ಸುದ್ದಿಲೈವ್/ಹೊಳೆಹೊನ್ನೂರು
ಹೊಸವರ್ಷ ಆಚರಣೆಗೆ ಕಿರಿಕ್ ಗಳು ಮುಂದುವರೆದಿದೆ. ಈಗಾಗಲೇ ಹೆಚ್ ಸಿದ್ದಯ್ಯ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತ ಕೊಲೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ವೋಲ್ವೋ ಕಾರಿನ ಚಾಲಕ ಕಾರ್ತಿಕ್ ಎಂಬುವನನ್ನ ಬಂಧಿಸಲಾಗಿದೆ.
ಇದಾದ ನಂತರ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕನಸಿನಕಟ್ಟೆ ರಸ್ತೆಯಲ್ಲಿರುವ ಬಾರ್ ವೊಂದರಲ್ಲಿ ಬಿರಿಯಾನಿತಿನ್ನಲು ಹೋಗುತ್ತಿದ್ದ ವೇಳೆ 50 ವರ್ಷದ ವ್ಯಕ್ತಿಗೆ ಕಿರಿಕ್ ತೆಗೆದು ಮಚ್ಚಿನಲ್ಲಿ ಹಲ್ಲೆ ಮಾಡಿರುವ ಘಟನೆ ದೂರಾಗಿ ದಾಖಲಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕನಸಿನಕಟ್ಟೆ ರಸ್ತೆಯ ಜಾಲಿ ಬಾರ್ ಗೆ 50 ವರ್ಷದ ವ್ಯಕ್ತಿ ರವಿ ಹೆಚ್ ಎನ್ ಮತ್ತು ಚಿಕ್ಕಪ್ಪನ ಮಗ ಸಂತೋಷ್ ಎಂಬುವರು ಡಿ.31 ರ ರಾತ್ರಿ 11-45 ಕ್ಕೆ ನಡೆದುಕೊಂಡು ಹೋಗುವಾಗ ಇಬ್ಬರು ಪೋಕರಿಗಳು ಸಂತೋಷ್ ಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಬಿರಿಯಾನಿ ತಿನ್ನಲು ಬಂದ್ರನ್ರೋ ಎಂದು ಹೇಳಿದ್ದಾನೆ.
ಅದಕ್ಕೆ ರವಿ ಹಾಗೆಲ್ಲಾ ಯಾಕೆ ಮಾತನಾಡುತ್ತೀರ ಸುಮ್ಮನಿರಿ ಎಂದಿದ್ದಕ್ಕೆ ಮನೋಜ್ ಯಾನೆ ಅಮವಾಸೆ ಎಂಬುವನ ಬೈಕ್ ನಲ್ಲಿದ್ದ ಮಚ್ಚನ್ನ ಪವನ್ ಯಾನೆ ಗೌಡ ಹಿಡಿದುಕೊಂಡು ಬಂದು ರವಿಗೆ ಬೀಸಿದ್ದಾನೆ. ತಲೆಗೆ ಗಾಯವಾಗಿದೆ. ಕೆಳಗೆ ಬಿದ್ದ ರವಿಗೆ ಮನೋಜ್ ಯಾನೆ ಅಮವಾಸೆ ಖಾಲಿ ಬಿಯರ್ ಬಾಟಲಿನ್ನಹಿಡಿದುಕೊಂಡು ಬಂದು ಊರಲ್ಲಿ ಅಣ್ಣ ತಮ್ಮಂದಿರ ಹಾವಳಿ ಹೆಚ್ಚಾಗಿದೆ ಎಂದು ಹೇಳಿ ಕಾಲಿನಲ್ಲಿ ತುಳಿಯಲು ಯತ್ನಿಸಿದ್ದಾನೆ. ಖಾಲಿ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿದ್ದಾನೆ.
ಸಂತೋಷ್ ಮತ್ತು ಮಂಜು ಎಂಬುವರು ಬಂದು ರವಿಯವರನ್ನ ಉಪಚರಿಸಿ ಹೊಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವತ್ತು ಬಜಾವ್ ಆಗಿದ್ದೀಯ ಯಾವುದೇ ಕಾರಣಕ್ಕೂ ಉಳಿಸೊಲ್ಲ ಎಂದು ಬೆದರಿಕೆ ಹಾಕಿ ಪ್ರತಾಪ್ ಯಾನೆ ಗೌಡ ಮತ್ತು ಮನೋಜ್ ಯಾನೆ ಅಮವಾಸೆ ಬೈಕ್ ಹತ್ತಿಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ರವಿಯವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಗೌಡ ಮತ್ತುಅಮವಾಸೆ ವಿರುದ್ಧ ದೂರು ದಾಖಲಾಗಿದೆ.