An incident where a wage laborer committed suicide due to debt took place in Hiredagodu village of Anavatti Hobli in Sorab taluk.
ಸುದ್ದಿಲೈವ್/ಆನವಟ್ಟಿ
ಸಾಲಕ್ಕೆ ಹೆದರಿ ಕೂಲಿಕಾರ್ಮಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ನಡೆದಿರುವ ಘಟನೆ ಸೊರಬ ತಾಲೂಕು ಆನವಟ್ಟಿ ಹೋಬಳಿಯ ಹಿರೇಇಡಗೋಡು ಗ್ರಾಮದಲ್ಲಿ ನಡೆದಿದೆ.
ಮಹೇಶ ಎಂಬ ಸುಮಾರು 50 ವರ್ಷದ ವ್ಯಕ್ತಿ ಕೈಗಡ ಮತ್ತು ಇತರೆ ಸಾಲಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ವೀಳ್ಯದಲೆ ಬೆಳೆದು ಹಳ್ಳಿಗಳ ಮೇಲೆ ಎಲೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಹೇಶ್ ಸುಮಾರು 4-5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಪ್ರತ್ಯೇಕವಾಗಿ 9 ಸಾವಿರ ಸಾಲಪಡೆದ ವ್ಯಕ್ತಿಯಿಂದ ಎರಡು ಮೂರು ದಿನಗಳ ಹಿಂದೆ ಬೈಕ್ ಹಿಡಿದು ಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಬೈಕ್ ಕೊಡದ ಹಿನ್ನಲೆಯಲ್ಲಿ ಮಹೇಶ್ ಅವರ ಜೀವನಕ್ಕೆ ತೊಂದರೆ ಉಂಟಾಗಿತ್ತು. ಕಾರಣ ಮಹೇಶ್ ವಿಷ ತೆಗೆದುಕೊಂಡಿದ್ದರು. ನಿನ್ನೆ ಮಹೇಶ್ ಅವರನ್ನ ಮೆಗ್ಗಾನ್ ಗೆ ಕರೆತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹೇಶ್ ಸಾವು ಕಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಮಧು ಬಂಗಾರಪ್ಪ, ಈ ಮೈಕ್ರೋ ಫೈನಾನ್ಸ್ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದೇವೆ. ಇಂದು ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆದು ಹೊಸ ಕಾನೂನೇ ಜಾರಿಗೆ ಬರಯವ ನಿರೀಕ್ಷೆ ಇದೆ. ಸೊರಬ ತಾಲೂಕಿನಲ್ಲಿ ಕೂಲಿ ಕಾರ್ಮಿಕನೋರ್ವನ ಆತ್ಮಹತ್ಯೆ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.