ಸುದ್ದಿಲೈವ್/ಶಿವಮೊಗ್ಗ
ಸಂವಿಧಾನ ಎಲ್ಲಾರಿಗೂ ಗೌರವ ತಂದುಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ನಗರದ ಸಂವಿಧಾನ ಸಮ್ಮಾನ್ ಕಾರ್ಯಕ್ರಮ ನಗರದ ಪೆಸಿಟ್ ಕಾಲೇಜಿನಲ್ಲಿ ನಡೆದಿದೆ. ಈ ವೇಳೆ ಮಾತನಾಡಿದ ಅವರು, ದೇಶಾದ್ಯಂತ ಸಮ್ಮಾನ ಅಭಿಯಾನವನ್ನ ಅಚರಿಸಲಾಗುತ್ತಿದೆ. ಸಂವಿಧಾನ ರಚನೆಯಾಗಿ 75 ವರ್ಷ ಕಳೆದಿದೆ. ಪ್ರಧಾನಿ ಮೋದಿಯ ಆಶಯದಂತೆ ದೇಶಕ್ಕೆ ಶಕ್ತಿ ತುಂಬಿದ ಸಂವಿಧಾನಕ್ಕೆ ಅಭಿಯಾನ ಆರಂಭಿಸಲಸಗಿದೆ ಎಂದರು.
ಭಾರತ 140 ಕೋಟಿ ಜನಸಂಖ್ಯೆ ಹೊಂದಿದೆ. ಸಾವಿರಾರು ಭಾಷೆ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರೆ ಸಂವಿಧಾನವಾಗಿದೆ. ಬಾಬಾಸಾಹೇಬರು ದೇಶದಲ್ಲಿ ಜನ್ಮ ತಾಳದೆ ಹೋಗಿದ್ದರೆ ಇಂತಹ ಸಂವಿಧಾನ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಪವಿತ್ರ ಸಂವಿಧಾನಕ್ಕೆ ಹಾಗೂ ಜಾರಿಗೆ ತಂದ ಬಾಬಾಸಾಹೇಬರಿಗೆ ಗೌರವ ಕೊಡಬೇಕು ಎಂದರು.
ಬಾಬಾಸಾಹೇಬರಿಗೆ ಗೌರವ ಕೊಡುವ ಕೆಲಸ ಮಾಡುತ್ತಿದೆ ಎಂದರೆ ಅದು ಬಿಜೆಪಿ ಅಪಮಾನ ಮಾಡುತ್ತಿರುವ ಪಕ್ಷವೆಂದರೆ ಕಾಂಗ್ರೆಸ್ ನವರಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನ ತುರುಚುವ ಮೂಲಕ ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನ ಗೌರವಿಸಬೇಕಿದೆ ಎಂದರು.
ಸಂಸದರ ಮಾತು
ಸಂಸದ ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯದ ವೇಳೆ ಇದ್ದ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆಯಾಗಿದೆ. ಕಾಂಗ್ರೆಸ್ ನ್ನ ವಿಸರ್ಜಿಸಲು ಬಾಪು ಹೇಳಿದ್ದರು. ಆದರೆ ಬಾಪು ಮಾತನ್ನ ಮೀರಿ ಕಾಂಗ್ರೆಸ್ ನಡೆದು ಬಂದಿದೆ. ಸಂವಿಧಾನ ರಚನೆಕಾರ ಅಂಬೇಡ್ಕರ್ ಅವರನ್ನ ಪಾರ್ಲಿಮೆಂಟ್ ಗೆ ಬಾರದಂತೆ ತಡೆಯಲಾಗಿತ್ತು. ಬಂಗಾಲಿಯಲ್ಲಿ ಗೆದ್ದು ಬಂದ ಅಂಬೇಡ್ಕರ್ ಅವರ ಕ್ಷೇತ್ರಕ್ಕೆ ಬಂಗಾಲಿಗೆ ಮಾರಲಾಗಿತ್ತು ಎಂದು ದೂರಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ನ ಸಮಾವೇಶ ನಡೆಸಲಾಗಿದೆ. ಸಂವಿಧಾನವನ್ನ ಪ್ರಾಮಾಣಿಕವಾಗಿ ಪಾಲಿಸಲು ಸಾಧ್ಯವಾಯಿತಾ? ಎನೆರ್ಜೆನ್ಸಿ ತಂದು ಕರಾಳ ದಿನವನ್ನ ಆಚರಿಸಲಾಗಿತ್ತಲ್ಲಾ? ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದು ಕಾಂಗ್ರೆಸ್ ಎಂದರು.
ಭಾರತ ರತ್ನ ಮೊದಲು ಪಡೆದವರು ನೆಹರು ಎರಡನೇಯವರು ಇಂದಿರಾಗಾಂಧಿ, ಮೂರನೇಯವರು ರಾಜೀವ್ ಗಾಂಧಿ ಗೆ ನೀಡಲಾಯಿತು. ಆಗ ಡಾ. ಬಾಬಾಸಾಹೇಬರ ನೆನಪು ಬರಲಿಲ್ವಾ? ಅಬಾಬಾ ಸಾಹೇಬರಿಗೆ ಭಾರತ ರತ್ನ ನೀಡಿದ್ದು ಕಾಂಗ್ರೆಸೇತರ ಸರ್ಕಾರ ಬರಬೇಕಾಯಿತು. ಮೀಸಲಾತಿಯನ್ನೂ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ತನ್ನ ಹಿತಕ್ಕಾಗಿಯೇ ಹೊರತು ದಲಿತರ ಉದ್ಘಾರಕ್ಕಲ್ಲ ಎಂದು ವಿವರಿಸಿದರು.
ಕೇಂದ್ರ ಸಚಿವ ಮುರುಗನ್ ಮಾತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಾ.ಮುರುಗನ್ ಮಾತನಾಡಿ, ಸಂವಿಧಾನವನ್ನ ತನ್ನ ಹಿತಕ್ಕೆ ಬದಲಾಯಿಸಿ ತಿದ್ದುಪಡಿಯಮ ಮೂಲಕ ಕಾಂಗ್ರೆಸ್ ಹೇಗೆ ನಡೆದುಕೊಂಡಿತು ಎಂಬುದನ್ನ ಜನರ ಮುಂದೆ ಬಿಚ್ಚಿಡಬೇಕಿದೆ. ನಮ್ಮ ಸಂವಿಧಾನ ಎಷ್ಟು ಪವಿತ್ರವಾದುದ್ದು. ಸಂಸತ್ ನಲ್ಲಿ 1995 ರ ವರೆಗೆ ಅಂಬೇಡ್ಕರ್ ಫೋಟೊ ಸಹ ಕಾಂಗ್ರೆಸ್ ಅಳವಡಿಸಿರಲಿಲ್ಲ. ಅದಕ್ಕೂ ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರ್ಕಾರ ಬರಬೇಕಾಯಿತು.
ಅಂಬೇಡ್ಕರ್ ಅವರ ಜನ್ಮಸ್ಥಳ, ಅಂಬೇಡ್ಕರ್ ಓದಿದ ಜಾಗ, ಅವರ ಬೆಳವಣಿಗೆಯನ್ನ ಪಂಚತೀರ್ಥ ಹೆಸರಿನಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅರ್ಥಶಾಸ್ತ್ರ ತಜ್ಞರಾದ ಅಂಬೇಡ್ಕರ್ ಅವರ ಹೆಸರಿನಲ್ಲಿ ಮೋದಿ ಸರ್ಕಾರ ಕಾರ್ಮಿಕರ ಸಂಬಳಕ್ಕಾಗಿ ಬೀಮ್ ಆಪ್ ಜಾರಿ ತರಲಾಗಿದೆ. ಎಂದು ವಿವರಿಸಿದರು.