮೀರ್ ಅಹ್ಮದ್ ಸರ್ಕಲ್ ವರೆಗೂ ಶಾಲಾ ಮಕ್ಕಳ ಜಾಥ ನಡೆದಿದೆ. 

ಶಿವಮೊಗ್ಗ ನಗರದ ಅಕ್ಷರ ಶಾಲೆಯ ವಿದ್ಯಾರ್ಥಿಗಳಿಂದ ನಡೆದ  ಜಾಗೃತಿ ಜಾಥದಲ್ಲಿ ಶಿವಮೊಗ್ಗದ ಅಡಿಷನಲ್ ಎಸ್‌ಪಿಗಳಾದ ಅನಿಲ್ ಕುಮಾರ್ ಬೂಮರೆಡ್ಡಿ ಹಾಗೂ ಎಜೆ ಕಾರಿಯಪ್ಪ ಸಹ ಭಾಗಿಯಾಗಿ ಜಾಥಾಗೆ ಚಾಲನೆ ನೀಡಿದರು. 


Jatha was conducted by students of Akshara School to create social awareness about cybercrime. A procession of school children took place from the city's Hole Bus Stand to Shimoga Ameer Ahmed Circle.


ಸೈಬರ್ ವಂಚಕರಿಂದ ಆದಷ್ಟು ದೂರ ಇರುವಂತೆ, ಸೈಬರ್ ಪ್ರಕರಣಗಳು ಶಿವಮೊಗ್ಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಆನ್ ಲೈನ್ ವಂಚನೆ, ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಅರಿವು ಮೂಡಿಸಲಾಯಿತು. 

ಮೊದಲಿಗೆ ಮಾತನಾಡಿದ ಅಡಿಷನಲ್ ಎಸ್ಪಿ ಭೂಮರೆಡ್ಡಿ ಮತ್ತು ಕಾರ್ಯಯಪ್ಪ, ಮಕ್ಕಳಲ್ಲಿ ಆನ್ ಲೈನ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿದರೆ ಎಚ್ಚರಿಕೆಯಿಂದ ಇರಲು ಸಾಧ್ಯ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಅಗತ್ಯವಿದೆ ಎಂದರು.  

ಮುಂದಿನ ದಿನಗಳಲ್ಲಿ ಈ ಯುವ ಮನಸುಗಳಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಿದರೆ ಮುಂಬರುವ ದಿನಗಳಲ್ಲಿ ಸೈಬರ್ ಪ್ರಕರಣಗಳ ಕಡಿಮೆ ಆಗಲಿದೆ. ಪ್ರತಿನಿತ್ಯ ಈಗ ದಿನ ಬೆಳಗಾದರೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತದೆ. 

ಅದನ್ನ ತಡೆಗಟ್ಟಲೆ ಬೇಕಾಗಿದೆ ಎಂದು ಅಡಿಷನಲ್ ಎಸ್ ಪಿಗಳು ತಿಳಿಸಿದರು. ಸೈಬರ್ ಕ್ರೈಮ್ ಗೆ ಒಳಗಾದವರು 1930 ಗೆ ಕರೆ ಮಾಡುವಂತೆ, ಸ್ಪ್ಯಾಮಿಂಗ್ ಕರೆಗಳಿಂದ ದೂರ ಇರುವ ಕುರಿತು ಶಾಲಾ ಮಕ್ಕಳು ಪ್ಲಕಾರ್ಡ್ ಹಿಡಿದು ಭಾಗಿಯಾಗಿದ್ದರು. 

ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ, ಕೋಟೆ ಪಿಐ ಹರೀಶ್ ಪಟೇಲ್, ಪಿಎಸ್ಐ ನವೀನ್ ಕುಮಾರ್ ಮಠಪತಿ, ಶಾಲಾ ಶಿಕ್ಷಕರು, ಪೊಲೀಸ್ ಸಿಬ್ವಂದಿಗಳು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close