ಭೀಮ್ ಸಮ್ಮೇಳನದಲ್ಲಿ ಎನ್ ಮಹೇಶ್ ಹೇಳಿದ್ದೇನು?

Former minister N Mahesh said that since the day the constitution was made till the day the constitution was promulgated, the BJP has been holding Bhim Sammelan all over the country.


ಸುದ್ದಿಲೈವ್/ಶಿವಮೊಗ್ಗ

ಸಂವಿಧಾನ ರಚನೆಗೊಂಡ ದಿನದಿಂದ ಸಂವಿಧಾನ ಜಾರಿಯಾದ ದಿನದವರೆಗೆ ಬಿಜೆಪಿ ದೇಶಾದ್ಯಂತ ಭೀಮ್ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ ನಡೆಸುತ್ತಿದೆ ಎಂದು ಮಾಜಿ ಸಚಿವ ಎನ್ ಮಹೇಶ್ ತಿಳಿಸಿದರು. 

ನಗರದ ದೇವಾಂಗ ಹಾಸ್ಟೆಲ್ ನಲ್ಲಿ ಸಂವಿಧಾನ್ ಸಮ್ಮಾನ್ ಪ್ರಯುಕ್ತ ಭೀಮ್ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು, ಸಂವಿಧಾನ ರಚನೆಯು ನ.26 ರಂದು ನಡೆದಿತ್ತು. ಸಂವಿಧಾನ ಜ.26 ರಿಂದ ಜಾರಿಯಾಗಿತ್ತು. ಸುಳ್ಳು ಊರು ತುಂಬ ತಿರುಗಾಡಿಕೊಂಡು ಬಂದ ಹೊತ್ತಿಗೆ ಸತ್ಯ ಹೊಸ್ತಿಲು ದಾಟಿರಲಿಲ್ಲ. ಹಾಗಾಗಿ ಸತ್ಯ ಸುಳ್ಳುಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

ಬಿಜೆಪಿ ಅಂಬೇಡ್ಕರ್ ಮತ್ತು ದಲಿತ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಮುಗ್ಧರನ್ನ ನಂಬಿಸಲು ಕಾಂಗ್ರೆಸ್ ಹೊರಟಿದೆ. ವಿಕಾಸ ಪುತ್ತೂರು ಅವರು ಅಂಬೇಡ್ಕರ್ ಅವರ ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಅಥವಾ ಬಿಜೆಪಿನಾ ಎಂದು ಬರೆದಿದ್ದಾರೆ. 

ಇದರ ಆಧಾರದ ಮೇಲೆ ಕಾರ್ಯಗಾರ ನಡೆಸಲಾಗಿತ್ತು. ಸಂವಿಧಾನ ಪೀಠಿಕೆಯನ್ನ ಬರೆಯಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾಂಗ್ರೆಸ್ ಬಾಬಾಸಾಹೇಬರಿಗೆ ಗೌರವ ನೀಡಿದೆಯಾ ಎಂದು ಪ್ರಶ್ನಿಸಿದರು. ಜೈ ಬಾಪು, ಜೈಭೀಮ್ ಮತ್ತು ಜೈ ಸಂವಿದಾನ ಎಂಬ ಘೋಷಣೆಯನ್ನ ಕಾಂಗ್ರೆಸ್ ಬೆಳಗಾವಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದೆ ಎಂದರು.

ಜೈ ಬಾಪು ಬಗ್ಗೆ ಮಾತನಾಡೊಲ್ಲ. ಜೈ ಭೀಮ್ ಎಂದರೆ ಭೀಮನ ಹೋರಾಟಕ್ಕೆ ಜೈಯವಾಗಲಿ ಎಂಬುದು ಇದರ ಉದ್ದೇಶ ಆದರೆ ಬಾಬಾ ಸಾಹೇಬರು ಬದುಕಿದ್ದಾಗ ಗೌರವ ನೀಡಿದಮತ್ತಾ ಎಂದು ಪ್ರಶ್ನಿಸಿದರು. 1946 ರಲ್ಲಿ ಬ್ರಿಟೀಶ್ ರವರು ಸಂವಿಧಾನ ಬರೆಯಲು ಹೋಗುವ ಸ್ಥಾನಕ್ಕೆ ನಡೆದ ಚುನಾವಣೆಯಾಗಿತ್ತು. ಕಾಂಗ್ರೆಸ್ ಪಿತೂರಿ ಮಾಡಿ ಸೋಲಿಸಿದ್ದರು. 

ಜೋಗೆಂದರ್ ಅವರ ಸಹಾಯದಿಂದ ಪ.ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದು ಸಂವಿಧಾನ ರಚನೆಗೆ ಆಯ್ಕೆಯಾಗಿದ್ದರು. ಜೈಸೂರ್ ಖುಲ್ ನ ಜಾಗದಿಂದ ಆಯ್ಕೆಯಾದ ಅಂಬೇಡ್ಕರ್ ಜಾಗವನ್ನ ನೆಹರು ಅವರು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು. ಕಾರಣ ಬಾಬಾಸಾಹೇಬರನ್ನ ಸೋಲಿಸುವ ಉದ್ದೇಶದಿಂದ  ಎಂದು ಹೇಳಿದರು. 

1949 ರಲ್ಲಿ ಸಂವಿಧಾನ ಜಾರಿಯಾಗುತ್ತೆ. ಸಂವಿಧಾನ ಕೇವಲ ಪರಿಶಿಷ್ಟ ಜಾತಿಗೆ ಸೇರಿದೆ ಎಂಬುದನ್ನ ಕಾಂಗ್ರೆಸ್ ಬಿಂಬಿಸಿತ್ತು. ಅದನ್ನ ಅಲ್ಲಗೆಳೆಸಿದವರು ಪ್ರಧಾನಿ ಮೋದಿಯವರು. 1952 ರಲ್ಲಿ‌ಮೊ್ಲನೇ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಗಲೂ ಬಾಬಾಸಾಹೇಬರನ್ನ ಸೋಲಿಸಲಾಯಿತು. ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ಬಾಬಾ ಸಾಹೇಬರನ್ನ ಪಿತೂರಿಯಿಂದ ಸೋಲಿಸಲಾಯಿತು. ಅವರ ಅಸಿಸ್ಟೆಂಟ್ ನ್ನ ಬಾಬಾಸಾಹೇಬರ ವಿರುದ್ಧ ಸ್ಪರ್ಧಿಸಿ 14000 ಅಂತರದಿಂದ ಸೋಲಿಸಲಾಯಿತು. ಇದರಲ್ಲಿ 74 ಸಾವಿರ ಮತಗಳನ್ನ ಅನಾನ್ಯ ಮಾಡಿ ಸೋಲಿಸಲಾಯಿತು. 1956 ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ದೇಹಾಂತ್ಯವಾಗಿತ್ತು. ಆದರೆ ಅವರ ಸಮಾದಿಗೆ   ಎಂದು ದೂರಿದರು.  

ಶಾಸಕ ಚೆನ್ನಬಸಪ್ಪ ಮಾತನಾಡಿ, ಎನ್ ಮಹೇಶ್ ಈ ಭೀಮ್ ಸಮ್ಮೇಳನಕ್ಕೆ ಯಾಕೆ ಬೇಕು ಎಂದರೆ ಅವರು ಬಿಎಸ್ ಪಿ ಯಿಂದ ಬಿಜೆಪಿಗೆ ಬಂದವರು. ಸಂವಿಧಾನವನ್ನ ಅರೆದು ಕುಡಿದವರು. ಹಾಗಾಗಿ ಅವರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು. 

300 ಮತಗಟ್ಟೆಯಲ್ಲಿ ಸಂವಿಧಾನ ಹೇಳಿಕೊಡಲಾಗುವುದು ಈ ಕಾರ್ಯಕ್ರಮ ಜ.25 ರಿಂದ ನಡೆಯಲಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸುವ ಕಾರಣ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close