ಸುದ್ದಿಲೈವ್/ಶಿವಮೊಗ್ಗ
ಅಧಿಕಾರವಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸದೇ ಹರತಾಳು ಹಾಲಪ್ಪ ಇಷ್ಟು ದಿನ ಏನು ಸಗಣಿ ತಿಂತಾ ಇದ್ದರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಸಂಸದ ರಾಘವೇಂದ್ರ ಕಾರಣ ಎಂಬ ಮಾಜಿ ಸಚಿವ ಹರತಾಳು ಹಾಲಪ್ಪ ಕಾರಣ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಅವರದ್ದೇ ಸರ್ಕಾರವಿದ್ದಾಗ ಬಗೆಹರಿಸಬಹುದಿತ್ತಲ್ಲ?.ಹೊಸನಗರದಲ್ಸಮಸ್ಯೆ ಬಗೆಹರಿದಿದೆ ಎಂದು ಯಾರು ಹೇಳಿದ್ದಾರೆ.ಸುಪ್ರೀಂ ಕೋರ್ಟ್ ನಲ್ಲಿ ಎರಡು ಮೂರು ವಾರಗಳ ನಂತರ ವಿಚಾರಣಾ ದಿನಾಂಕ ಕೊಟ್ಟಿದೆ.ಕೇಂದ್ರ ಸಚಿವರು ಮಧು ಬಂಗಾರಪ್ಪ ಪತ್ರ ಬರೆದಿದ್ದಾರೆ ಎಂದು ಉಲ್ಲೇಖ ಮಾಡಿದ್ದು ಅವರು ಸಹಕಾರ ನೀಡುವುದಾಗಿ ಹೇಳಿದ್ದಾರೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅನ್ಯಾಯವಾಗಿದ್ದು ಸರಿಪಡಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದರು.
ಶಾಸಕ ಚೆನ್ನಿ ಬೇಸರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಶಾಸಕ ಚನ್ನಬಸಪ್ಪರಿಗೆ ಅವಸರದಲ್ಲಿ ಗೋವಿಂದಾಪುರದ ಆಶ್ರಯ ಮನೆಗಳ ಉದ್ಘಾಟನೆ ಆಗಬೇಕಿತ್ತು.ಆದರೆ ಅದು ಹಾಗೇ ಆಗುವುದಿಲ್ಲ.ಅಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟನೆ ಮಾಡಿದರೆ ನನಗೂ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ.ಮನೆ ಗೃಹಪ್ರವೇಶ ಮಾಡಿ ನೀರಿಲ್ಲ ಕರೆಂಟ್ ಇಲ್ಲ ಎಂದರೆ ಅದು ಗೃಹಪ್ರವೇಶ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದಲ್ಲಿ ಶಾಸಕ ಚನ್ನಬಸಪ್ಪ ಹೇಳಿದಂತೆ ಮಾಡಲಾಗುವುದಿಲ್ಲ.ನಾನು ಚನ್ನಬಸಪ್ಪ ಸ್ನೇಹಿತರು ಅವಾಗವಾಗ ಹಾಗೆ ತೋರಿಸಿಕೊಳ್ಳುತ್ತಾರೆ.ಆದಷ್ಟು ಬೇಗ ಅನುದಾನ ತಂದು ಮನೆಗಳನ್ನು ಪೂರ್ಣಗೊಳಿಸುವುದು ನನ್ನ ಕರ್ತವ್ಯ.ಪುಕ್ಸಟ್ಟೆ ಭಾಷಣ ಮಾಡಿದ ತಪ್ಪಾಗುತ್ತದೆ.ಸಚಿವ ಜಮೀರ್ ಅಹ್ಮದ್ ರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಸಚಿವರಿಗೆ ಉದ್ಘಾಟಿಸಲು ಆಹ್ವಾನ ನೀಡುವುದು ಶಾಸಕರ ಕರ್ತವ್ಯ.ಅಪೂರ್ಣಗೊಂಡ ಕಾಮಗಾರಿ ಉದ್ಘಾಟಿಸಲು ನನಗಂತೂ ಇಷ್ಟ ಇಲ್ಲ.ಒಂದೊಮ್ಮೆ ಉದ್ಘಾಟಿಸಿದರೆ ಮಾಧ್ಯಮದವರು ಸಚಿವರಾಗಿ ನೀವೇನು ಮಾಡುತ್ತೀರಾ ಎಂದು ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದರು.
ಮೈಕ್ರೊ ಫೈನಾನ್ಸ್ ಪ್ರಕರಣ ಕೇವಲ ನಮ್ಮ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ ಇದು ಇಡೀ ರಾಜ್ಯಕ್ಕೆ ವ್ಯಾಪಿಸಿದ ಪ್ರಕರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಮೈಕ್ರೊ ಫೈನಾನ್ಸ್ ನಿಂದ ಕಿರುಕುಳಕ್ಕೊಳಗಾದ ಸಂತ್ರಸ್ತರ ಬೆನ್ನಿಗೆ ತಮ್ಮ ಸರ್ಕಾರ ಇದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲೂ ಈ ಕುರಿತ ಕೆಲ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಬಂದಿದೆ. ಅವುಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲೂ ಈ ಕುರಿತ ಕೆಲ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಬಂದಿದೆ. ಅವುಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.