ಸಿರಿಗೆರೆಯಲ್ಲಿ ಕಾಣಿಸಿಕೊಂಡ ಐದು ಕಾಡಾನೆ

Five wildebeests have been spotted in Sirigere area of ​​Shimoga. The department has started operations to drive these to the Hi Hola side.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಿರಿಗೆರೆ ಭಾಗದಲ್ಲಿ ಐದು ಕಾಡಾನೆಗಳು ಕಾಣಿಸಿಕೊಂಡಿವೆ. ಇವುಗಳನ್ನ ಹಾಯ್ ಹೊಳೆ ಭಾಗಕ್ಕೆ ಡ್ರೈವ್ ಮಾಡಲು ಇಲಾಖೆ ಕಾರ್ಯಾಚರಣೆಗೆ ಇಳಿದಿದೆ.

ಸಿರಿಗೆರೆ ವ್ಯಾಪ್ತಿಯ ಬಿಲ್ಗುಣಿಯ ಬಳಸಕೆರೆಯ ಬಳಿ ಐದು ಕಾಡಾನೆ ಕಾಣಿಸಿಕೊಂಡು ಹಳ್ಳಿಗರಿಗೆ ಭಯ ಉಂಟು ಮಾಡಿದೆ. ಇಂದು ಬೆಳಿಗ್ಗೆ ಕೆರೆಯ ಬಳಿ ಕಾಡಾನೆಗಳ ಲದ್ದಿಕಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. 

ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾಡಾನೆಗಳನ್ನ ಓಡಿಸಲು ಇಲಾಖೆ ತಂಡರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದೆ. ಪಟಾಕಿ ಮತ್ತು ತಮಟೆಗಳನ್ನ ಬಾರಿಸುವ ಮೂಲಕ ಆನೆಗಳನ್ನ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಕಾಡಾನೆಗಳನ್ನ ಸ್ಥಳಾಂತರಿಸಿ ಎಂದು ಆಗ್ರಹಿಸಿ ಎರಡು ದಿನಗಳ ಹಿಂದೆ ಬಿಜೆಪಿ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ವೇಳೆ ಸಿಸಿಎಫ್ ಹನುಮಂತಪ್ಪನವರು 10 ಆನೆಗಳಿವೆ ಇಲಾಖೆ ಓಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಭರವಸೆಯ ಬೆನ್ನಲ್ಲೇ ಐದು ಕಾಡಾನೆ ಕಾಣಿಸಿಕೊಂಡು ಗ್ರಾಮಸ್ಥರನ್ನ ಆತಂಕಕ್ಕೊಳಪಡಿಸಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close