ಇದು ಆತ್ಮಹತ್ಯೆ ಭಾಗ್ಯದ ಸರ್ಕಾರ, ಮೂರುದಿನಗಳಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು-ದತ್ತಾತ್ರಿ



ಸುದ್ದಿಲೈವ್/ಶಿವಮೊಗ್ಗ

ಸಚಿನ ಪಂಚಾಳ್ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆಗೆ ರಾಜೀನಾಮೆಗೆ ಗಡವು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಎಲ್ಲಾ ನಾಯಕರು ಸಾಲು ಸಾಲು ಸುದ್ದಿಗೋಷ್ಠಿಗೆ ಮುಂದಾಗಿದ್ದಾರೆ. 

ಇಂದು ಶಿವಮೊಗ್ಗದಲ್ಲಿ ರಾಜ್ಯ ಪ್ರಕೋಷ್ಠಗಳ ರಾಜ್ಯಾಧ್ಯಕ್ಷ ದತ್ತಾತ್ರಿ,   ಏಳು ಪುಟಗಳ ಡೆತ್ ನೋಟ್ ಬರೆದಿರುವ ಸಚಿನ್ ಪಂಚನಾಳ್, ಸಚಿವ ಪ್ರಿಯಾಂಕ್ ಖರ್ಗೆಯ ಸಹಚರ ರಾಜು ಕಪ್ಪನಾಳ್ ಗೆ ಹಣಕೊಟ್ಟಿದ್ದು, ಕೆಲಸವಾಗದ ಕಾರಣ ಪಂಚನಾಳ್ ಆತ್ಮಹತ್ಯೆಗೆ ಮುಂದಾಗಿದ್ದಾನೆ.  12 ಕೋಟಿ ಟೆಂಡರ್ ಗೆ 60 ಲಕ್ಷ ಬೇಡಿಕೆ ಇಟ್ಟ ಕಪ್ಪನಾಳ್ ಗೆ ಹಣಕೊಟ್ಟು ಕೆಲಸವಾಗದ ಕಾರಣ ಪಂಚ್ ನಾಳಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದರು. 

ಡೆತ್‌ನೋಟ್ ಬರೆದಿರುವುದು ಪಂನಾಳ್ ದ್ದೇ ಎಂಬುದು ಸಾಬೀತಾಗಿದೆ.ಡೆತ್ ನೋಟ್ ನಲ್ಲಿ ಬಿಜೆಪಿಯ ನಾಲ್ವರಿಗೆ ಜೀವಬೆದರಿಕೆಯಿದೆ ಎಂದು ಬರೆಯಲಾಗಿದೆ.  ರಾಜು ತಪನೂರು, ನಂದಕುಮಾರ್ ರಾಜಾತಪನೂರು,ಸಿದ್ದಲಿಂಗ ಸ್ವಾಮಿ, ಬಸವರಾಜ್ ಮತ್ತಿಮೋಡ್ ಸೇರಿ ನಾಲ್ವರಿಗೆ ಇವರು ಬಿಜೆಪಿಯರಿಗೆ ಕೊಲೆ ಬೆದರಿಕೆ ಇದೆ. ಹಣಕೊಟ್ಟಿದ್ದು ಹೇಳಿದರೆ ಸರಿಯಿರಲ್ಲ ಎಂಬ ಕಪ್ಪನಾಳ್ ಬೆದರಿಕೆಗೆ ಪಂಚನಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿ ಸಚಿವ ಖರ್ಗೆಯ ಪಾತ್ರ‌ ಧೃಢಪಟ್ಟಿದೆ. 

ಈಶ್ವರಪ್ಪನವರ ಮೇಲೆ ಬಂದ ಆರೋಪದ ಹಿನ್ನಲೆಯಲ್ಲಿ ವಾರದ ಒಳಗೆ ರಾಜೀನಾಮೆ ಪಡೆಯಲಾಗಿದೆ. ಆದರೆ ಪಂಚನಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ದಟತನ ತೋರಿದ್ದಾರೆ. ದಾವಣಗೆರೆಯಲ್ಲಿ ಗುತ್ತಿಗೆದಾರ, ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ, ಹಾಗೂ ಬೀದರ್ ನಲ್ಲಿ ಪಂಚನಾಳ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಇದು ಆತ್ಮಹತ್ಯೆ ಭಾಗ್ಯದ ಸರ್ಕಾರವಾಗಿದೆ ಎಂದು ದೂರಿದರು. 

ಮೌಲ್ಯಧಾರಿತ ಮತ್ತು ನೈತಿಕತೆಯ ಹಿನ್ನಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಪಂಚನಾಳ್ ಸೋಷಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆದನ್ನ ಆತನ ಸಹೋದರಿ ಪೊಲೀಸ್ ಠಾಣೆಗೆ ತಿಳಿಸಿದ್ದರೆ ಪೊಲೀಸರು ನಿರ್ಲಕ್ಷ ತೋರಿದ್ದರಿಂದ ಕೃತ್ಯ ನಡೆದಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ಆತ ಬದುಕುತ್ತಿದ್ದ. ಈಗ ಠಾಣೆಯ ಪಿಎಸ್ಐನ್ನ ವಜಾ ಮಾಡಿದ್ದಾರೆ. ಸಚಿವರನ್ನ ಬಜಾವ್ ಮಾಡಿಕೊಳ್ಳಲು ವಜಾ ಆಗಿದೆ ಎಂದು ದತ್ತಾತ್ರಿ ತಿಳಿಸಿದ್ದಾರೆ. 

ಡೆತ್ ನೋಟ್ ನಲ್ಲಿ ರೌಡಿಶೀಟರ್ ನ ಹೆಸರು ಬರೆಯಲಾಗಿದೆ. ಪ್ರಕರಣವನ್ನ ಸಿಐಡಿಗೆ ನೀಡಲಾಗಿದೆ. ಇದನ್ನ ಸಿಬಿಐಗೆ ಕೊಡಬೇಕು. ಸಚಿವ‌ ಖರ್ಗೆ ರಾಜೀನಾಮೆಗೆ ಮೂರುದಿನಗಳ ಗಡವು ನೀಡಲಾಗಿದೆ. ಇಲ್ಲವಾದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಡಲಿದೆ.  ಮೃತ ಕುಟುಂಬಕ್ಕೆ ಒಂದು ಕೋಟಿ ರೂ. ಹಣ ಪರಿಹಾರ ನೀಡಬೇಕು ಎಂದರು. 

ಒಂದೆಡೆ ಆತ್ಮಹತ್ಯೆ ಭಾಗ್ಯವಾದರೆ ಮತ್ತೊಂದೆಡೆಗೆ ಬಾಣಂತಿಯರ ಸಾವಿನ ಭಾಗ್ಯವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಪಂಚನಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಖರ್ಗೆಯ ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದಾರೆ. ಆತ್ಮಹತ್ಯೆ ಭಾಗ್ಯತಪ್ಪಿಸಲು ಸಿಬಿಐಗೆ ಕೊಡಬೇಕು. ಆಂದೋಲನ ಸಮಿತಿ ಮಾಹಿತಿ ಪಡೆಯುತ್ತಿದೆ.

ಜ.3 ರವರೆಗೆ ಗಡುವು ನೀಡಲಾಗಿದೆ. ಆಂದೋಲನ ಸಮಿತಿ ಏನು ಹೇಳಲಿದೆ ಕಾದುನೋಡಬೇಕಿದೆ ಎಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close