ಮಧು ಅಣ್ಣ ನಿಮಗೆ ಹೇಳಿದ್ದಲ್ಲ, ಮಂತ್ರಿಗಿರಿ ಹಂಚಿಕೆಗೆ ಬೇಳೂರು ಪಾಠವೇನು ಗೊತ್ತಾ?



Sagar MLA Gopal Krishna says that while allocating ministers, ministers should be given to those who are right.

ಸುದ್ದಿಲೈವ್/ಸಾಗರ

ಮಂತ್ರಿಗಿರಿ ಹಂಚುವಾಗ ಸರಿಯಾಗಿ ಇರುವವರಿಗೆ ಮಂತ್ರಿಗಿರಿ ಕೊಡಬೇಕು ಎಂದು ಸಾಗರದ ಶಾಸಕ ಗೋಪಾಲ ಕೃಷ್ಣ ಬೇಳೂರು ಅಡಿಕೆ ಸಮಾವೇಶದಲ್ಲಿ ಗುಡುಗಿದ್ದಾರೆ.

ಅವರು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಆಪ್ಸಕೋಸ್, ತೋಟಗಾರ್ಸ್ ಸಹಯೋಗದಲ್ಲಿ ಸಾಗರದ ಸಂತೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂತ್ರಿಗಿರಿ ಕೊಡುವಾಗ ಅರಣ್ಯ ಎಲ್ಲಿರುತ್ತದೆ ಅಲ್ಲಿಂದ ಬಂದ ಶಾಸಕರಿಗೆ ಅರಣ್ಯ ಕೊಡಬೇಕು. ತೋಟಗಾರಿಕೆ ಇಲಾಖೆ ಯಾರಿಗೆ ಕೊಡಬೇಕು. ಅಡಿಕೆ ಬೆಳೆಯುವವರಿಗೆ  ತೋಟಗಾರಿಕೆ ಕೊಡಬೇಕು. ಈ ಹಿಂದೆ ಕೇಂದ್ರದ ಸಚಿವರೊಬ್ಬರಿಗೆ ಅಡಿಕೆ ಕೊಟ್ಟಿದ್ದಕ್ಕೆ 'ಏ ಕ್ಯಾ ಹೈ' ಎಂದರು ಅದಕ್ಕೆ ಹಾನಿಕಾರಕ ಎಂದು ಹಣೆಪಟ್ಟಿ ಬೀಳುವಂತಾಯಿತು. ಈ ರೀತಿ ಪರಿಸ್ಥಿತಿ ನಿರ್ಮಾಣವಾದರೆ ರೈತರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತೆ  ಎಂದು ಆತಂಕ ವ್ಯಕ್ತಪಡಿಸಿದರು. 

ಕೇಂದ್ರದ ತಜ್ಞರನ್ನ ಕರೆಯಿಸಿ ವರ್ಷಗಟ್ಟಲೆ ಅಡಿಕೆ ಕುರಿತು ಅಧ್ಯಾನ ನಡೆಸಿ ವರದಿ ತಯಾರಿಸಬೇಕು. ರಾಜ್ಯದ ತೋಟಗಾರಿಕೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅವರ ತಂದೆಯವರ ಅನಾರೋಗ್ಯದಿಂದ ಅವರಿಗೆ ಬರಲು ಆಗಲಿಲ್ಲ. ಸಚಿವ ಮಧು ಬಂಗಾರಪ್ಪನವರು ವೇದಿಕೆ ಮೇಲಿದ್ದಾರೆ.  ರೈತರ ಪರವಾಗಿ ಧ್ವನಿ ಎತ್ತದಿದ್ದರೆ ಅಂತಹ ಸರ್ಕಾರವನ್ನ ನಾನು ಬಿಡುವುದಿಲ್ಲ. ಅಂತಹ ಸರ್ಕಾರ ಯಾಕಿರಬೇಕು ಎಂದು ಗುಡುಗಿದರು. 

ಅಭಿವೃದ್ಧಿ ಮಂಡಳಿ ಮಾಡ್ತೀರ ಮಾಡಿ, ಆಮದು ನಿಲ್ಸಲು ಸಾಧ್ಯವಿಲ್ಲ. ಆಮದು ಎಷ್ಟೇ ಬರಲಿ ಆದರೆ ಮಲೆನಾಡಿಗರು ಅಡಿಕೆಯನ್ನ ಕಲಬೆರಕೆ ಮಾಡಬೇಡಿ. ಅಡಿಕೆ ಹಾನಿಕಾರಕ ಎಂದು ಸುಪ್ರೀಂ ಆದೇಶಿಸಿ 12 ವರ್ಷ ಕಳೆದಿದೆ. ಶಿವರಾಜ್ ಸಿಂಗ್ ಚೌಹಾಣ್ ಬಹಳ ಒಳ್ಳೆಯ ವ್ಯಕ್ತಿಗಳಿದ್ದಾರೆ. ಅವರಿಂದ ಅಡಿಕೆಗೆ ಬಂದಿರುವ ಕಳಂಕ ನಿವಾರಣೆಯಾಗಲಿ ಎಂದರು. 

ಸೊಪ್ಪಿನಬೆಟ್ಟ ಕಾನಾಗಿದೆ. ಕಾನಾದರೆ ಅರಣ್ಯ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಮತ್ತು ಕೇಂದ್ರ ಮನಸುಮಾಡಿದರೆ ಈ ಕಾನನ್ನ ತೆಗೆಯಬಹುದು. ಮಲೆನಾಡಿಗರಿಗೆ ಅನುಕೂಲ ಮಾಡಿಕೊಡಬೇಕು. ರೈತರ ಪರವಾಗಿ ಏನೇನು ಮಾಡಲು ಸಾಧ್ಯವಿದೆ ಮಾಡಬೇಕು. ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡುತ್ತೀರಿ. ಎಷ್ಟು ವರ್ಷವಾಯಿತು ಸಮಸ್ಯೆ ಬಗೆಹರಯಲೇ ಇಲ್ಲ. ರೈತರ ಸಮಸ್ಯೆಗೆ ಧ್ವನಿಯಾಗದೆ ಹೋದರೆ ನಾವೆಲ್ಲಾ ರಾಜಕಾರಣದಲ್ಲಿರುವುದು ವ್ಯರ್ಥವಾಗಿ ಹೋಗಲಿದೆ  ಎಂದರು. 

ಕಳೆದ ಬಾರಿ ಮಳೆ ಹೆಚ್ಚಾಗಿ ರೈತರ ತೋಟ ಹಾಳಾಗಿದೆ ನಮ್ಮ‌ಮಿನಿಸ್ಟ್ರಿಗೆ ಹೋಗಿ ಹೇಳಿದರೆ ಆಯಿತು ಅನುದಾನ ಕೊಡ್ತೀನಿ ಎಂದರು 17 ಕೋಟಿ ರೂ. ಹಣ ಪರಿಹಾರ ಘೋಷಿಸಿದರು. ಈಗ ಅದು ಹಣ ಬಂದಿದೆ. ಎಂದ ಬೇಳೂರು ಸಚಿವರು ಎಂದಾಕ್ಷಣ ಮಧು ಅಣ್ಣ ನೀವಲ್ಲ ತೋಟಗಾರಿಕೆ ಮಂತ್ರಿಗಳು ಮತ್ತೆ ತಪ್ಪು ತಿಳ್ಕೊಬೇಡಿ ಎಂದು ಸಮ್ಜಾಯಿಷಿ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close