ಚುನಾವಣೆ ಮುಂದುಹಾಕಿ

M.R. Prakash announced that he had previously held a press conference regarding the election of Shimoga Housing Cooperative Society and had raised objections about the voter list, and the voters had appreciated it.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಹೌಸಿಂಗ್ ಕೋಆಪರೇಟಿವ್ ಸೊಸೈಟಿಯ ಚುನಾವಣೆಯ ಬಗ್ಗೆ ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಿಸಿದ್ದಕ್ಕೆ, ಮತದಾರರು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಎಂ.ಆರ್ ಪ್ರಕಾಶ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸತ್ತ ಮತದಾರರು, ಊರು ಬಿಟ್ಟವರು,  ಮತದಾರರ ಪಟ್ಟಿಯಲ್ಲಿ ಹೆಸರಿಸಿದ್ದು, ಹಾಗಾಗಿ ಅಕ್ರಮ ಮತದಾನ ನಡೆಯದಂತೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಕಳೆದ ಬಾರಿ 780 ಮತದಾರರಿದ್ದರು‌, ಇದು 3000 ಕ್ಕೆ ಏರಿದ ಪರಿಣಾಮ ಸತ್ತವರ ಸಂಖ್ಯೆ ಹೆಚ್ಚಿದೆ, 20 ವರ್ಷದಿಂದ ಮೀಟಿಂಗ್ ಬಂದಿಲ್ಲ. ಹಾಗಾಗಿ ಸೂಕ್ತಕ್ರಮ ಕೈಗೊಳ್ಳಬೇಕೆಂದರು. 

ಉಮಾ ಶಂಕರ್ ಉಪಾಧ್ಯ ಮಾತನಾಡಿ, ಎವಿಶ್ರೀನಿವಾಸ್ (ಮಿಂಚು ಶ್ರೀನಿವಾಸ್) ಮಗನ ಜಾಗದಲ್ಲಿ ಬಾಲಯ್ಯನ ಹೆಸರು ಇದೆ. ಇದು ಅವರ ಮಗನ ಹೆಸರೇ ಅಲ್ಲ. ಪತ್ರಕರ್ತ ದಿ. ಕಾಮರೆಡ್ ಲಿಂಗಪ್ಪನವರ ಹೆಸರಿದೆ. ಅವರು ಈಗ ಇಲ್ಲ. ಮಿಂಚು ಶ್ರೀನಿವಾಸ ಅವರ ಮಗನ ಶೇರು 69-31 ಶೇರ್ ನಂಬರ್ ಇದೆ. ನಮ್ಮ ಎದುರಾಳಿಗಳು ಅಕ್ರಮ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಮತದಾರರಿಗೆ ಹಣದ ಆಮಿಷ ಹಂಚಲು ಸಿದ್ದರಾಗಿದ್ದಾರೆ ಎಂದು ದೂರಿದರು. 

ನಮ್ಮನ್ನ ಗೆಲ್ಲಿಸಿದ್ದಲ್ಲಿ 3000 ಮನೆಗಳನ್ನ ಕೊಡಲು ಬದ್ದವಾಗಿದೆ. ಸತ್ತವರು ಊರು ಬಿಟ್ಟವರು ವಿದೇಶದಲ್ಲಿ ಇರುವರನ್ನ ತೆಗೆದು ಹೊಸ ಸದಸ್ಯತ್ವ ನೀಡುವಂತೆ ಭರವಸೆ ನೀಡಿದರು. ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯಲ್ಲಿರುವ ಹಲವು ನಿರ್ದೇಶಕರು ಸಿಟಿ ಕೊಆಪರೇಟಿವ್ ನಲ್ಲಿ ನಿರ್ದೇಶಕರಾಗಿದ್ದಾರೆ. ಈ ಬ್ಯಾಂಕಿನ ಯಾವುದೇ ಸಿಬ್ಬಂದಿಗಳನ್ನ ಚುನಾವಣೆ ಕೆಲಸಕ್ಕೆ ನಿಯೋಜಿಸಬಾರದು. 

ನಿರ್ಬಂದಿತ ಬ್ಯಾರಿಕೇಡ್ ಗಳನ್ನ ಅಳವಡಿಸಿ ಸೂಕ್ತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಚುನಾವಣೆಯ ವೇಳೆ ಮತ್ತ ಹಂಚಲುವಾಗ ಸಿಸಿಟಿವಿ ಫೂಟೇಜ್ ಹಾಕಬೇಕು. ಹೀಗೆ  8 ಬೇಡಿಕೆಗಳನ್ನ ಈಡೇರಿಸಲು ಸೂಚಿಸಿದರು. 

ಮಾಜಿ ಶಾಸಕ ಕೆಜಿ ಕುಮಾರ ಸ್ವಾಮಿ ಮಾತನಾಡಿ ಚುನಾವಣೆಯನ್ನ ಮುಂದೂಡಿ ಹೊಸ ಮತದಾರರ ಪಟ್ಟಿಯನ್ನ ಹೊರತರಬೇಕು ಎಂದು ಚುನಾವಣೆ ಅಧಿಕಾರಿಗಳಿಗೆ ಮತ್ತು ಡಿಸಿಗೆ ಮನವಿ ನೀಡಲಾಗುವುದು. ಚುನಾವಣೆ ಸರಿಯಾಗಿ ನಡೆಯಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.  

ಸತ್ತವರು, ಊರು ಬಿಟ್ಟವರು ಹೆಸರಿನಲ್ಲಿ ಫ್ರಾಕ್ಸಿ ಮತದಾನವಾಗದಂತೆ ತಡೆಯಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close