ಸುದ್ದಿಲೈವ್/ಶಿವಮೊಗ್ಗ
ಕಾಳಿಕಾಪರಮೇಶ್ವರಿ ಸಂಘವು 100 ವರ್ಷದ ಕಡೆ ದಾಪುಕಾಲು ಹಾಕುತ್ತಿದ್ದು, ಈ ತಿಂಗಳು ಚುನಾವಣೆ ಜ.05 ರಂದು ನಡೆಯಲಿದೆ ಎಂದು ಮಾಜಿ ನಿರ್ದೇಶಕ ರಾಮಣ್ಣ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ1936 ರಂದು ಬಜಾರ್ ನಲ್ಲಿ 21 ಜನರೊಂದಿಗೆ ಆರಂಭಗೊಂಡ ಸಹಕಾರಿ ಬ್ಯಾಂಕ್ 2024ರ ಡಿ.31 ರಂದು 7236 ಸದಸ್ಯರನ್ನ ಹೊಂದಿದ್ದು 3,64,63,750 ಗಳ ಷೇರು ಬಂಡವಾಳಗಳನ್ನ ಹೊಂದಿರುತ್ತೇವೆ. ಭದ್ರಾವತಿಯಲ್ಲಿ 3 ಶಾಖೆಗಳನ್ನ ಹೊಂದಿರುತ್ತದೆ ಎಂದರು.
1980 ಕ್ಕೆ ಇಲ್ಲಿಯವರೆಗೆ ಸಂಘವು ಎ ದರ್ಜೆಗೆ ಏರಿದೆ. ಇಲ್ಲಿಯವರೆಗೂ 2 ಮಿಲಿಯನ್ ರೂ.ಗಳ ವ್ಯವಹಾರ ಮಾಡಲಾಗಿದೆ.2023-24 ರಂದು 1.25 ಕೋಟಿ ಹಣ ನಿವ್ವಳ ಲಾಭ ಗಳಿಸಿದೆ. ಸದಸ್ಯರ
15 ಜನ ನಿರ್ದೇಶಕರ ಸ್ಥಾನಕ್ಕೆ 38 ಜನ ಸ್ಪರ್ಧಿಸಿದ್ದು, 4702 ಜನ ಮತದಾರರಿದ್ದಾರೆ. ಈ ಬಾರಿ ಚುನಾವಣೆಗೆ ಹೆಚ್ಚಿನ ಪೈಪೋಟಿ ಇದೆ. ತವರಿನ ಉಡುಗರೆ, ಪಿಂಚಣಿ, ವಿದ್ಯಾನಿಧಿಯನ್ನ, ಜಾಮೀನ ಸಾಲ, ವಿಶೇಷ ಜಾಮೀನು ಸಾಲ ಆರಂಭಿಸಿದ್ದೇವೆ.
ತವರಿನ ಉಡುಗರೆ ಠೇವಣೆ ಯೋಜನೆಯನ್ನ 10 ಸಾವಿರ ಠೇವಣಿ ಮಾಡುವ ಮಹಿಳಾ ಸದಸ್ಯರಿಗೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ 1000 ರೂ. ಮೊತ್ತದ ಬಾಗಿಣ ರೂಪದಲ್ಲಿ ನೀಡಲಾಗುವುದು. ಚುನಾವಣೆ ಸವಾಲಾಗಿದೆ. ಈ ಬಾರಿ ಒಂದು ಚುನಾವಣೆಯನ್ನೂ ಸೋಲಬಾರದು ಎಂದು ತೀರ್ಮಾನಿಸಿದ್ದೇವೆ ಎಂದರು.
ಅಣ್ಣಪ್ಪ ಸ್ವಾಮಿ ಎಲ್, ಆರ್ ಗಿರೀಶ್ (ಧನಲಕ್ಷ್ಮಿ) ಸಿ ಪ್ರಕಾಶ್, ಮಾಲ್ತೇಶ್ (ಮಾಲು)ಮಾಲ್ತೇಶ್ ಯುಟಿ, ಎಸ್.ರಮೇಶ್ (ರಾಮಣ್ಣ)ಅಧ್ಯಕ್ಷ ವಿನೋದ್ ಕುಮಾರ್ ಸೇಟ್, ಶರತ್, ಸೋಲಂಕಿ, ಕೆ ಸತೀಶ್, ಜಿ ಮಾಲ್ತೇಶ್, ರಾಘವೇಂದ್ರ ಕೆ. (ಪಿಗ್ಮಿ), ವಿನೋದ್ ಕುಮಾರ್ ಸೇಟ್, ಶರತ್ ಎಲ್ ಜಿ (ಶರು), ಸತೀಶ್ (ಮೆಂತೆ), ಸೋಮೇಶ್ ಪಿ ಸೇಟ್, ಜಿ.ಗಿರೀಶ್ (ಮಚ್ಚೆಗಿರಿ), ಯುವರಾಜ್ ಆರ್ ಸೋಲಂಖೆ, ಟಿ.ಅರ್ ಮೀನಾಕ್ಷಿ, ಶೋಭಾ ಎಂ ಶೇಟ್(ರಂಗೋಲಿ) ಇವರಿಗೆ ಗೆಲ್ಲಿಸುವಂತೆ ಕೋರಿದರು.