ಡಿವೈಎಸ್ಪಿ, ಪಿಐಗಳ ವರ್ಗಾವಣೆ

Transfer of DySP, Police Inspector across the state. Accordingly, two DySPs and two police inspectors of Shimoga district have been transferred and one PI has been promoted from PSI.


ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಡಿವೈಎಸ್ಪಿ, ಪೊಲಿಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಡಿವೈಎಸ್ಪಿಗಳು, ಇಬ್ಬರು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾದರೆ  ಒಬ್ಬರಿಗೆ ಪಿಎಸ್ಐ ನಿಂದ ಪಿಐಗೆ ಬಡ್ತಿ ದೊರೆತಿದೆ. 

ತೀರ್ಥಹಳ್ಳಿಯಲ್ಲಿ ಇಬ್ಬರು ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಡಿವೈಎಸ್ಪಿ ಗಜಾನನ ಸುತಾರ ಹಾಗೂ ಇನ್ ಸ್ಪೆಕ್ಟರ್ ಅಶ್ವಥ್ ಗೌಡರನ್ನ ವರ್ಗಾಯಿಸಿ ಆದೇಶಿಸಿದೆ. ಡಿವೈಎಸ್ಪಿ ಗಜಾನನ ವಾಮನ ಸುತಾರರನ್ನ ಬಾಗಲಕೋಟೆಗೆ ವರ್ಗಾಯಿಸಲಾಗಿದ್ದರೆ.   ಇನ್ಸೆಕ್ಟ‌ರ್ ಅಶ್ವಥ್ ಗೌಡರನ್ನ ಬೆಂಗಳೂರಿನ ಐಜಿ ಕಚೇರಿಗೆ ವರ್ಗಾಯಿಸಲಾಗಿದೆ. 

ಇನ್ನು ತೀರ್ಥಹಳ್ಳಿಗೆ ಇನ್ ಸ್ಪೆಕ್ಟರ್ ಆಗಿ ಇಮ್ರಾನ್ ಬೇಗ್ ಎಂಬುವರು ವರ್ಗಾಯಿಸಲಾಗಿದೆ. ಶಿವಮೊಗ್ಗದಲ್ಲಿ ಡಿವೈಎಸ್ಪಿಯಾಗಿರುವ ಸುರೇಶ್ ರವರಿಗೆ ವರ್ಗಾವಣೆಯಾಗಿದೆ. ಇವರ ಜಾಗಕ್ಕೆ ರಾಜ್ಯ ಗುಪ್ತವಾರ್ತೆಯಲ್ಲಿದ್ದ ಸಂಜೀವ್ ಕುಮಾರ್ ತಿರ‌್ಲುಕ ಅವರು ವರ್ಗಾವಣೆಯಾಗಿದ್ದಾರೆ. 

ಇನ್ನು ತುಂಗನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಅವರು ಇನ್ ಸ್ಪೆಕ್ಟರ್ ಆಗಿ ಬಡ್ತಿಪಡೆದಿದ್ದಾರೆ. ಲೋಕಾಯುಕ್ತದಲ್ಲಿ  ಇನ್ ಸ್ಪೆಕ್ಟರ್ ಆಗಿ ಬಡ್ತಿಪಡೆದು ವರ್ಗಗೊಂಡಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಪುಲ್ಲಯ್ಯರವನ್ನ ಸಾಗರ ಪೊಲೀಸ್ ಠಾಣೆಯ ಸಿಪಿಐ ಆಗಿ ವರ್ಗವಾಗಿದ್ದಾರೆ. 

ಶಿವಮೊಗ್ಗ ಜಯನಗರ, ಗ್ರಾಮಾಂತರದಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸಿ ಚಿಕ್ಕಮಗಳೂರಿನ ಡಿಎಸ್ಪಿ ಆಗಿ ವರ್ಗವಾಗಿದ್ದ ಅಭಯ್ ಪ್ರಕಾಶ್ ಸೋಮನಾಳ್ ಚಿಕ್ಕಮಗಳೂರಿನ ಟೌನ್ ಠಾಣೆಯ ಪಿಐ ಆಗಿ ವರ್ಗವಾಗಿದ್ದಾರೆ.  ಒಟ್ಟು 41 ಪಿಐಗಳು ಮತ್ತು 11 ಜನ ಡಿವೈಎಸ್ಪಿಗಳ ವರ್ಗಾವಣೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close