In a terrible accident between a bus and a bike, the biker died on the spot near Chinnamane village near Ayanur, Shimoga. |
ಸುದ್ದಿಲೈವ್/ಶಿವಮೊಗ್ಗ
ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ನಮನೆ ಗ್ರಾಮದ ಬಳಿಯಲ್ಲಿ ನಡೆದಿದೆ.
ರಿಪ್ಪನ್‌ಪೇಟೆ ಕಡೆಯಿಂದ ತೆರಳುತಿದ್ದ ಗಜಾನನ (ಚಕ್ರಾ) ಬಸ್ ಹಾಗೂ ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬೈಕ್ (KA 14 EG 6503) ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಬೈಕ್ ಸವಾರನ ಹೆಸರು ಮಂಜುನಾಥ್(32) ಬಿನ್ ವಿಶ್ವೇರಪ್ಪ ಎಂದು ತಿಳಿದು ಬಂದಿದ್ದು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕೂರಂಬಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ.
ಇಂಜಿನಿಯರ್ ಮುಗಿಸಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹುಡುಗಿ ನೋಡಲು ಊರಿಗೆ ಬಂದಿದ್ದರು. ಊರಿಗೆ ಬಂದವನಿಗೆ ದುರ್ಘಟನೆ ಸಂಭವಿಸಿದೆ.