ಸುದ್ದಿಲೈವ್/ಶಿವಮೊಗ್ಗ
ಮೆಗ್ಗಾನ್ ನ ಹೊರಗುತ್ತಿಗೆ ನೌರರನ್ನ ಖಾಯಂ ಗೋಳಿಸುವಂತೆ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಸಚಿವ ಸಂತೋಷ್ ಲಾಡ್ ಮುಂದೆ ಕಣ್ಣೀರಿಟ್ಟು ಕಾಲಿಗೆ ಬಿದ್ದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮೂರ್ತಿಯವರ ಆರೋಗ್ಯ ವಿಚಾರಿಸಲು ಮೆಗ್ಗಾನ್ ಗೆ ಭೇಟಿ ನೀಡಿ ಹೊರ ಬರುತ್ತಿದ್ದ ಸಚಿವ ಲಾಡ್ ಅವರ ಕಾಲಿಗೆ ಬಿದ್ದಿದ್ದಾರೆ. ನಮಗೆ ಬರುವ ಸಂಬಳದಲ್ಲಿ ಮನೆ ನಿರ್ವಾಹಣೆ ಮಾಡಲು ಆಗುತ್ತಿಲ್ಲ ಎಂದಿದ್ದಾರೆ.
ಈಗಿನ ದುಬಾರಿ ಜಗತ್ತಿನಲ್ಲಿ ಈಗ ಬರುವ ಸಂಬಳ ಸಾಲುತ್ತಿಲ್ಲ. ಮಕ್ಕಳ ವಿದ್ಯಭ್ಯಾಸಕ್ಕೂ ತೊಂದರೆ ಆಗುತ್ತಿದೆ ಎಂದು ಮಹಿಳೆ ಕಣ್ಣೀರಿದ್ದಾರೆ. ಮಹಿಳೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.