ಡಾ.ಸರ್ಜಿ ಹೆಸರಿನಲ್ಲಿ ಕಹಿಸಿಹಿ ಕಳುಹಿಸಿದ ಆರೋಪಿಗೆ ನ್ಯಾಯಾಂಗ ಬಂಧನ

 


ಸುದ್ದಿಲೈವ್/ಶಿವಮೊಗ್ಗ

ಎಂಎಲ್ ಸಿ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಕಹಿ ಸಿಹಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಕೋಟೆ ಪೊಲೀಸರು‌ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಎಸ್ಪಿ ಮಿಥುಬ್ ಕುಮಾರ್ ಸೌಹಾರ್ದ್ ಪಟೇಲ್ ಎಂಬ ಭದ್ರಾವತಿ ಯುವಕನನ್ನ ಕೋಟೆ ಪೊಲೀಸರು ಭಂಧಿಸಿ ನ್ಯಾಯಾಂಗ ಬಂಧಕ್ಕೆ ಕಳುಹಿಸಿರುವುದಾಗಿ ತಿಳಿಸಿದರು.

ಶಿವಮೊಗ್ಗದ ಕಾನೂನು ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಸೌಹಾರ್ಧ ಪಟೇಲ್ ಗೆ  ಎನ್ ಇ ಎಸ್ ಸಂಸ್ಥೆಯ ಸೆಕ್ರೆಟರಿ ನಾಗರಾಜ್ ಹಾಗೂ ಕೆಲವರು ಸೇರಿ ಬುದ್ಧಿವಾದ ಹೇಳಿದ್ದರು.

ಪಟೇಲ್ ಅವರ ತಂದೆ ತಾಯಿ ಹತ್ತಿರ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನೋಡಿಕೊಂಡಿದ್ದರು.  ಆ ನಂತರ ಹುಡುಗಿ ಬೇರೆ ಒಬ್ಬರ ಜೊತೆ ಮದುವೆಯಾದಾಗ ಈತನಿಗೆ ಇವರ ಮೇಲೆ ದ್ವೇಷ ಶುರುವಾಗಿತ್ತು ಕಾರ್ಯಕ್ರಮವೊಂದರಲ್ಲಿ ಡಾ.ಸರ್ಜಿ ಮತ್ತು ನಾಗರಾಜ್ ಅವರನ್ನ ನೋಡಿದ ಪಟೇಲ್ ಗೆ ಅವರ ಭಾಷಣದ ಬಗ್ಗೆನೂ ದ್ವೇಷ ತುಂಬಿಸಿಕೊಂಡಿದ್ದ.

ಇವರ ವಿರುದ್ಧ ರೈವಲ್ವರಿ ಹಿನ್ನಲೆಯಲ್ಲಿ ಮಾತ್ರೆಗಳನ್ನ ಖರೇದಿಸಿ ನಾಗರಾಜ್ ಮತ್ತು ಇತರೆ ಇಬ್ಬರು ವೈದ್ಯರಿಗೆ ಸಿಹಿಯ ಮೇಲೆ ಮಾತ್ರೆಗಳನ್ನ ಉದುರಿಸಿ ಕಳುಹಿಸಿದ್ದ  ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಜಿ ಅವರ ಫ್ಯಾನ್ ಫಾಲೋ ಸಹ ಈ ಪಟೇಲ್ ಆಗಿದ್ದ.

ಕೋಟೆ ಪಿಐ ಹರೀಶ್ ಪಟೇಲ್ ನೇತೃತ್ವದ ತಂಡ ಈತನನ್ನ ಬಂಧಿಸಿದೆ. ಸೌಹಾರ್ಧ ಪಟೇಲ್ ಕಾನೂನು ಪ್ರ್ಯಾಕ್ಟಿಸ್ ಸಹ ಮಾಡಿ‌ಮುಗಿಸಿದ್ದ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close