ಸುದ್ದಿಲೈವ್/ಶಿವಮೊಗ್ಗ
ಮಾಜಿ ನಗರಸಭೆ ಸದಸ್ಯ ಲಕ್ಷ್ಮಣ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ವಿನೋಬ ನಗರದ ಪೊಲೀಸ್ ಠಾಣ ವ್ಯಾಪ್ತಿಯಲ್ಲಿದ್ದ ಪೃಥ್ವಿ ಮ್ಯಾನ್ಷನ್ ನ ಮಾಲೀಕರ ಮನೆಯ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಪತ್ತೆಯಾದ ದಾಖಲಾತಿಗಳು ಪರಿಶೀಲಿಸಿದಾಗ ಮಾಲೀಕರ ಅನಧಿಕೃತ ಬಡ್ಡಿವ್ಯವಹಾರ ಎಂದು ಸಾಬೀತಾಗಿದೆ.
ಅನಧಿಕೃತ ಬಡ್ಡಿ ವ್ಯವಹಾರದ ಬೆನ್ನಲ್ಲೇ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲಿಕ ಮೋಹನ್ ಜಿ ಮತ್ತು ಪುತ್ರ ಪೃಥ್ವಿ ವಿರುದ್ಧ ಸಹಕಾರ ಸಂಘಗಳ ಉಪನಿಬಂಧಕರೇ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
ನ.24 2024 ರಲ್ಲಿ ಬಿಜೆಪಿಯ ಮಾಜಿ ನಗರ ಸಭೆ ಸದಸ್ಯ ಲಕ್ಷ್ಮಣ್ ಆರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಳದ ಪಾರ್ಕ್ ವೊಂದರಲ್ಲಿ ವಿಷಸೇವಿಸಿದ್ದ ಲಕ್ಷ್ಮಣ್ ನಂತರ ಒದ್ದಾಡಲಿಕ್ಕೆ ಶುರುಮಾಡಿದ್ದರಿಂದ ನಂತರ ಖುದ್ದಾಗಿ ತಾವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಕರೆಯಿಸಿಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಣ್ ಸಾವನ್ನಪ್ಪಿದ್ದರು.
ತುಂಗ ನಗರ ಪೊಲೀಸ್ ಠಾಣೆಯಲ್ಲಿ ವಿನೋಬ ನಗರದ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕ ಮೋಹನ್.ಜಿ, ಮೋಹನ್ ಜಿ ಮತ್ತು ವೆಂಕಟೇಶ್ ವಿರುದ್ಧ ದೂರು ದಾಖಲಾಗಿತ್ತು. ಆರ್ ಲಕ್ಷ್ಮಣ್ ಬಡ್ಡಿಗೆ ಇವರಿಂದ ಹಣ ಪಡೆದಿದ್ದರು. ಹಣ ಪಡೆದಿದ್ದ ಕಾರಣ ಬಡ್ಡಿ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾದ ಬೆನ್ನಲ್ಲೇ ಮೋಹನ್ ಅವರ ಮನೆಯ ಮೇಲೆ ತುಂಗ ನಗರ ಪೊಲೀಸರು ದಾಳಿ ನಡೆಸಿ ದಾಳಿಯಲ್ಲಿ ಮೋಹನ್ ಮತ್ತು ಅವರ ಪುತ್ರ ನಾಪತ್ತೆಯಾಗಿದ್ದರು. ಆದರೆ 150 ಕ್ಕೂ ಹೆಚ್ಚು ವಿವಿಧ ಬ್ಯಾಂಕಿನ ಗ್ರಾಹಕರ ಸಹಿ ಮಾಡಿಸಿಕೊಂಡ ಖಾಲಿ ಚೆಕ್ ಗಳು ಪತ್ತೆಯಾಗಿವೆ. 90 ಜನರ ಸಹಿಯುಳ್ಳ ವಿವಿಧ ಅಕೌಂಟ್ ನಲ್ಲಿರುವ 150 ಕ್ಕೂ ಹೆಚ್ಚು ಚೆಕ್ ಗಳು ಪತ್ತೆಯಾಗಿತ್ತು. ದುರ್ದೈವ ವಶಾತ್ ಲಕ್ಷ್ಮಣ್ ಅವರ ಹೆಸರಿನ ಯಾವುದೇ ಚೆಕ್ ಗಳು ಪತ್ತೆಯಾಗಿರಲಿಲ್ಲ.
ದಾಳಿಯಲ್ಲಿ ಪತ್ತೆಯಾದ ಎಲ್ಲಾ ದಾಖಲಾತಿಗಳನ್ನ ತುಂಗ ನಗರ ಪೊಲೀಸರು ಸಹಕಾರ ಸಂಘಗಳ ಉಪನಿಬಂಧಕರಿಗೆ ಹಸ್ತಾಂತರಿಸಕಾಗಿತ್ತು. ಈಗ ಉಪನಿಬಂಧಕರು ಮಾಲೀಕ ಮೋಹನ್ ಜಿ ಮತ್ತು ಪುತ್ರ ಪೃಥ್ವಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿನೋಬ ನಗರಕ್ಕೆ ಸೂಚಿಸಿದ್ದಾರೆ.
ನಾನ್ ಕಾಂಗ್ನಿಜಬಲ್ ಆಕ್ಟ್ ನಲ್ಲಿದ್ದ ಈ ಬಡ್ಡಿ ವ್ಯವಹಾರ ಈ ಕಾಂಗ್ನಿಜಬಲ್ ಎಂದು ಸರ್ಕಾರ ಘೋಷಿಸಿದೆ. ಈ ಬಡ್ಡಿ ವ್ಯವಹಾರಕ್ಕೆ ಸರ್ಕಾರ ಕಠಿಣ ಕಾನೂನು ಕ್ರಮ ತಂದಿದ್ದು ಮುಂದೆ ಏನಾಗಲಿದೆ ಕಾದು ನೋಡಬೇಕಿದೆ.