ಸುದ್ದಿಲೈವ್/ಭದ್ರಾವತಿ
ನಿನ್ನೆ ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ ನಲ್ಲಿ ಅಕ್ರಮ ದಂಧೆಗಳ ವಿರುದ್ಧ ಮಾಹಿತಿ ನೀಡುತ್ತಿದ್ದ ಕಾರಣ ಶಾಂತಕುಮಾರ್ ಯಾನೆ ಶ್ಯಾನು ಅವರ ಕೊಲೆಯಾಗಿದೆ ಎಂದು ದೂರು ದಾಖಲಾಗಿದೆ.
ಶಾಂತ ಕುಮಾರ್ 13 ವರ್ಷಗಳ ಹಿಂದೆ ವೇದಾವತಿ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದರು. ಆದರೆ ಶಾಂತಕುಮಾರ್ ಲೇಪಾಕ್ಷಿ ಮತ್ತು ಆತನ ಕಡೆಯವರ ಅಕ್ರಮ ದಂಧೆಗಳ ಬಗ್ಗೆ ಶಾಂತಕುಮಾರ್ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಕೊಡುತ್ತಿದ್ದ ಕಾರಣ ಲೇಪಾಕ್ಷಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕುತ್ತಿದ್ದ ಎಂಬ ಆರೋಪ ಕೇಳಿ ಬರುತ್ತಿದ್ದವು.
ಶಾಂತಕುಮಾರ್ ಜ.22 ರಂದು ರಾತ್ರಿ 8-30 ರ ಸಮಯದಲ್ಲಿ ತಮ್ಮ ತೋಟಕ್ಕೆ ಹೋಗುವಾಗ ಮುರಾರ್ಜಿ ಶಾಲೆಯ ಬಳಿ ಹೋಗುವಾಗ ಅಲ್ಲೇ ಇದ್ದ ಲೇಪಾಕ್ಷಿಯ ಸಂಬಂಧಿಕರಾದ ಅತೀಶ್ ಮತ್ತು ಅಭಿಯನ್ನ ಶಾಂತಕುಮಾರ್ ರಮೇಶ್(ಚೌಡಮ್ಮನ ಮಗ) ಬಗ್ಗೆ ವಿಚಾರಿಸಿ ನಿನ್ನೆ ರಾತ್ರಿ ಆತ ನಿಮ್ಮ ತೋಟದಲ್ಲಿದ್ದನಾ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರದಲ್ಲಿ ಅತೀಶ್ ಮತ್ತು ಅಭಿ ಶಾಂತಕುಮಾರ್ ಗೆ ಜಾತಿ ನಿಂದನೆ ಮಾಡಿ ನಿನಗೆಯಾಕೋ ಇದೆಲ್ಲಾ ಎಂದು ಬೈದು ಹೊಡೆದಿದ್ದಾರೆ. ಶ್ಯಾನು ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ರಮೇಶ್ ಗೆ ಕರೆ ಮಾಡಿದ್ದಾನೆ. ತಕ್ಷಣವೇ ರಮೇಶ್, ಪತ್ನಿ, ಸತೀಶ್ ಶ್ರೀಕಾಂತ್ ಜೊತೆ ಹೋಗುವಾಗ ಶ್ಯಾನು ಹೆದರಿಕೊಂಡು ಬಂದಿದ್ದಾನೆ.
ಈ ವೇಳೆ ಲೇಪಾಕ್ಷಿ ಮತ್ತು ಷಣ್ಮುಖ ಎಂಬುವರು ಬಂದಿದ್ದು ಅವರ ಬೆನ್ನಲ್ಲೇ ಮತ್ತೊಂದು ಬೈಕ್ ನಲ್ಲಿ ಬಂದ ಅತೀಶ್ ಮತ್ತು ಅಭಿ ಮಚ್ಚು ಬೀಸಿದ್ದಾರೆ. ಕಾಲಿಗೆ ಮತ್ತು ಬೆನ್ನನ್ನ ಸೀಳಿದ ಮಚ್ಚು ಶ್ಯಾನು ಅವರ ಪ್ರಾಣವನ್ನ ಎಗುರಿಸಿದೆ. ಬೈಕ್ ನಲ್ಲಿ ಹೋಗುವಾಗ ಅಭಿ ಮತ್ತು ಅತೀಶ್, ಶ್ಯಾನು ಕಡೆಯವರಿಗೆ ಮಚ್ಚು ತೋರಿಸಿ ನಿಮ್ಮನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ತಕ್ಷಣವೇ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಶ್ಯಾನು ಮಾರ್ಗ ಮದ್ಯೇದಲ್ಲಿ ಸಾವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಲೇಪಾಕ್ಷಿ ಮತ್ತು ಅವರ ಕಡೆಯವರ ಅಕ್ರಮದಂಧೆಗಳನ್ನ ಸಂಬಂಧ ಪಟ್ಟ ಇಲಾಖೆಯವರಿಗೆ ಮಾಹಿತಿ ಕೊಡುತ್ತಿದ್ದ ಕಾರಣ ಶ್ಯಾನು ಅವರನ್ನ ಮಚ್ಚಿನಿಂದ ಕೊಲೆ ಮಾಡಿರುವುದಾಗಿ ಪತ್ನಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಕ್ರಮ ದಂಧೆಗಳ ಬಗ್ಗೆ ಭದ್ರಾವತಿಯಲ್ಲಿ ಹೆಚ್ಚಾಗಿದೆ ಎಂಬ ಹಲವು ಆರೋಪಗಳು ಕೇಳಿ ಬರುತ್ತಿದ್ದ ಬೆನ್ನಲ್ಲೇ ಈ ಕೊಲೆ ನಡೆದಿರುವುದು ಆರೋಪಕ್ಕೆ ಪುಷ್ಠಿ ನೀಡುವಂತಾಗಿದೆ. ಈ ಹಿಂದೆಯೂ ಅನುಮಾನಸ್ಪದ ಸಾವುಗಳು, ಆತ್ಮಹತ್ಯೆಗಳು ನಡೆದಿದ್ದವು.
ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಗೌಡರ ನೇತೃತ್ವದಲ್ಲಿ ಎಸ್ಪಿಗೆ ಮನವಿ ಸಹ ನೀಡಲಾಗಿತ್ತು. ನಿನ್ನೆ ಪ್ರಾಥಮಿಕ ಮಾಹಿತಿಯ ಅಡಿಯಲ್ಲಿ ಟ್ರಾನ್ಸ್ ಫಾರ್ಮರ್ ವಿಚಾರದಲ್ಲಿ ಗಲಾಟೆ ನಡೆದು ಕೊಕೆಯಾಗಿದೆ ಎಂದು ವೆಬ್ ಸೈಟ್ ಸುದ್ದಿ ಬಿತ್ತರಿಸಿತ್ತು. ಆದರೆ ಇದು ಅಕ್ರಮ ದಂಧೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುತ್ತಿದ್ದ ಕಾರಣ ಎಂದು ಮೃತರ ಪತ್ನಿ ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ಲೇಪಾಕ್ಷಿ ಮತ್ತು ಅವರ ಪತ್ನಿಯ ಅಕ್ಕನ ಮಕ್ಕಳಾದ ಅತೀಶ್ ಮತ್ತು ಅಭಿಗೆ ಗಲಾಟೆ ನಡೆದಿರುವ ವೇಳೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಲೇಪಾಕ್ಷಿ ಪತ್ನಿ ಕೌಂಟರ್ ದೂರನ್ನ ನೀಡಿದ್ದು, ಈ ದೂರು ದಾಖಲಾಗಿರುವ ಬಗ್ಗೆ ಸ್ಪಷ್ಟನೆಯಿಲ್ಲವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೇಪಾಕ್ಷಿ ಮತ್ತು ಆತನ ಕಡೆಯವರು |