ಹರಿವಾಣ ಕಳುವಾಗಿದೆ-ಆರಗ ಜ್ಞಾನೇಂದ್ರ



MLA Araga Gyanendra announced that the price of Hariwan nut, which was found in every nut farmer's home in the highlands, is likely to increase.

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಲ್ಲಿ ಪ್ರತಿ ಅಡಿಕೆ ಬೆಳೆಗಾರನ ಮನೆಯಲ್ಲಿ ಕಾಣುತ್ತಿದ್ದ ಹರಿವಾಣ ಅಡಿಕೆಗೆ ದರ ಹೆಚ್ಚಾಗುತ್ತಿದ್ದಂತೆ ಮಾಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು. 

ಅವರು ಸಾಗರದ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ, ಆಪ್ಸಕೋಸ್, ತೋಟಗಾರ್ಸ್ ಅವರ  ಅಡಿಕೆಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಆದರೆ ಅಡಿಕೆ ಬೆಳೆಗಾರರ ತಮ್ಮ ಬೆಳೆಗೆ ಮಾರುಕಟ್ಟೆ ಮಾಡದ ಕಾರಣ ಅಡಿಕೆ ಬೆಳೆಗಳಲ್ಲಿ ಏರು ಪೇರು ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಹೊರನಾಡಿನ ದೇಭೀಮೇಶ್ವರ ಜೋಷಿ ಮಾತನಾಡಿ, ಅಡಿಕೆ ಪ್ರಯೋಗಾಲಯದಲ್ಲಿ ಇರುವ ಮಾಹಿತಿ ಸರಿಯಲ್ಲ. ಅಡಿಕೆಯನ್ನ‌ಮಾತ್ರ ಪ್ರಯೋಗ ನಡೆಸಿದರೆ ಆರೋಗ್ಯಕ್ಕೆ ಹಾನಿಕರ ಆಗುವುದಿಲ್ಲ. ಇಡೀ ಅಡಿಕೆ ಬೆಳೆಗಾರರಿಗೆ ತೂಗುಗತ್ತಿಯನ್ನ ಬದಿಗೊತ್ತಬಹುದಾಗಿದೆ ಎಂದು ತಿಳಿಸಿದರು. 

ಅಡಿಕೆ ಹಾನಿಕರ ಎಂಬುದಾದರೆ ದೇವರ ಪಾದಗಳಿಗೆ ಇಡಲು ಸಾಧ್ಯವಾಗುತ್ತಿತ್ತಾ ಎಂದು ತಿಳಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಭಯ ಪಡಬಾರದಂತೆ ನೋಡಿಕೊಳ್ಳಬೇಕು. ಸೊಪ್ಪುಬೆಟ್ಟುವನ್ನ ರಕ್ಷಣೆ ಮಾಡಬೇಕು. ಅಡಿಕೆ, ಕಾಫಿಬೆಳೆಗಾರರಿಂದ ಕಾಡು ನಾಶ ಮಾಡಿಲ್ಲ ಎಂದರು.

ರಾಜ್ಯದಲ್ಲಿ ರಾಷ್ಡ್ರೀಯ ಉದ್ಯಾನವನವಿದೆ. ಮಂಗಳಗಳನ್ನ‌ಮತ್ತು ಕಾಡುಪ್ರಾಣಿಗಳನ್ನ ಹಿಡಿದು ಅಲ್ಲಿ ಬಿಡುವ ವ್ಯವಸ್ಥೆ ಆಗಬೇಕು. ಅಡಿಕೆ ಬೆಳೆಗಾರರು ವಾಣಿಜ್ಯ ಬೆಳೆಯನ್ನಾಗಿ ಮಾಡಬೇಲಿದೆ. ಬಣ್ಣ ತಯಾರಿಕೆಯಲ್ಲಿ ಬಳಸುವಂತೆ ವ್ಯವಸ್ಥೆ ಮಾಡಬೇಕಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಗಟ್ಟಿಯಾಗಿ ತೀರ್ಮಾನಿಸಬೇಕಿದೆ ಎಂದು ಮನವಿ ಮಾಡಿದರು. ಈ ವೇಳೆ ಅಡಿಕೆ ಬೆಳೆಗಾರರ ಸಂಘಕ್ಕೆ 2 ಲಕ್ಷ ರೂ.ವನ್ನ ಸಮಾವೇಶಕ್ಕೆ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close