ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನ ಮಸೀದಿಯ ರಸ್ತೆಯಲ್ಲಿ ಮಾಂಸ ಸಾಗಾಣಿಕೆ ವೇಳೆ ಮೂವರ ನಡುವೆ ಗಲಾಟೆಯಾಗಿದ್ದು ಎರಡು ಮೂಟೆ ಮಾಂಸ ಮತ್ತು ಚರ್ಮ, ಗೋಮೂಳೆಗಳು ಪತ್ತೆಯಾಗಿದೆ.
ಗಾಂಧಿ ಬಜಾರ್ ನ ಮಸೀದಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಗೋಮಾಂಸ ಇದೆ ಎನ್ನಲಾದ ಎರಡು ಮೂಟೆಗಳನ್ನ ಹೊತ್ತು ಬರುವಾಗ ಈರ್ವರು ತಡೆದಿದ್ದಾರೆ. ಚೀಲವನ್ನ ಬಿಸಾಕಿ ತಡೆದ ವ್ಯಕ್ತಿಗೆ ಹೊಡೆದು ದ್ವಿಚಕ್ರ ವಾಹನ ಸವಾರಿಬ್ವರು ಪರಾರಿಯಾಗಿದ್ದಾರೆ.
ಈ ವೇಳೆ ಸ್ಥಳೀಯರು ಸೇರಿದ್ದಾರೆ. ಗೋಮಾಂಸದ ಚೀಲವೆಂದು ಹಿಂದೂ ಸಂಘಟನೆಯವರಿಗೂ ತಿಳಿಸಲಾಗಿದೆ. ಹಿಂದೂ ಸಂಘಟನೆ ಯುವಕರು ಸಹ ಸ್ಥಳಕ್ಕೆ ಧಾವಿಸಿ ದೊಡ್ಡಪೇಟೆ ಮತ್ತು ಕೋಟೆ ಪೊಲೀಸರನ್ನ ಕರೆಯಿಸಲಾಗಿದೆ.
ಪ್ರಕರಣದ ಗಂಭೀರತೆ ಪಡೆದ ಪೊಲೀಸರು ದ್ವಿಚಕ್ರ ವಾಹನವನ್ನ ತೆಗೆದುಕೊಂಡು ಠಾಣೆಗೆ ರವಾನಿಸಿದ್ದಾರೆ. ಹಲ್ಲೆಗೊಳಗಾದ ಅಸ್ಲಾಂರನ್ನೂ ಸಹ ಠಾಣೆಗೆ ಕರೆದೊಯ್ಯಲಾಗಿದೆ. ಇದೊಂದ ಬಿಸಿನೆಸ್ ರೈವಲರಿ ವಿಷದಲ್ಲಿ ಗಲಾಟೆಯಾದಂತೆ ಕಂಡು ಬರುತ್ತಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆ ಇದೆ.