ಜನ ಮೆಚ್ಚಿದ ಪೊಲೀಸ್

It is not enough to just do duty, you can get popularity only if you do duty that is appreciated by the public. Here is a wonderful example of that saying.

ಸುದ್ದಿಲೈವ್/ಶಿವಮೊಗ್ಗ

ಕೇವಲ ಡ್ಯೂಟಿ ಮಾಡಿದರೆ ಸಾಲದು, ಸಾರ್ವಜನಿಕರು ಮೆಚ್ಚುವಂತಹ ಡ್ಯೂಟಿ ಮಾಡಿದಾಗ ಮಾತ್ರ ಜನಮೆಚ್ಚುಗೆ ಪಡೆಯಲು ಸಾಧ್ಯ. ಆ ಮಾತಿಗೆ ಇಲ್ಲೊಂದು ಅದ್ಭುತ ಉದಾಹರಣೆಯಿದೆ. 

ಹೊಳೆಬೆನವಳ್ಳಿ ಗ್ರಾಮದಲ್ಲಿ ಗ್ರಾಮಾಂತರ ಠಾಣೆಯ ಮಂಜುನಾಥ (ಜಿಮ್ ಮಂಜು ) ಅವರು ಬೀಟ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ಮೂರು ವರ್ಷದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಬೀಟ್ ವ್ಯವಸ್ಥೆ ಮತ್ತು ಸಾರ್ವಜನಿಕ ಬಗ್ಗೆ ಇರುವ ಕಾಳಜಿಗೆ ಇಲ್ಲಿನ ಜನರೆ ಫಿದಾ ಆಗಿದ್ದರು. 

ಒಮ್ಮೆ ಸಾರ್ವಜನಿಕರ ಮೆಚ್ಚುಗೆಗೆ ಸರ್ಕಾರಿ ನೌಕರ ಒಳಗಾದರೆ ಮುಗಿತು. ಆತನನ್ನ ಹೆಗಲು ಮೇಲೆ ಹೊತ್ತಿಕೊಂಡು ಮರೆಸುತ್ತಾನೆ ಎಂಬುದಕ್ಕೆ ಜಿಮ್ ಮಂಜು ಅವರಿಗೆ ಬಡ್ತಿ ದೊರೆತಾಗಲೇ ಗೊತ್ತಾಗಿದ್ದು. ಈಗ ಅವರು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಭದ್ರಾವತಿ ಗ್ರಾಮಾಂತರ ಠಾಣೆಗೆ  ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದಿದ್ದಾರೆ. 


ಬಡ್ತಿ ಪಡೆದ ಜಿಮ್ ಮಂಜುಗೆ ಸಾರ್ವಜನಿಕರಾಗಿಯೇ ಸನ್ಮಾನಿಸಲಾಯಿತು. ನಿನ್ನೆ ಹೊಳೆಬೆನವಳ್ಳಿ ಗ್ರಾಮದಲ್ಲಿಯೇ ಮಂಜುನಾಥ್ ಗೆ ಸನ್ಮಾನ ಮಾಡಿ ಜನ ಬೀಳ್ಕೊಡುಗೆ ನೀಡಿದ್ದಾರೆ. ಜನ ಮೆಚ್ಚಿದ ಸಿಬ್ಬಂದಿಗೆ ಮಾತ್ರ ಈ ರೀತಿಯ ಸನ್ಮಾನ ಸಿಗಲು ಸಾಧ್ಯ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close