ಭಾಷೆ ಬೆಂಕಿ ಇದ್ದಹಾಗೆ, ಮುಟ್ಟಲಿಕ್ಕೆ ಹೋಗಬಾರದು, ದ್ವಿಭಾಷ ಸೂತ್ರ ಅಳವಡಿಕೆ ಅಗತ್ಯ-ಡಾ.ಪುರುಷೋತ್ತಮ ಬಿಳಿಮಲೆ

There was a discussion about the implementation of Kannada for the last 30 years. A report will now be submitted to the government after receiving information from the division, district and village levels. The President of Kannada Development Authority, Dr. Purushottama Bilidmale, has established that the tour has started from Bidar.

ಸುದ್ದಿಲೈವ್/ಶಿವಮೊಗ್ಗ

ಕಳೆದ 30 ವರ್ಷದಿಂದ ಕನ್ನಡ ಅನುಷ್ಠಾನದ ಬಗ್ಗೆ ಚರ್ಚೆ ನಡೆದಿತ್ತು. ಈ ಕುರಿತು ಈಗ ವಿಭಾಗ, ಜಿಲ್ಲಾಮಟ್ಟ ಮತ್ತು ಗ್ರಾಮಗಳಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬೀದರ್ ನಿಂದ ನಾವು ಪ್ರವಾಸ ಆರಂಭಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಅನುಷ್ಠಾನಕ್ಕೆ ಇಂದು ಶಿವಮೊಗ್ಗಕ್ಕೆ ಬರಲಾಗಿದೆ. ರಾಷ್ಟಕವಿ, ಸಮಾಜದ ಧುರೀಣರು ಈ ಪ್ರದೇಶದಿಂದ ಬಂದಿದ್ದಾರೆ. ಈ ಹಿನ್ನಲೆ ಯಲ್ಲಿ ಎಲ್ಲಿ ಕನ್ನಡ ವಿಫಲವಾಗಿದೆ ಎಂದು ನೋಡಲು ಬಂದಿದ್ದೇವೆ. ಬೆಂಗಳೂರಿನಲ್ಲಿ 30 ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಹೊರ ರಾಜ್ಯದವರಿಗೆ ಕನ್ನಡ ಕಲಿಕೆ ಹೊಸ ಪಠ್ಯಗಳು ಬೇಕಿದೆ ಎಂದರು.

ಶಿವಮೊಗ್ಗದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಭಾಗಿಯಾದ ಅನೇಕ ಅಧಿಕಾರಿಗಳು ಕನ್ನಡ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ ಎಂದು ಪರೋಕ್ಷವಾಗಿ ಕೇಳಿದ ಬಿಳಿಮಲೆ ಶಿವಮೊಗ್ಗದಲ್ಲಿ ಸರ್ಕಾರದ ಆದೇಶದಂತೆ ಶೇ.66 ರಷ್ಟು ಕನ್ನಡ ಅನುಷ್ಠಾನಕ್ಜೆ ಸರ್ಕಾರ ಆದೇಶ ಹೊರಡಿಸಿದೆ. ನಾಮಫಲಕದಲ್ಲಿ ಆದೇಶದಷ್ಟು ಕಾಣುತ್ತಿಲ್ಲ. ಇನ್ನೊಂದು ವರ್ಷಲ್ಲಿ ಕನ್ನಡ ನಾಮಫಲಕ ಬಿದ್ದರೆ ಅನುಷ್ಠಾನ ಯಶಸ್ವಿಯಾಗಲಿದೆ ಎಂದರು.

ಕೈಗಾರಿಕೆ ಕ್ಷೇತ್ರಗಳಲ್ಲಿ ಇಲ್ಲಿಯ ನೀರು, ಭೂಮಿಗಳು ಬೇಕಿದೆ. ಭಾಷೆ ಬೇಡವಾಗಿದೆ. ಗ್ರೂಪ್ ಸಿ ಮತ್ತು ಡಿಯಲ್ಲಿ ಕನ್ನಡಿಗರಿಗೆ ನೀಡಲಾಗುತ್ತಿದೆಯೋ ಎಂಬ ಚರ್ಚೆ ಮಾಡಿದಾಗ ಅದು ಅನುಷ್ಠಾನವಾಗಿಲ್ಲ. ಅನೇಕ ಹೋಟೆಲ್ ಗಳಲ್ಲಿ ಕನ್ನಡಿಗರ ಹೊರತಾಗಿ ಇದ್ದಾರೆ. ಸಂವಿಧಾನದ ಪ್ರಕಾರ ತಪ್ಪಲ್ಲ. ಆದರೆ ಸ್ಥಳೀಯ ಭಾಷೆ ಅನ್ಯ ಭಾಷಿಗರ ಹಾವಳಿಯಲ್ಲಿ ಕುಸಿಯದಂತೆ ಕಾಯಬೇಕಿದೆ. ಇಲ್ಲಿನ ಸಂಖ್ಯೆ ಮತ್ತು ಕನ್ನಡಿಗರು ಎಷ್ಟು ಇರುವಂತೆ ಮಾಡುವುದು ಅನುವಾರ್ಯವಾಗಿದೆ ಎಂದರು. 

ಸರೋಜಿನಿ ಮಹಿಷಿಯ ವರದಿಯಂತೆ ಖಾಸಗಿಯವರ ಕನ್ನಡಿಗರನ್ನ ಹೊರಗುತ್ತಿಗೆ ನೇಮಕ ಮಾಡಬೇಕಿದೆ. ಇದು ಸವಾಲು ಇದೆ. ಹೊರಗುತ್ತಿಗೆ, ಅದರ ಕನ್ನಡ ಸಂಖ್ಯೆ ಬಗ್ಗೆ ಚರ್ಚೆಯಾಗಬೇಕಿದೆ. ಸಾಮಾಜಿಕ ಸಾಮರಸ್ಯ ಕೆಡುವುತ್ತಿರುವ ಕ್ಷೇತ್ರ ಬ್ಯಾಂಕಿನ ಕ್ಷೇತ್ರವಾಗಿದೆ. ಪ್ರಾಂತೀಯ ಹುದ್ದೆ ನೇಮಕಾತಿ ಇಲ್ಲವಾದ್ದರಿಂದ ಇದು ರಾಷ್ಟ್ರೀಕೃತವಾದ ಕಾರಣ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರಾದೇಶಿಕ ಬೋರ್ಡ್ ನ್ನ ಪುನರ್ ಪರಿಶೀಲಿಸಬೇಕಿದೆ.

ಬ್ಯಾಂಕಿನಲ್ಲಿ ಕನ್ನಡಿಗರು ಬೇಕು ಎಂಬುದಲ್ಲ ಸ್ಥಳೀಯರಿರಬೇಕು ಎಂಬುದಾಗಿದ್ದು ಸಚಿವ  ಧರ್ಮೇಂದ್ರ ಪ್ರಸಾದ್, ಹೆಚ್ ಡಿದೇವೇಗೌಡ, ಹಣಕಾಸು ಸಚಿವೆ ನಿರ್ಮಲಸೀತಾರಾಮ್, ಕುಮಾರ್ ಸ್ವಾಮಿ ಅವರ ಜೊತೆ ಮಾತನಾಡಿಲಾಗಿದ್ದು ಅದರ ಬಗ್ಗೆ ಒಪ್ಪಿದ್ದಾರೆ. 

ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಸ್ಥಳೀಯ ಊರಿನ ಹೆಸರು ಬರೆಯುವುದು ಸಹ ತಪ್ಪಾಗುತ್ತಿದೆ.ಬೋರ್ಡ್ ಬತೆಯುವ ಪೇಂಟರ್ ಗಳು ಕನ್ನಡಿಗರು ಇಲ್ಲದಿರುವುದು ಶೋಚನೀಯ. ಕನ್ನಡ ಮನಸ್ಥಿತಯಲ್ಲಿ ಬದಲಾಗಬೇಲಿದೆ. ಸರ್ಕಾರಿ ಆದೇಶಗಳು 3000 ಆದೇಶವಿದೆ. ಆದರೆ ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ ಎಂದರು. 

ಅನೇಕ ವರ್ಷಗಳಿಂದ ಸಹ್ಯಾದ್ರಿ ಉತ್ಸವ ನಡೆದಿಲ್ಲ. ಡಿಸಿಗೆ ಮನವಿ ಕಳುಹಿಸಲು ಸೂಚಿಸಲಾಗುತ್ತದೆ. ಸ್ಥಳೀಯ ಉತ್ಸವಗಳು ಸಂಭ್ರಮಿಸದಿದ್ದರೆ  ಹೃದಯ ಭಾಷೆಯಾಗದು. ಮನವಿ ಸಲ್ಲಿಸಿದರೆ ಮುಂದಿನ ವರ್ಷದಿಂದ ಆಚರಣೆಯಾಗುವಂತೆ ಪ್ರಯತ್ನಿಸಲಾಗುವುದು ಎಂದರು. 

ಶಿವಮೊಗ್ಗವನ್ನ ಕನ್ನಡ ಚಟುವಟಿಕೆಗಳ ಮುಖ್ಯಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಜೆಎನ್ ಯುನಲ್ಲಿ ಜೂನ್ ನಿಂದ ಕನ್ಬಡ ಪೀಠ ಆರಂಭಿಸಲಾಗುವುದು. ಬನಾರಸ್ ನಲ್ಲಿ ಕನ್ನಡ ಪೀಠಗಳಿಲ್ಲ. ಹೊರ ಕನ್ನಡಿಗ ಪೀಠಗಳಿಗೆ ಒಂದು ವಾರಿ ಹಿಡಿಗಂಟು ನೀಡಿ 10 ಕೋಟಿ ರೂ.ಬಿಡುಗಡೆ ಮಾಡಬೇಕು.ಅದನ್ನ ಫಿಕ್ಸಡ್ ಡಿಪಾಸಿಟ್ ನಲ್ಲಿ ನಡೆಸಬೇಕಿದೆ ಎಂದರು. 

ದ್ವಿಭಾಷ ಸೂತ್ರವನ್ನ‌ಕರ್ನಾಟಕ ಅಳವಡಿಸಿಕೊಳ್ಳಬೇಲಿದೆ. ತಮಿಳುನಾಡು ಅಳವಡಿಸಿದೆ ನಾವು ಯಾಕೆ ಬಳಸಿಕೊಳ್ಳಲಿಲ್ಲ. ಭಾಷೆ ಬೆಂಕಿ ಇದ್ದಹಾಗೆ ಇದರ ಜೊತೆ ಆಟವಾಡಬಾರದು. ಅಖಿಲಬಾರತದ ಮಟ್ಟದಲ್ಲಿ ಭಾಷ ನೀತಿ ಬೇಲಿದೆ. ಕರಚನಾಟಕದ ಒಳಗಡೆ ಕನ್ನಡ ಬಿಟ್ಟು 350 ಭಾಷೆಯಿದೆ. ಕನ್ನಡ ಭಾಷೆಯನ್ನ ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎಂಬುದು ಸಹ ಸರಿಯಾದ ಅಂಕಿ ಅಂಶವಿಲ್ಲ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close