ಸುದ್ದಿಲೈವ್/ಭದ್ರಾವತಿ
ಹಿಂದಿನ ವರ್ಷದ ಡಿ.19 ರಂದು ಸಹೋದರನ ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲ ಕಳುವಾಗಿದ್ದ ಪ್ರಕರಣವನ್ನ ಪತ್ತೆಹಚ್ಚಿದ್ದ ಹೊಳೆಹೊನ್ನೂರು ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಹೊಸ ನಾಲ್ಕು ಪ್ರಕರಣವನ್ನ ಪತ್ತೆ ಮಾಡಿದ್ದಾರೆ.On December 19 of the previous year, three persons were arrested from Holehonor who had discovered the case of theft of a bag full of nuts from his brother's house. Four new cases were detected.
ರಮೇಶ ವಾಸ ಶ್ರೀನಿವಾಸಪುರ ಗ್ರಾಮ, ಭಧ್ರಾವತಿ ರವರು ತಮ್ಮ ಸಹೋದರನ ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು ದಿನಾಂಕ : 19-12-2024 ರಂದು ಕಳುವಾಗಿತ್ತು. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಅಡಿಕೆ ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಎಸ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಎ.ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ನಾಗರಾಜ್ ಕೆ. ಆರ್. ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಲಕ್ಷ್ಮಿಪತಿ ಆರ್.ಎಲ್ ಪಿ.ಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್ಐರವರುಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಕಾಶ ನಾಯ್ಕ, ಮಂಜುನಾಥ, ಪ್ರಸನ್ನ ಮತ್ತು ಪಿಸಿ ವಿಶ್ವನಾಥ ರವರುಗಳನ್ನು ಒಳಗೊಂಡ ತಂಡವನ್ನು ರಚಿಸಿಲಾಗಿರುತ್ತದೆ.
ತನಿಖಾ ತಂಡವು ಜ.11 ರಂದು ಪ್ರಕರಣದ ಆರೋಪಿತರಾದ 1) ಸಾಜೀದ್ @ ಸಾಧಿಕ್, 25 ವರ್ಷ, ಪಾಲಿಶ್ ಕೆಲಸ, ಖಂಡೇರಾವ್ ಕೊಪ್ಪಲು, ಅವಲಕ್ಕಿ ಮಿಲ್ ಹತ್ತಿರ ಖಾಜಿ ಮೊಹಲ್ಲಾ ಭದ್ರಾವತಿ, 2) ಜಮೀರ್ ಶೇಖ್ @ಅಡ್ಡು, 24 ವರ್ಷ, ಫ್ಲೈವುಡ್ ಕೆಲಸ ಕೂಡ್ಲಿ ಶಿವಮೊಗ್ಗ ಮತ್ತು 3) ಮಹಮದ್ ಮುಹೀಬುಲ್ಲಾ, 23 ವರ್ಷ, ಪಾಲಿಶ್ ಕೆಲಸ, ಚನ್ನಗರಿ, ದಾವಣಗೆರೆ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2023ನೇ ಸಾಲಿನ ಒಂದು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, 2024ನೇ ಸಾಲಿನ ಎರಡು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಮತ್ತು ಒಂದು ಅಡಿಕೆ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 04 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 3,00,000/- ರೂಗಳ 6 ಕ್ವಿಂಟಾಲ್ ಅಡಿಕೆ, ಅಂದಾಜು ಮೌಲ್ಯ 1,93,000/- ರೂಗಳ 03 ದ್ವಿ ಚಕ್ರ ವಾಹನಗಳು ಹಾಗೂ ಕೃತ್ಯ ಬಳಸಿದ ಅಂದಾಜು ಮೌಲ್ಯ 2,00,000/- ರೂಗಳ ಓಮಿನಿ ವಾಹನ ಸೇರಿದಂತೆ ಒಟ್ಟು 6,93,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.