ಚೆಡ್ಡಿ ಗ್ಯಾಂಗ್ ರೀತಿಯಲ್ಲೇ ಶಿವಮೊಗ್ಗದಲ್ಲಿ ಆಕ್ಟಿವ್ ಆದ ಕಾರ್ ಗ್ಲಾಜು ಬ್ರೇಕಿಂಗ್ ಗ್ಯಾಂಗ್



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಆಕ್ಟಿವ್ ಆಗ್ತಾಇದೆಯಾ ಕಾರ್ ಗ್ಲಾಸ್ ಬ್ರೇಕಿಂಗ್ ಕಳ್ಳರ ಗ್ಯಾಂಗ್? ಎಂಬ ಅನುಮಾನ ಶುರುವಾಗಿದೆ. ನಗರದ ಮೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಮಾಡಿದ್ದ ಕಾರುಗಳನ್ನೇ ಟಾರ್ಗೆಟ್ ಮಾಡಿ ಗ್ಲಾಜುಗಳನ್ನ ಒಡೆಯಲಾಗಿದ್ದು, ಒಂದು ಕಾರಿನಲ್ಲಿದ್ದ ಹಣವನ್ನ ದೋಚಿಕೊಂಡು ಹೋಗಿರುವ ಘಟನೆ ಸಿಸಿ ಟಿವಿ ಫೂಟೇಜ್ ನಲ್ಲಿ ದೂರು ದಾಖಲಾಗಿದೆ. 

ಹೆರಿಗೆ ಆಸ್ಪತ್ರೆಯ ಬಳಿ ನಿಂತಿದ್ದ ಕಾರಿನ ಗ್ಲಾಜು ಒಡೆದು ಹಣ ದೋಚಿಕೊಂಡು ಹೋಗಲಾಗಿದೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೆರಿಗೆ ಆಸ್ಪತ್ರೆಯ ಬಳಿ ನಿಲ್ಲಿಸಿದ್ದ ಕಾರುಗಳೇ ಖದೀಮರ ಟಾರ್ಗೆಟ್ ಆಗಿದೆ. 


ಕಾರ್ ಗ್ಲಾಸ್ ಒಡೆದು ಹಣ ದೋಚಲಾಗಿದೆ ಎನ್ನಲಾಗುತ್ತಿದ್ದು, ಈ ಘಟನೆ ಇನ್ನೂ ದೂರಾಗಿ ದಾಖಲಾಗಿಲ್ಲ. ಕೇವಲ ಒಂದು ವಾರದಲ್ಲಿ ಐದಾರು ಕಾರುಗಳ ಗ್ಲಾಸ್ ಒಡೆದು ಹಣ ದೋಚಿರುವುದಾಗಿ ಆರೋಪ ಕೇಳಿ ಬರುತ್ತಿದೆ. 

ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಬಂಧಿಕರ ಕಾರುಗಳನ್ನ ಒಡೆದು ಲಕ್ಷಾಂತರ ರೂಪಾಯನ್ನ ಎತ್ತಿಕೊಂಡು ಹೋಗಿದ್ದಾರೆ. ಚಡ್ಡಿ ಗ್ಯಾಂಗ್ ನಂತೆ ಈ ಗ್ಯಾಂಗ್ ಕೂಡ ಹೊಂಚು ಹಾಕಿ ಹಣ ಎಗುರಿಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಗ್ಯಾಂಗ್ ನಲ್ಲಿ ಜನರ ಚಲನವಲನ ನೋಡಿಕೊಂಡು ಸ್ಕೆಚ್ ಹಾಕಲಾಗುತ್ತಿದೆ. 

ಒಬ್ಬ ಕಾರಿನ ಗ್ಲಾಸ್ ಒಡೆದರೆ ಇನ್ನೊಬ್ಬ ಹಣ ಎದುರಿಸಲಾಗಿದೆ. ಆತನಿಗೆ ಕವರ್ ಕೊಡಲು ಇನ್ನು ಮೂರು ನಾಲ್ಕು ಜನ ಕಾರ್ ನ ಸುತ್ತಮುತ್ತ ನಿಂತುಕೊಂಡು ವಾಚ್ ಮಾಡುತ್ತಿದ್ದಾರೆ. ಒಂದೇ ಕುಟುಂಬದ ಮೂರು ಕಾರ್ ಗಳಿಗೆ ಕನ್ನ ಇಡಲಾಗಿದೆ ಎನ್ನಲಾಗಿದೆ. 

ಕಳೆದ 24ರಂದು ನಾಲ್ಕು ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಕಾರ್ ಗ್ಲಾಸ್ ಬ್ರೇಕ್ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿರುವ ಪ್ರತಿಷ್ಠಿತ ಸರ್ಜಿ ಮಕ್ಕಳ ಆಸ್ಪತ್ರೆ ಮುಂಬಾಗ ಇರುವ ಕಾರು, ಪಿಂಗಾರದ ಮುಂದೆ ನಿಂತ ಕಾರು ಮತ್ತೊಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಹಣ ಕಳೆದುಕೊಂಡಬರೆ ದೂರು ನೀಡಲು ಮುಂದಾಗದೆ ಇರುವುದು ವಿಪರ್ಯಾಸ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close