ಸುದ್ದಿಲೈವ್/ಶಿವಮೊಗ್ಗ
ಎಲ್ಲಾ ಬಣದ ಸದಸ್ಯರನ್ನ ಒಳಗೊಂಡ ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಬದಲಾವಣೆಗೆ ಬಿಜೆಪಿ ಹೈಕಮ್ಯಾಂಡ್ ಸೂಚಿಸಿದೆ. ವಿಜೇಂದ್ರ ಅವರನ್ನ ಪಕ್ಷದ ಅಧ್ಯಕ್ಷರಾಗಿ ಮುಂದು ವರೆಯಲಿದ್ದು ಪದಾಧಿಕಾರಿಗಳ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.
ಇದರಿಂದ ರಾಜ್ಯ ಬಿಜೆಪಿಯ ಬಣಬಡಿದಾಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈಮಾಂಡ್ ಗೆ ಪುರುಸೊತ್ತು ಸಿಕ್ಕಿದಂತೆ ಕಂಡುಬಂದಿದೆ. ಬಿಜೆಪಿಯ ಒಳಜಗಳ ಈ ಬದಲಾವಣೆಯಿಂದ ತಣ್ಣಗಾಗುತ್ತಾ ಅಥವಾ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜೆಂದ್ರ ಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ, ಉಪಾಧ್ಯಕ್ಷರ ಬದಲಾವಣೆ ಗೆ ಈಗಾಗಲೆ ಸಿದ್ದತೆ ಮಾಡಿಕೊಂಡಿರುವುದಾಗಿ ಮಾಧ್ಯಮವೊಂದು ತಿಳಿಸಿದೆ. ಇದರಿಂದ ಬಿಜೆಪಿಯಲ್ಲಿ ಶಾಸಕ ಯತ್ನಾಳ್ ತಂಡದ ಮೇಲುಗೈ ಸಾಧಿಸಿದೆ.
ಯತ್ನಾಳ್ ಅವರ ಬಿಜೆಪಿ ಹೈಕಮಾಂಡ್ ಮೀಟಿಂಗ್ ನಡೆಸಿದ್ದರು. ಯತ್ನಾಳ್ ಅವರ ಬೇಡಿಕೆ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಆದರೆ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನ ಉಳಿಸಿಕೊಂಡು ತಟಸ್ಥ ಬಣ, ಬಂಡಾಯದ ಬಣ ಹಾಗೂ ವಿಜೇಂದ್ರ ಬಣದ ಮೂರು ಬಣಗಳ ಸದಸ್ಯರನ್ನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು.
ಯತ್ನಾಳ್-ವಿಜೇಂದ್ರ ಬಣಗಳ ನಡುವೆ ತೀವ್ರ ಆರೋಪ, ಪ್ರತ್ಯಾರೋಪ ನಡೆದಿತ್ತು. ವಕ್ಫ್ ಹೋರಾಟ ಇಬ್ವರು ನಾಯಕರ ಬಂಡಾಯವನ್ನ ಬಟಾಬಯಲು ಮಾಡಿತ್ತು. ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಎರಡು ತಿಂಗಳು ಕಳೆದಿದೆ. ಈ ಸಣ್ಣ ಅವಧಿಯಲ್ಲಿ ಪದಾಧಿಕಾರಿಗಳ ಆಯ್ಕೆಗೆ ಹೈಕಮಾಂಡ್ ಸೂಚನೆ ನೀಡಿದೆ.
ಈ ಬದಲಾವಣೆ ಸಂಕ್ರಾಂತಿಯ ನಂತರ ಪುನರ್ ರಚನೆ ಆಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೆ ಬಿ.ಎಲ್ ಸಂತೋಷ್ ರವರಿಂದ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿದೆ. 7 ಜನ ಸಂಸದರು ಮತ್ತು 40 ಶಾಸಕರು ಸಹ ಭಾಗಿಯಾಗಿದ್ದಾರೆ. ಭೀಮ ಸಂಗಮ ಅಭಿಯಾನ ನಡೆಸಲು ಸೂಚಿಸಿದ್ದಾರೆ. ದಲಿತ ಸಮುದಾಯವನ್ನ ಮನೆಗೆ ಕರೆಯಿಸಿ ಸಂವಿಧಾನ ಪೀಠಿಕೆ ಹೇಳುವುದು ಈ ಅಭಿಯಾನ ನಡೆಯಲಿದೆ. ಇದು ಜ.25 ರ ನಂತರ ಬೂತ್ ಮಟ್ಟದಲ್ಲಿ ನಡೆಯಲಿದೆ.