ಹಣಕೊಟ್ತೀನಿ ಮಂಚಕ್ಕೆ ಬಾ ಎಂದು ಕರೆಯುತ್ತಿದ್ದವನ ವಿರುದ್ಧ ದೂರು

A complaint has been registered against a man who behaved indecently to a married woman by asking her to sleep with me.


ಸುದ್ದಿಲೈವ್/ಶಿಕಾರಿಪುರ

ಹಣಕೊಡುತ್ತೇನೆ ನನ್ನೊಂದಿಗೆ ಮಲಗು ಎಂದು ವಿವಾಹಿತ ಮಹಿಳೆಗೆ ಅಸಭ್ಯವರ್ತನೆ ತೋರಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. 

ಹಣ ಕೊಡುತ್ತೇನೆ ನನ್ನೊಂದಿಗೆ ಮಲಗಲು ಬಾ ಎಂದು ಹೇಳಿದ್ದರಿಂದ , ವಿವಾಹಿತ ಮಹಿಳೆಯೊಬ್ವರು ಹೆದರಿ ಫೋನ್ ಸ್ವಿಚ್ ಆಪ್ ಮಾಡಿದ್ದಾರೆ, ನಂತರ ಪೊನ್ ಸ್ವಿಚ್ ಆನ್ ಮಾಡಿ ತನ್ನ ಮೊಬೈಲ್ ನಿಂದ ತನ್ನ ಮಗನ ಮೊಬೈಲ್ ನಂಬರನ್ನು ತೆಗೆದುಕೊಂಡು ತನ್ನ ಚಿಕ್ಕಮ್ಮರಿಗೆ ಕರೆ ಮಾಡಿದ್ದಾರೆ. 

ಮತ್ತೆ ರಾತ್ರಿ11 ಗಂಟೆಗೆ ಮಹಿಳೆಯ ಮನೆಯ ಹತ್ತಿರ ಬಂದು  ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ  ಎಲ್ಲಿದ್ದೀಯ ಬಾ ಎಂದು ಕರೆದಿದ್ದಾನೆ. ಚಿಕ್ಕಮ್ಮ ಮೊಬೈಲನ್ನು ತಗೆದುಕೊಡು ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ  ಬೈದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿ ಮನೆಯ ಹಿಂದೆ ಮುಂದಿನ ಬಾಗಿಲನ್ನ‌ಬಡೆದಿದ್ದಾನೆ.‌ 

ನಿನಗೆ ದುಡ್ಡು ಎಷ್ಟು ಬೇಕು ನಾನು ಕೊಡುತ್ತೇನೆ ನನ್ನ ಜೊತೆ ವಾಲಗು ಎಂದು ಹೇಳಿ ಮನೆ ಕಡೆ ಹೋಗಿದ್ದಾನೆ. ಮರುದಿನ‌ಬೆಳಿಗ್ಗೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಮನೆಗೆ ಹೋದ ವಿವಾಹಿತ ಮಹಿಳೆ,  ಮೈದುನನಾದ ಮತ್ತು ಚಿಕ್ಕಮ್ಮಳೊಂದಿಗೆ ಹೋದಾಗ‌  ಕ್ಷಮೆಯಾಚಿಸಿ ಮನೆಯ ಒಳಗೆ ಹೋಗಿ ಹೊಡೆಯಲು ಕಂದಲಿಯನ್ನು ತೆಗೆದುಕೊಂಡು ಬಂದಿದ್ದಾನೆ, 

ಈ ವೇಳೆ ಬೆದರಿದ ಮಹಿಳೆ ಮನೆಯ ಗೇಇನ ಹೊರಗೆ ಬಂದು ನಿಂತಿದ್ದಾರೆ. ಈ ವೇಳೆ ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾನೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನ ನವೀನ್ ರೆಡ್ಡಿ ಎಂದು ಗುರುತಿಸಲಾಗಿದ್ದು ಆತನವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close