ಕೊನೆಗೂ ಅಜಿತ್ ಗೌಡ್ರೇ ಬರಬೇಕಾಯಿತು ಅಕ್ರಮ‌ ಮರಳುಗಾರಿಕೆಗೆ ಬ್ರೇಕ್ ಹಾಕಲು

The river Bhadravati needs to be cleaned. On one side heaps of cow wastes are found while on the other sandblasting is going on like crazy.

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಭದ್ರನದಿ ಶುದ್ಧವಾಗಬೇಕಿದೆ. ಒಂದು ಕಡೆ ರಾಶಿಗಟ್ಟಲೆ ಗೋವಿನ ತ್ಯಾಜ್ಯಗಳ ರಾಶಿ ರಾಶಿ ಕಂಡು ಬಂದರೆ ಇನ್ನೊಂದೆಡೆ ಸೆಡ್ಡು ಹೊಡೆಯುವಂತೆ ಮರಳುಗಾರಿಕೆ ನಡೆಯುತ್ತಿದೆ. 

ಒಟ್ಟಿನಲ್ಲಿ ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ‌ದಂಧೆಗಳಿಗೆ ಬ್ರೇಕ್ ಬೀಳಬೇಕಿದೆ. ಅಧಿಕಾರಿ ವರ್ಗಗಳಿಗೆ ಮತ್ತೊಬ್ಬರು ದೂರು ಕೊಟ್ಟಾಗ ಮಾತ್ರ ಕಣ್ಣಿಗೆ ಬೀಳುವ ಈ ಅಕ್ರಮಗಳು ಭದ್ರಾವತಿಯಲ್ಲಿ ಸಾಮಾನ್ಯರು ಧ್ವನಿ ಎತ್ತಿದರೆ ಅವರ ಕಥೆ ಅಷ್ಟೆ ಎಂಬಂತಹ ವಾತಾವರಣ ಸೃಷ್ಠಿಯಾಗಿದೆ ಎಂಬುದು ಈ ಎರಡು ಉದಾಹರಣೆಗಳು ಸಾಕ್ಷಿಯಾಗಿದೆ. 


ಭದ್ರಾ ನದಿಯ ಒಡಲಿನಿಂದ ಮರಳನ್ನ ತೆಗೆದು ಅಕ್ರಮ ಮರಳನ್ನ ಬೇರೆ ವಾಹನಗಳಿಗೆ ತುಂಬಿಸುವ ವೀಡಿಯೋವೊಂದು ಹರಿದಾಡುತ್ತಿವೆ. ಜನರೇ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅವರ ಗಸ್ತು ಸುಸ್ತು ಹೊಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. 

ಹಳೇ ಸೀಗೆಬಾಗಿಯಲ್ಲಿ ಅಕ್ರಮ‌ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಜಿ ಎಂಎಲ್ ಎ ಅವರ ಪುತ್ರ ಅಜಿತ್ ಗೌಡ ವಿಡಿಯೋ ಸಮೇತ ಜಿಲ್ಲಾಧಿಕಾರಿಗಳು, ಎಸಿಗಳಿಗೆ ಎಸ್ಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪರಿಣಾಮ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. 

ಈ ವೇಳೆ ಏಡು ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳನ್ನ ಸ್ಥಳಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಅಕ್ರಮ‌ ಮರಳುಗಾರಿಕೆ ನಡೆಸುವ ಮಾಲೀಕನೂ ಸ್ಥಳದಿಂದ ಪರಾರಿಯಾಗಿ KA 14 MA 5866 ಕ್ರಮ ಸಂಖ್ಯೆಯ ಮಾರುತಿ ಸುಜಿಕಿ ಎಕೋ ವಾಹನದಲ್ಲಿ ಒರಾರಿಯಾಗಿರುವುದಾಗಿ ದೂರು ನೀಡಿದ್ದಾರೆ. ಪರಿಣಾಮ ಟನ್ ಗಟ್ಟಲೆ ಮರಳು ಸೀಜ್ ಆಗಿದೆ. ಇಲ್ಲವಾದಲ್ಲಿ ಇದು ಸಹ ಮಂಗಮಾಯವಾಗುತ್ತಿತ್ತು‌. ಇನ್ಮುಂದಾದರೂ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close