ನ್ಯಾಯಾಲಯದ ಒಳಗಡೆನೆ ಖೈದಿಗಳಿಗೆ ಗಾಂಜಾ ಸಾಗಿಸುವ ಯತ್ನ

When the 23-year-old accused were taken from the jail for questioning inside the court, it came to light that the 23-year-old accused had registered a case of ganja and the DAR police filed a complaint at the Jayanagar police station.

ಸುದ್ದಿಲೈವ್/ಶಿವಮೊಗ್ಗ

ನ್ಯಾಯಾಲಯದ ಒಳಗೆ ವಿಚಾರಣೆಗಾಗಿ ಜೈಲಿನಿಂದ ಕರೆದುಕೊಂಡು ಬಂದಿದ್ದ ವೇಳೆ ಮೂವರು ಆರೋಪಿಗಳಿಗೆ 23 ವರ್ಷದ ಯುವಕನೋರ್ವ ಗಾಂಜಾ ನೀಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಡಿಎಆರ್ ಪೊಲೀಸರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಜ.16 ರಂದು ಸಂಜೆ 05:15 ಗಂಟೆಗೆ ಡಿಎಆರ್  ಸಿಬ್ಬಂದಿಗಳಾದ ಹಾಲಾನಾಯ್ಕ್,  ಶಂಕರ್, ಕೆ,ವಿ  ತಾವರ್ಯಾನಾಯ್ಕ,, ನಾಗರಾಜ್, ಇವರುಗಳು ಆರೋಪಿಗಳಾದ 1) ವಾಸೀಮ್ ಅಕ್ರಮ್ ಬಿನ್ ಬಷೀರ್ ಅಹಮದ್ 20 ವರ್ಷ 2)ಶಾಭಾಜ್ ಶರೀಪ್ ಬಿನ್ ಉಲ್ತಾಪ್ 20 ವರ್ಷ 3)ಫಯಾಜುಲ್ಲಾ ರೆಹಮಾನ್ @ ರುಮಾನ್ ಬಿನ್ ಅಪ್ರೋಜ್ ಅಹಮದ್ 23 ವರ್ಷ ಇವರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಶಿವಮೊಗ್ಗದ 02 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲು ಇಲಾಖಾ ವಾಹನದಲ್ಲಿ ಕರೆತಲಾಗಿತ್ತು.

ಜ.16 ರಂದು ಬೆಳಗೆ, ಹಾಗೂ ಮದ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯದ ವಾರೆಂಟ್ ಪಡೆಯಲು ನ್ಯಾಯಾಲಯದ ಹೊರಭಾಗದ ಬೆಂಚ್ ಮೇಲೆ ಆರೋಪಿಗಳನ್ನು ಕೂರಿಸಿಕೊಂಡಿದ್ದಾಗ ಮೂವರು ಆರೋಪಿಗಳ ಹತ್ತಿರ ಅನುಮಾನಾಸ್ಪದವಾಗಿ ಒಬ್ಬ ಯುವಕ ಜೇಬಿನಲ್ಲಿ ಏನನ್ನೋ ಇಟ್ಟುಕೊಂಡು ಓಡಾಡುತಿದ್ದನ್ನು ಡಿಎಆರ್ ಪೊಲೀಸರಿಗೆ ಅನುಮಾನ ಬಂದಿದೆ.  

ಅವನನ್ನು ಹಿಡಿದುಕೊಂಡು ವಿಚಾರ ಮಾಡಿದಾಗ ಅವನ ಜೇಬಿನಲ್ಲಿ ಕಪ್ಪನೆಯ ಗಮ್ ಟೇಪ್ ಸುತ್ತಿದ ವಸ್ತುವೊಂದು ಪತ್ತೆಯಾಗಿದೆ.  ಇದು ಏನು ಅಂತ ಕೇಳಿದ್ದಕ್ಕೆ ಇದರಲ್ಲಿ ಗಾಂಜ ಪುಡಿ ಇದೆ ಇದನ್ನು ವಾಸೀಮ್ ಅಕ್ರಂಗೆ ಕೊಡಲು ಬಂದಿದ್ದೆನು ಅಂತ ತಿಳಿಸಿದ್ದಾನೆ.  ಆತನ ಹೆಸರು ವಿಳಾಸ ಕೇಳಿದಾಗ ಮಹಮದ್ ಆಪ್ರಾಬ್ ಬಿನ್ ಜಾಕೀರ್ ಹುಸೇನ್ ಎಂ,ಕೆ,ಕೆ ರಸ್ತೆ 01 ನೇ ಕ್ರಾಸ್ ಶಿವಮೊಗ್ಗ ಅಂತ ತಿಳಿಸಿದ್ದಾನೆ.  

ಯುವಕನನ್ನ ಹಾಗೂ ಆತನ ವಶದಲ್ಲಿ ಗಾಂಜಾ ವನ್ನು ಡಿಎಆರ್  ವಶಕ್ಕೆ ಪಡೆದುಕೊಂಡು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೆಗ್ಗಾನ್ ನಲ್ಲಿ ಅನಾರೋಗ್ಯದ ಹಿನ್ನಲೆಯಲ್ಲಿ ಜೈಲಿನ ಖೈದಿಗಳನ್ನ ಕರೆತಂದಾಗ ಗಾಂಜಾ ಸಾಗಿಸುವ ಪ್ರಯತ್ನ ನಡೆದಿತ್ತು. ಆದರೆ ನ್ಯಾಯಾಲಯದಲ್ಲಿ ಕೇಸ್ ಗಾಗಿ ಬಂದ ಹಿನ್ನಲೆಯಲ್ಲೆ ನಿಷೇಧಿತ ವಸ್ತುಗಳ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close