ಸುದ್ದಿಲೈವ್/ಶಿವಮೊಗ್ಗ
ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಅವರು ಗುಣಮುಖರಾಗಿದ್ದಾರೆ. ಈ ಕುರಿತು ವಿಡಿಯೋವೊಂದನ್ನ ಹರಿಬಿಟ್ಟಿರುವ ನಟ ಶಿವರಾಜ್ ಕುಮಾರ್ ಮತ್ತು ಪತಿ ಗೀತ, ಶಿವಣ್ಣನವರು ಕ್ಯಾನ್ಸರ್ ಫ್ರೀ ಆಗಿದ್ದಾರೆ.
ಮೂತ್ರಪಿಂಡದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಕುರಿತು ವೈದ್ಯ ಡಾ.ಮುರುಗೇಶ್ ಅವರಿಂದ ವಿಡಿಯೋವನ್ನ ಈ ಮೊದಲು ಸಚಿವ ಮಧು ಬಂಗಾರಪ್ಪ, ನಟನ ಪತ್ನಿ ಗೀತ ಶಿವರಾಜ್ ಕುಮಾರ್ ಮೂಲಕ ವಿಡಿಯೋ ಬಿಡುಗಡೆ ಮಾಡಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶೀಘ್ರದಲ್ಲಿಯೇ ಅವರು ನಿಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ನಟ ಮತ್ತು ಅವರ ಒತ್ನಿ ಮತ್ತೊಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಭಯ ಹೋಗಲಾಡಸಲಾಗಿದೆ.
ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಎಲ್ಲಾ ಮೆಟಿಕಲ್ ವರದಿಗಳು ಕ್ಯಾನ್ಸರ್ ಫ್ರೀ ಎಂದು ಸಾಬೀತಾಗಿದೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಶಿವಣ್ಣನವರೂ ಸಹ ತಮ್ಮ ಅಭಿಮಾನಿಗಳು, ಸಂಬಂಧಿಕರು, ಆತ್ಮೀಯರ ಪ್ರೀತಿಗೆ ಚಿರ ಋಣಿ ಎಂದಿದ್ದಾರೆ.