ನಕಲಿ ಚಿನ್ನಾಭರಣವನ್ನ ಅಡವಿಟ್ಟು ಬ್ಯಾಂಕಿಗೆ ವಂಚನೆ



ಸುದ್ದಿಲೈವ್/ಶಿವಮೊಗ್ಗ

ನಕಲಿ ಬಂಗಾರ ಅಡವಿಟ್ಟು ಬ್ಯಾಂಕ್ ಗೆ ವಂಚಿಸಿರುವ ಘಟನೆ ವರದಿಯಾಗಿದ್ದು, ನಾಲ್ಕು ಜನರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ಬ್ಯಾಂಕ್‌ನಲ್ಲಿ ಚಿನ್ನಾಭರಣ ಪರಿಶೀಲಿಸುವ ಅಪ್ರೈಸರ್‌ಗಳಾದ ನಾಗರಾಜ್ ಬಿ ಸೇಟ್, ಶಬರೀಶ್ ಎಲ್ ಬಿ, ರಾಗಿಗುಡ್ಡದ ನಸ್ರುಲ್ಲಾ ಖಾನ್, ಸಾದಿಕಾ ಎಂಬ ದಂಪತಿಗಳ ವಿರುದ್ಧ ನಕಲಿ ಚಿನ್ನಾಭರಣವನ್ನ ಅಡವಿಟ್ಟು 1.70 ಸಾಲ ಪಡೆದು ನಂಬಿಕೆ ದ್ರೋಹ, ಮೋಸದ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗದ ಶೇಷಾದ್ರಿಪುರಂನ ಬ್ಯಾಂಕ್‌ನಲ್ಲಿ ಶಾಂತಿನಗರದ ದಂಪತಿ ಚಿನ್ನಾಭರಣ ಅಡಮಾನವಿಟ್ಟಿದ್ದರು. ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣದ ಅಸಲಿಯತ್ತು ಪರಿಶೀಲಿಸುವ ಇಬ್ಬರು ಅಪ್ರೈಸರ್‌ಗಳು ಕೂಡ ದಂಪತಿ ಅಡವಿಟ್ಟ ನಕಲಿ ಬಂಗಾರವನ್ನು ಅಸಲಿ ಬಂಗಾರವೆಂದು ತಿಳಿಸಿದ್ದರು. ಅದರಂತೆ ಸಾಲ ಪಡೆದಿದ್ದರು. ಪುನರ್‌ ಪರಶೀಲಿಸಿದಾಗ ದಂಪತಿ ಅಡವಿಟ್ಟಿರುವುದು ನಕಲಿ ಬಂಗಾರ ಎಂಬುದು ಸಾಬೀತಾಗಿದೆ.

ಈ ಹಿನ್ನೆಲೆ ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದ ದಂಪತಿ, ಇಬ್ಬರು ಅಪ್ರೈಸರ್‌ಗಳ ವಿರುದ್ಧ ಬ್ಯಾಂಕ್‌ ವತಿಯಿಂದ ದೂರು ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close