In spite of the opposition, an organization honored PSI Tirumalesh and surprised District Defense Officer Mithun Kumar by requesting him not to diminish the efficient administrative officers. |
ಸುದ್ದಿಲೈವ್/ಶಿವಮೊಗ್ಗ
ವಿರೋಧದ ನಡುವೆಯೂ ಪಿಎಸ್ಐ ತಿರುಮಲೇಶ್ ಅವರನ್ನ ಸಂಘಟನೆಯೊಂದು ಸನ್ಮಾನಿಸಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ದಕ್ಷ ಆಡಳಿತ ಅಧಿಕಾರಿಯನ್ನ ಕುಗ್ಗಿಸದಂತೆ ಮನವಿ ಮಾಡಿ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಹಲವು ಸಲ ನಗರದಲ್ಲಿ ಎಲ್ಲಾ ವಾಹನಗಳ ಕರ್ಕಶ ಹಾರನ್ ಶಬ್ದಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಾಹನಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು, ಕ್ಯಾರೆ ಎನ್ನದ ಚಾಲಕರು ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಾ ಬರುತ್ತಿದ್ದಾರೆ.
ಇದರಿಂದ ವೃದ್ದರು, ಗರ್ಭೀಣಿಯರಿಗೆ ಮತ್ತು ಹೃದಯ ಸಂಬಂಧಿತ ರೋಗಿಗಳಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ, ಮುಖ್ಯ ರಸ್ತೆಯ ಪಕ್ಕದಲ್ಲಿರುವ ಆಸ್ಪತ್ರೆಗಳು, ವಸತಿಗಳಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದು ನಗರ ವ್ಯಾಪ್ತಿಯಲ್ಲಿ ಓಡಾಡುವ ನಗರ ಸಂಚಾರಿ ಬಸ್ಸುಗಳು ಮತ್ತು ಶಾಲಾ ವಾಹನಗಳಿಗೆ ಅತೀ ಹೆಚ್ಚು ಶಬ್ದ ಮಾಲಿನ್ಯ ಮಾಡುವ ಹಾರನ್ ಅವಶ್ಯಕತೆ ಇರುವುದೇ? ಎಂದು ಬೇಸತ್ತು ಸಾರ್ವಜನಿಕರ ವಲಯದಿಂದ ದೂರುಗಳು ಸಂಚಾರಿ ಠಾಣಾಧಿಕಾರಿಗಳಿಗೆ ನೀಡಿದ್ದರು.
ಶಿವಮೊಗ್ಗದ ಸಮಸ್ತ ಜನತೆ ಪ್ರಶ್ನೆಮಾಡುತ್ತದ್ದರ ಸಲುವಾಗಿ ಸಂಚಾರಿ ಠಾಣೆಯ ಪಿ.ಎಸ್.ಐ ತಿರುಮಲ್ಲೇಶ್ ರವರು ಸಿಟಿ ಬಸ್ ಚಾಲಕರುಗಳಿಗೆ ಇತ್ತಿಚೆಗೆ ತಮ್ಮ ವಾಹನದ ಹಾರನ್ ಶಬ್ದವನ್ನು ಹತ್ತಿರದಿಂದ ಕೇಳಿ ಎಷ್ಟು ಕರ್ಕಶವಾಗಿರುತ್ತದೆ ಎಂದು ತೋರಿಸಿದ್ದಾರೆ,
ಈ ವಿಚಾರವಾಗಿ ಸಂಘಟನೆಯೊಂದು ಇದರಲ್ಲಿ ಚಾಲಕರ ತಪ್ಪಿಲ್ಲ ಎಂದು ಮನವಿ ಸಲ್ಲಿಸಿತ್ತು. ವಾಹನದ ಮಾಲೀಕರು ಹಾರನ್ ನನ್ನು ಹಾಕಿಸಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾಗಾದರೆ ವಾಹನ ಮಾಲಿಕರ ಮೇಲೂ ಕ್ರಮ ಕೈಗೊಂಡು ದೂರು ದಾಖಲಿಸಬೇಕು ಮತ್ತು ಇನ್ನು ಮುಂದೆ ಈ ತರಹದ ಕರ್ಕಶ ಶಬ್ದ ಮಾಡುವ ಎಲ್ಲಾ ವಾಹನವನ್ನು ವಶಪಡಿಸಿಕೊಂಡು, ಅವರುಗಳ ಮೇಲೆ ದೂರು ದಾಖಲಿಸಿ ಶಿವಮೊಗ್ಗದ ಜನತೆ ನೆಮ್ಮದಿಯಿಂದ ನೆಲಸಲು ಅವಕಾಶ ಮಾಡಿಕೊಡಬೇಕು ಹಾಗೂ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ಕಾರ್ಯವನ್ನು ಕುಗ್ಗಿಸದೇ ಇಂತಹ ಸಮಾಜ ಮುಖಿ ಒಳ್ಳೆಯ ಕೆಲಸವನ್ನು ಮಾಡುವ ಇಲಾಖೆಯ ಯಾವುದೇ ಅಧಿಕಾರಿಗಳು ಮಾಡಿದರು ಅವರಿಗೆ ಪ್ರಶಂಸಿಸಿ ಸಹಕಾರ ನಿಡಬೇಕಾಗಿ ವಿಶ್ವಮಾನವ ವಿವೇಕಾನಂದ ವಿದ್ಯಾರ್ಥಿ ಯುವ ವೇದಿಕೆ ಎಸ್ಪಿಗೆ ಮನವಿ ಸಲ್ಲಿಸಿದೆ. ಜೊತೆಗೆ ಠಾಣೆಗೆ ತೆರಳಿ ತಿರುಮಲೇಶ್ ಅವರನ್ನ ಸನ್ಮಾನಿಸಿದೆ.
ಮನವಿ ನೀಡುವ ಸಮಯದಲ್ಲಿ ಯೋಗಿಶ್ ಪಾಟೀಲ್, ಸತೀಶ್ ಮುಂಚೆಮನೆ, ಪ್ರಕಾಶ್ ಎಸ್ .ಎಸ್. ವಿ, ಸತೀಶ್ ಗೌಡ, ಜಗದೀಶ್ ಹಿರೇಮಠ, ಯುವರಾಜ, ಚಂದ್ರಚಾರ್, ಅವಿನಾಶ್ ಉಪಸ್ಥಿತರಿದ್ದರು.
ಇವೆಲ್ಲದರ ನಡುವೆ ಸಾಮಾಜಿಕ ಜಾಲತಾಣವಾದ ಫೆಸ್ ಬುಕ್ ನಲ್ಲಿದ್ದ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಪೇಜ್ ನಲ್ಲಿದ್ದ ಪಿಎಸ್ಐ ತಿರುಮಲೇಶ್ ಅವರ ವೀರವೇಶದ ಫೊಟೊ ವಿಡಿಯೋಗಳನ್ನ ಡಿಲೀಟ್ ಮಾಡಲಾಗಿದೆ. ಇದರಿಂದ ಜಿಲ್ಲಾ ಪೊಲೀಸ್ ಗೆ ಈ ವಿಡಿಯೋ ಮುಜುಗರ ಉಂಟು ಮಾಡಿ ಡಿಲೀಟ್ ಮಾಡಲಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.