ಬಾಲಕೃಷ್ಣ ಯಾನೆ ಮಟನ್ ಬಾಲು ಬಂಧನ ವಿರೋಧಿಸಿ ಜೆಡಿಎಸ್ ಭರ್ಜರಿ ಪ್ರತಿಭಟನೆ

A complaint and a counter-complaint have been filed against Balakrishna Yane Mutton Balu, condemning the action of the police who detained Mutton Balu, JDS and BJP led a huge protest in front of Bhadravati Newtown police station today under the leadership of Chandra Gowda.

ಸುದ್ದಿಲೈವ್/ಶಿವಮೊಗ್ಗ

ಬಾಲಕೃಷ್ಣ ಯಾನೆ ಮಟನ್ ಬಾಲು ವಿರುದ್ಧ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಮಟನ್ ಬಾಲು ಅವರನ್ನ ವಶಕ್ಕೆ ಪಡೆದಿರುವ ಪೊಲೀಸರ ಕ್ರಮವನ್ನ ಖಂಡಿಸಿ ಇಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಎದುರು ಚಂದ್ರೇಗೌಡರ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಭರ್ಜರಿ ಪ್ರತಿಭಟನೆಗೆ ಇಳಿದಿದೆ. 


ಹೋರಾಟಗಾರ ಬಾಲಕೃಷ್ಣರ ಬಂಧನವನ್ನ ವಿರೋಧಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ನ್ಯೂಟೌನ್ ಪೊಲೀಸ್ ಠಾಣೆ ಎದುರು ಘೋಷಣೆಯನ್ನ ಕೂಗಲಾಗುತ್ತಿದೆ. 

ನಿನ್ನೆ ಭದ್ರಾವತಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ಜಾಗದ ವಿಚಾರದಲ್ಲಿ ಬಾಲಕೃಷ್ಣ ಮತ್ತು ಇತರರೊಂದಿಗೆ ಗಲಾಟೆಯಾಗಿದೆ. ಬಾಲಕೃಷ್ಣರ ವಿರುದ್ಧ ಅಟ್ರಾಸಿಟಿ ಪ್ರಕರಣ ಸಹ ದಾಖಲಾಗಿದೆ. ಬಾಲಕೃಷ್ಣ ಅವರು ಸಹ ಇದಕ್ಕೆ ಪ್ರತಿದೂರು ದಾಖಲಿಸಿದ್ದರು. 

ಆದರೆ ಶಿವಮೊಗ್ಗದ ಮೆಗ್ಗಾನ್ ನಲ್ಲಿದ್ದ ಬಾಲಕೃಷ್ಣರನ್ನ ಭದ್ರಾವತಿ ಪೊಲೀಸರು ಬಂಧಿಸಿ ಕರೆದೊಯ್ಯದಿರುವುದಾಗಿ ಜೆಡಿಎಸ್ ಕಾರ್ಯಕರ್ತರು ತಿಳಿಸಿದ್ದು, ಬಾಲಕೃಷ್ಣರನ್ನ ರಾಜಕೀಯ ಒತ್ತಡದಲ್ಲಿ ಬಂಧಿಸಲಾಗಿದೆ ಎಂಬುದು ಅವರ ಆರೋಪವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close