ಸುದ್ದಿಲೈವ್/ಶಿವಮೊಗ್ಗ
ಗೋವು ಆಧಾರಿತ ಕೃಷಿಗೆ ಒತ್ತು ನೀಡುವುದು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಭಾರತೀಯ ಕುಟುಂಬ ಪದ್ಧತಿ ಉಳಿಸಿ ಬೆಳೆಸುವುದರ ಮೂಲಕ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸುವ ಮಹತ್ತರ ಉದ್ದೇಶಗಳ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ನಂದಿಯಾತ್ರೆ ನಡೆದಿದೆ.
ಗೋಸೇವಾ ಗತಿವಿಧಿ ಸಂಘಟನೆಯ ವತಿಯಿಂದ ನಡೆಯುತ್ತಿರುವ ನಂದಿಯಾತ್ರೆಯು ತರೀಕೆರೆಯಿಂದ ಶಿವಮೊಗ್ಗ ಪ್ರವೇಶಿಸಿದೆ. ನಂದಿಯಾತ್ರೆ ಕುರಿತು ತರಿಕೆರೆ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಮದ್ಯಾಹ್ನ ಸುಮಾರು 03:30ಕ್ಕೆ ಆಗಮಿಸಲಿದ್ದು ಅಂದು ನಗರದ ಹೊಳೆ ಬಸ್ ಸ್ಟಾಪ್ ಬೆಕ್ಕಿನ ಕಲ್ಮಠದ ಬಳಿಯಿಂದ ಬೈಕ್ ರ್ಯಾಲಿ ಮುಖಾಂತರ ಬಿ ಹೆಚ್ ರಸ್ತೆ ಮಾರ್ಗವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಬಂದು ಅಲ್ಲಿ ನಂದಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಪೂರ್ಣಕುಂಭ ಮತ್ತು ಮಂಗಳವಾದ್ಯದೊಂದಿಗೆ ಯಾತ್ರೆಗೆ ಸ್ವಾಗತ ಸಲ್ಲಿಸಲಾಯಿತು. ನಂತರ ನಡೆದ ನಂದಿಯಾತ್ರೆಯು ಗಾಂಧಿಬಜಾರ್, ಎಸ್.ಪಿ.ಎಮ್ ರಸ್ತೆ ಮಾರ್ಗವಾಗಿ ಕೋಟೆ ರಸ್ತೆಯ ವಾಸವಿ ಶಾಲಾ ಆವರಣವನ್ನು ತಲುಪಿದೆ.
ಶಾಲೆಯ ಆರವರಣದಲ್ಲಿ ಧಾರ್ಮಿಕ ಸಭೆಯನ್ನ ಹಮ್ಮಿಕೊಳ್ಳಲಾಗಿದ್ದು, ಸಭೆಗೂ ಮುಂಚೆ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಹಾಗೂ ಭಜನಾ ಕಾರ್ಯಕ್ರಮ ನಡೆದಿದೆ. ನಂತರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟಿನ ರಾಧ ಸುರಭಿ ಗೋಮಂದಿರದ ಅಧ್ಯಕ್ಷರಾದ ಶ್ರೀ ಭಕ್ತಿಭೂಷಣ್ ದಾಸ್ ರಿಂದ ಬೌದ್ಧಿಕ್ ನಡೆದಿದೆ.
ವಿಶ್ವ ಶಾಂತಿ, ಮತ್ತು ಗೋವಂಶ ಸಂರಕ್ಷಣೆ, ವಿಷಮುಕ್ತ ಆಹಾರ, ಗಾಳಿ, ನೀರು, ಮಣ್ಣು, ಪರಿಸರ ಸಂರಕ್ಷಣೆಯೊಂದಿಗೆ ದೇಶೀ ಗೋವು ಮತ್ತು ಭೂಮಾತೆಗೆ ಇರುವ ಸಂಬಂಧ ಸಾರುವುದು, ಗೋ ಆಧಾರಿತ ಕೃಷಿಗೆ ಒತ್ತು ನೀಡುವುದು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಭಾರತೀಯ ಕುಟುಂಬ ಪದ್ಧತಿ ಉಳಿಸಿ ಬೆಳೆಸುವುದರ ಮೂಲಕ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸುವ ಮಹತ್ತರ ಉದ್ದೇಶಗಳನ್ನ ಈ ಶೋಭಾಯಾತ್ರೆ ಹೊಂದಿದೆ. ವಿಶ್ವ ಹಿಂದೂ ಪರಿಷತ್, ಶಿವಮೊಗ್ಗ ಘಟಕ ಹಾಗೂ ಶಿವಮೊಗ್ಗದ ಎಲ್ಲ ಗೋಶಾಲೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದೆ.
ಈ ವೇಳೆ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ವಿಹೆಚ್ ಪಿಯ ವಾಸುದೇವ, ರಾಜು, ಕಿರಣ್ ಮೊದಲಾದವರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.