ಐಡಿಎ ಅಧ್ಯಕ್ಷರಾಗಿ ಡಾ.ಗೌತಮ್ ನೇಮಕ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೆಸರಾಂತ ದಂತ ತಜ್ಞ ಡಾಕ್ಟರ್ ಗೌತಮ್  ಅವರು 2025-26 ನೇ ಸಾಲಿನ   ಭಾರತೀಯ ದಂತ ವೈದ್ಯಕೀಯ ಸಂಘ  (IDA) ಶಿವಮೊಗ್ಗ  ಜಿಲ್ಲೆ  ಗೆ ನೂತನ ಅಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

1998 ರಿಂದ ದಂತ ವೈದ್ಯರಾಗಿ ಸೇವೆ ಆರಂಭಿಸಿದ ಡಾ.ಗೌತಮ್ 27 ವರ್ಷ ದಂತ ವೈದ್ಯರಾಗಿ,  ರೋಟರಿ ಬ್ಲಡ್ ಬ್ಯಾಂಕ್ ಸಮಿತಿಯ ಟ್ರಸ್ಟಿ, ಗೋಪಾಳಗೌಡ ನಿವಾಸಿಗಳ ಸಂಘದ ನಿರ್ದೇಶಕರಾಗಿ ಡಾ.ಗೌತಮ್ ಸೇವೆ ಸಲ್ಲಿಸಿದ್ದಾರೆ. 

2021 ರಲ್ಲಿ ಮೆಗ್ಗಾನ್ ಆಡಳಿತ ಮಂಡಳಿಗೆ ಸರ್ಕಾರಿ ನಾಮನಿರ್ದೇಶಕರಾಗಿ ನೇಮಕಗೊಂಡು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.‌ ಇವರ ವೇಳೆಯಲ್ಲೇ ಕೋವಿಡ್ ವೇಳೆ ಹೆಚ್ಚಿನ‌ಬೆಡ್ ವ್ಯವಸ್ಥೆಗೆ, ಆಕ್ಸಿಜನ್ ಟ್ಯಾಮಕ್ ಗಳ ನಿರ್ಮಾಣ ಮಾಡುವ‌ ತೀರ್ಮಾನ ಕೈಗೊಳ್ಳಲಾಗಿತ್ತು. ಇವರಿಗೆ ಇವರ ಅಭಿಮಾನಿ ಬಳಗ ತುಂಬು ಹೃದಯದ ಅಭಿನಂದನೆಗಳನ್ನ ಸಲ್ಲಿಸಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close