ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ (private Hospital) ಗಲಾಟೆಯಾಗಿದೆ. ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿರುವುದು ವೈದ್ಯರ ನಿರ್ಲಕ್ಷ ಎಂದು ಆರೋಪಿಸಿ ಮೃತನ ಕಡೆಯವರಿಂದ ಗಲಾಟೆಯಾಗಿದ್ದು, ಸೆಟ್ಲ್ ಮೆಂಟ್ ನಲ್ಲಿ (settlement) ಕೊನೆಯಾಗಿದೆ.
ನಗರದ ದೀನ್ ದಯಾಳು ರಸ್ತೆ, (ಬಿಜೆಪಿ ಕಚೇರಿ ಬಳಿ)ಯ ಖಾಸಗಿ ಆಸ್ಪತ್ರೆಯಲ್ಲಿ ಭದ್ರಾವತಿಯ ನಿವಾಸಿ 43 ವರ್ಷದ ವ್ಯಕ್ತಿ ಪ್ಯಾರಲಿಸಿಸ್ ರೋಗಿಯವರು ದಾಖಲಾಗಿದ್ದರು. ಡಿ.31 ರಂದು ಬಂದು ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಬೆಳಿಗ್ಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಆದರೆ ಹೃದಯ ಸ್ತಂಭನದಿಂದ ವ್ಯಕ್ತಿ ಸಾವಾಗಿದೆ. ಈ ಕುರಿತು ರೋಗಿ ಕಡೆಯವರು ವೈದ್ಯರು 99.99% ಬದುಕುಳಿಯಲಿದ್ದಾರೆ ಎಂಬ ಭರವಸೆ ನೀಡಿದ್ದರು ಎಂಬುದು ಅವರ ವಾದವಾಗಿದೆ. ಆದರೆ ಸಾವಾಗಿರುವುದರಿಂದ ಆಸ್ಪತ್ರೆಯವರೆ ಪರಿಹಾರ ನೀಡಬೇಕು ಎಂಬುದು ಅವರ ವಾದದಲ್ಲಿನ ಭಾಗವಾಗಿದೆ.
ಬಿಲ್ ಸುಮಾರು 3.5 ಲಕ್ಷ ರೂ. ಆಗಿದ್ದು, ಇದರಲ್ಲಿ ಮೃತರ ಕಡೆಯವರು 1.75 ಲಕ್ಷ ರೂ. ಬಿಲ್ ಕಟ್ಟಿದ್ದರು. ಕೊನೆಗೆ ಆಸ್ಪತ್ರೆಯವರು ಪರಿಹಾರ ನೀಡಲು ನಿರಾಕರಿಸಿದ್ದು, ಕಟ್ಟಿದ ಬಿಲ್ ನ ಹಣವನ್ನ ಹಿಂತಿರುಗಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಮೃತ ದೇಹವನ್ನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
Negotiations that begin with a demand for compensation end in a settlement