ಪೊಲೀಸರಿಂದ ಲಾಡ್ಜ್ ಗಳ ತಪಾಸಣೆ



Police inspection has been done on lodges. In the background of Republic Day, inspection has been done in 7 police stations of the city. Register book, CCTV footage, customer identity card were checked.


ಸುದ್ದಿಲೈವ್/ಶಿವಮೊಗ್ಗ

ಲಾಡ್ಜ್ ಗಳ ಮೇಲೆ ಪೊಲೀಸ್ ತಪಾಸಣೆ ನಡೆದಿದೆ.‌ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ನಗರದ 7 ಪೊಲೀಸ್ ಠಾಣ ವ್ತಾಪ್ತಿಯಲ್ಲಿ ತಪಾಸಣೆ ನಡೆದಿದೆ. ರಿಜಿಸ್ಟರ್ ಬುಕ್, ಸಿಸಿ ಟಿವಿ ಫೂಟೇಜ್, ಗ್ರಾಹಕರ ಗುರುತಿನ ಚೀಟಿಯನ್ನ ತಪಾಸಣೆ ನಡೆಸಲಾಯಿತು. 

ನಿನ್ನೆ ಸಂಜೆ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಅಡಿಷನಲ್ ಎಸ್ಪಿಗಖಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ ಜಿ,ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ,ಮತ್ತು ಡಿವೈಎಸ್ಪಿ-2 ಸಂಜೀವ್ ಕುಮಾರ್. ಟಿರವರ ಮೇಲ್ವಿಚಾರಣೆಯಲ್ಲಿ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಲಾಡ್ಜ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. 

ಲಾಡ್ಜ್ ಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿರುವದನ್ನು ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಹಾಗೂ  ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಸುತ್ತಿರುವುದನ್ನು ಮತ್ತು ಕಳೆದ 15 ದಿನಗಳಲ್ಲಿ ಲಾಡ್ಜ್ ಗಳಲ್ಲಿ  ಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿದ್ದಾರೆ.  

ಹಾಗೂ ಲಾಡ್ಜ್ ಗಳ ವ್ಯವಸ್ಥಾಪಕರಿಗೆ ಲಾಡ್ಜ್ ಗಳಿಗೆ ಬರುವ ಗ್ರಾಹಕರುಗಳ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದತೆ ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ನಲ್ಲಿ ನಮೂದು ಮಾಡಲು, ಗ್ರಾಹಕರು ನೀಡುವ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅವರದ್ದೇ ಮೊಬೈಲ್ ನಂಬರ್ ಎಂದು ಖಚಿತ ಪಡಿಸಿಕೊಳ್ಳಲು, ಗ್ರಾಹಕರ ಐಡಿ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಪಡೆಯಲು,  ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು ರಿಜಿಸ್ಟರ್ ನಲ್ಲಿ ನೋಂದಾಯಿಸಲು ಮತ್ತು ಗ್ರಾಹಕರುಗಳ ಬಗ್ಗೆ ಯಾವುದೇ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆಗಳನ್ನು ಸಹಾ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close