HMP virus detected in Shimoga
ಸುದ್ದಿಲೈವ್/ಶಿವಮೊಗ್ಗ
ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುವ ಮುನ್ನ ಹೆಚ್ ಎಂಪಿ ವೈರಸ್ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದೆ ಎಂಬುದು ಆತಂಕಕಾರಿ ವಿಷಯವಾದರೂ, ಈ ವೈರಸ್ ಬಂದವರೆಲ್ಲರೂ ಗುಣಮುಖರಾಗಿರುವುದು ಸಂತೋಷದ ವಿಷಯವಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಐದು ಜನ ಮಕ್ಕಳಿಗೆ ಈ ಸೋಂಕು ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ನಿರಾಕರಿಸಿದೆ.
ಶಿವಮೊಗ್ಗದಲ್ಲಿ ಎಂಎಲ್ ಸಿ ಹಾಗು ಮಕ್ಕಳ ವೈದ್ಯ ಡಾ.ಧನಂಜಯ ಸರ್ಜಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಎಚ್ ಎಂಪಿ ವೈರಸ್ ಬಗ್ಗೆ ಆತಂಕ ಅಥವಾ ಗಾಬರಿ ಪಡುವ ಅವಶ್ಯಕತೆ ಇಲ್ಲ. ಕಾಮನ್ ಆಗಿ ಬಂದು ಹೋಗುವ ವೈರಸ್ ಆಗಿದೆ. ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಟೆಸ್ಟ್ ಗೆ ಕಳುಹಿಸಿದ್ದೇವು. ಐದು ಮಕ್ಕಳಿಗೆ ಹೆಚ್ ಎಂಪಿ ಪಾಸಿಟಿವ್ ಬಂದಿತ್ತು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ಸೋಂಕು ಬಂದಿತ್ತು. ಯಾವುದೇ ತೊಂದರೆ ಮಾಡುವುದಿಲ್ಲ. ಎಲ್ಲಾ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ. ಟೆಸ್ಟ್ ಮಾಡಿದರೆ ಎಲ್ಲಾ ಮಕ್ಕಳಿಗು ಬರುತ್ತದೆ. ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
6 ತಿಂಗಳಿನಿಂದ 4 ವರ್ಷದೊಳಗಿನ ಮಕ್ಕಳಿಗೆ ಸೋಂಕು ಬಂದಿತ್ತು. ಆದರೆ ಈಗ ಯಾವ್ದು ಪಾಸಿಟಿವ್ ಬಂದಿಲ್ಲ. ಸೆಪ್ಟೆಂಬರ್ ಅಕ್ಟೋಬರ್ ನವಂಬರ್ ತಿಂಗಳಿನಲ್ಲಿ ಮಕ್ಕಳಿಗೆ ವೈರಸ್ ಬರೋದು ಸಾಮಾನ್ಯ. ಈಗ ಯಾವ ಮಕ್ಕಳಿಗು ಬಂದಿಲ್ಲ ಎಂದಿದ್ದಾರೆ.