![]() |
A Marriage took place in Mantra Mangalya at Rashtrakavi Kuvempu Birth place Kuppalli |
ಸುದ್ದಿಲೈವ್/ಶಿವಮೊಗ್ಗ
ರಾಷ್ಟ್ರಕವಿ ನೆಲದಲ್ಲಿ ಅವರ ಆಶಯಕ್ಕೆ ವಿರುದ್ದವಾಗಿ ಅದ್ದೂರಿ ಮಂತ್ರ ಮಾಂಗಲ್ಯ ನಡೆದಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಅದ್ದೂರಿ ಮಂತ್ರ ಮಾಂಗಲ್ಯವೊಂದು ಜರುಗಿದೆ. ಕುವೆಂಪು ಆಶಯದ ಮಂತ್ರ ಮಾಂಗಲ್ಯ ಎಲ್ಲಾ ರೀತಿಯ ಸರಳ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭ ನಡೆದಿದೆ ಎಂಬ ಆರೋಪ ಕೇಳಿದಿದೆ.ಹೇಮಾಂಗಣದ ಮುಂಭಾಗದಲ್ಲಿ ತಳಿರುತೋರಣಗಳಿಂದ ಸಿಂಗರಿಸಿ, ಫಲ, ಪುಷ್ಪಗಳನ್ನು ಬಳಸಿಕೊಂಡು ವಿಭಿನ್ನವಾಗಿ ಮಂತ್ರ ಮಾಂಗಲ್ಯ ವಿವಾಹ ಮಾಡಲಾಗಿದೆ.ಮುಂಭಾಗದ ಮರಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ಕುಪ್ಪಳಿಯ ಶಾಂತ ನಿಸರ್ಗಕ್ಕೆ ಧಕ್ಕೆ ತಂದಿದ್ದಾರೆ.ಊಟಕ್ಕೆ ರೌಂಡ್ ಟೇಬಲ್ ಅಳವಡಿಸಿ ಅದಕ್ಕೆ ಶ್ವೇತ ವಸ್ತ್ರಗಳನ್ನು ಅಲಂಕರಿಸಿದ್ದಾರೆ.ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಕಲ್ಪನೆಯನ್ನು ಮುರಿದು ಬೆಂಗಳೂರು ಮೂಲದವರು ಅದ್ದೂರಿ ಮದುವೆ ಸಮಾರಂಭ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಕುವೆಂಪು ಆಶಯಕ್ಕೆ ವಿರುದ್ದವಾಗಿ ನಡೆದಿರುವ ಮಂತ್ರ ಮಾಂಗಲ್ಯಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ. ಈ ಅದ್ದೂರಿ ವಿವಾಹಕ್ಕೆ ಅನುಮತಿ ಕೊಟ್ಟವರು ಯಾರು ಪ್ರಶ್ನೆ ಕೇಳಿಬಂದಿದೆ.ಈ ಬಗ್ಗೆ ಕುವೆಂಪು ಪ್ರತಿಷ್ಟಾನವೇ ಸ್ಪಷ್ಟೀಕರಣ ನೀಡಬೇಕಿದೆ.