ಸಂಸದರು ಇಲ್ಲವೆಂದಿದ್ದರೆ ಎಫ್ ಎಂ ಟ್ರಾನ್ಸ್ ಫಾರ್ಮರ್ ಸ್ಥಾಪನೆ ಕನಸಾಗುತ್ತಿತ್ತು!

10 kilowatt of FM radio has been installed in Shimoga. This transformer will cover a radius of 60 km. Today Union Minister of State for Information and Broadcasting Bharati Dr. L Murugan inaugurated.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಎಫ್ ಎಂ ರೇಡಿಯೋದ  10 ಕಿಲೋವ್ಯಾಟ್ ಸ್ಥಾಪಿಸಲಾಗಿದೆ. ಈ ಟ್ರಾನ್ಸ್ ಫಾರಂ 60 ಕಿ.ಮಿ ರೇಡಿಯಸ್ ನ್ನ ಕವರ್ ಮಾಡಲಿದೆ.  ಇಂದು ಕೇಂದ್ರ ರಾಜ್ಯ ಖಾತೆ ಮಾಹಿತಿ ಮತ್ತು‌ ಪ್ರಸಾರ ಭಾರತಿ ಸಚಿವ ಡಾ. ಎಲ್ ಮುರುಗನ್ ಉದ್ಘಾಟಿಸಿದರು.

ಇದರಿಂದ  ಶಿವಮೊಗ್ಗ ಮತ್ತು ಗ್ರಾಮಾಂತರ ಭಾಗಗಳಲ್ಲಿ ಎಫ್ ಎಂ ಪ್ರಸಾರವಾಗಲಿದೆ. ಕೆನೆಡಾದಿಂದ ಟ್ರಾನ್ಸ್ ಫಾರಂ ನ್ನ ತರಿಸಿ ಸ್ಥಾಪಿಸಲಾಗುತ್ತಿದೆ. ಆದರೆ ಸಂಸದ ರಾಘವೇಂದ್ರ ಅವರು ಶ್ರಮ ವಹಿಸಿ ಈ ಟ್ರಾನ್ಸ್ ಫಾರಂ ನ ಉದ್ಘಾಟನೆ ಕಾರ್ಯಕ್ರಮ ನಡೆದಿದೆ.

ಈ ಟ್ರಾನ್ಸ್ ಫಾರಂ  ತಂದಿಟ್ಟರೆ ಮುಗಿಲಿಲ್ಲ. ಈ ಟ್ರಾನ್ಸ್ ಫಾರಂ ಕೊಠಡಿಯನ್ನ ಏಸಿ ಅಳವಡಿಸಬೇಕಿದೆ. ಈ ಟ್ರಾನ್ಸ್ ಫಾರಂಗೆ ಇನ್ನೂ ಹತ್ತು ಹಲವು ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದೆ. ಸಂಸದರು ಇದ್ದಾರೆ ಎಂಬುದು ಒಂದು ಧೈರ್ಯ ಇದೆ ಬಿಟ್ಟರೆ, ಬಂಗಾರಪ್ಪನವರು ಸಿಎಂ ಆಗಿದ್ದಾಗ ಈ ಟವರ್ ಉದ್ಘಾಟನೆಗೊಂಡಿದ್ದು ಬಿಟ್ಟರೆ ಬೇರೆ ಅಭಿವೃದ್ದಿ ಕೆಲಸವೇ ಆಗಿಲ್ಲ.

ಪಾಳಾಗಿ ಬಿದ್ದಿದ್ದ ಟವರ್ ಕಟ್ಟಡಕ್ಕೆ ಸಂಸದರಿಂದ ಶಕ್ತಿ ತುಂಬಲಾಗುತ್ತಿದೆ.   ಒಂದು ವೇಳೆ ಸಂಸದರು ಇಲ್ಲವಾಗಿದ್ದರೆ, ಅಧಿಕಾರಿಗಳು ಹೀಗೆ ಕಾಲಕಳೆದು ಹೋಗುತ್ತಿದ್ದರು ಎಂಬ ಭಾವನೆ ಮೂಡಿದೆ.


ಇಂದು ಉದ್ಘಾಟನೆಯ ವೇಳೆ ಅಧಿಕಾರಿಗಳು ಸಚಿವರಿಗೆ ನೀಡುವ ಹೂವಿನ ಬೊಕೆಗೂ ಲೆಕ್ಕಾಹಾಕುತ್ತಿದ್ದಿದ್ದು, ಮತ್ತು ಮೀಡಿಯಾದವರು ನೀರಿನ ಬಾಟಲ್ ಕೇಳಿದರೆ ತಂದ ವಾಟರ್ ಬಾಟೆಲ್ ಗಳು ಖಾಲಿಯಾಗಿದೆ. ಹೆಚ್ಚಿನ ನೀರಿನ ಬಾಟೆಲ್ ಗೆ ಹಣವಿಲ್ಲವೆಂಬ ಮಾತುಗಳು ಕೇಳಿ ಶಾಕ್ ಆಗಿದೆ.  

ಹೆಚ್ಚಿನ ನೀರು ತಂದುಕೊಡಲು ಆಕಾಶವಾಣಿ ಅಧಿಕಾರಿಗಳ ಬಳಿ ಹಣವಿಲ್ಲ ಎನ್ನುವುದಾದರೆ, ಇಷ್ಟು ದೊಡ್ಡಮೊತ್ತದ ಮೂಲಸೌಕರ್ಯ ರಚಿಸಲು ಇವರ ಬಳಿ ಸಾಧ್ಯವಾಗುತ್ತಿತ್ತ ಎಂಬ ಪ್ರಶ್ನೆ ಮೂಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close