ಸುದ್ದಿಲೈವ್/ಶಿವಮೊಗ್ಗ
ರಾಯಲ್ ಆರ್ಕಿಡ್ ಬಳಿ ರಸ್ತೆ ದಾಡುವಾಗ ಬೈಕೊಂದು ಡಿಕ್ಕಿಹೊಡೆದು ಪಾದಚಾರಿ ಸಾವನ್ನಪ್ಪಿದ್ದಾರೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೇಲಿನ ತುಂಗನಗರ ನಿವಾಸಿ ರಾಜಮ್ಮ (65) ಎಂಬುವರು ರಾಯಲ್ ಆರ್ಕೆಡ್ ಬಳಿ ರಸ್ತೆ ದಾಡುವಾಗ ಬೈಕ್ ನವನು ಬಂದು ಡಿಕ್ಕಿಹೊಡೆದಿದ್ದಾನೆ. ಅವರನ್ನ ಮೆಗ್ಗಾನ್ ಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿದೆ.
ರಾಜಮ್ಮರಿಗೆ ನಾಲ್ವರು ಮಕ್ಕಳಿದ್ದು, ಓರ್ವರು ಮೃತಪಟ್ಟಿದ್ದಾರೆ. ಮೂವರ ಮಕ್ಕಳಲ್ಲಿ ಮಗಳ ಮನೆ ಪುಟ್ಟಪ್ಪನ ಕ್ಯಾಂಪ್ ಗೆ ತೆರಳಿದ್ದ ರಾಜಮ್ಮ ಇಂದು ಬೆಳಿಗ್ಗೆ ದುರ್ಗಿಗುಡಿಯಲ್ಲಿರುವ ಡಯೋಗ್ನಟಿಕ್ ಸೆಂಟರ್ ಗೆ ಹೋಗುವಾಗ ಬೈಕ್ ನವನು ಬಂದು ಡಿಕ್ಕಿ ಹೊಡೆದಿದ್ದಾನೆ.
ದುರ್ಗಿ ಗುಡಿಯಲ್ಲಿರುವ ಡಯೋಗ್ನೋಸಿಸ್ ಸೆಂಟರ್ ನಲ್ಲಿ ರಾಜಮ್ಮ ಕಳೆದ 19 ವರ್ಷದಿಂದ ಆಯ ಕೆಲಸ ಮಾಡುತ್ತಿದ್ದರು. ಇಂದು ರಸ್ತೆ ದಾಟುವಾಗ ಜವರಾಯನಾಗಿ ಬೈಕ್ ಬಂದು ಗುದ್ದಿದೆ. ರಾಜಮ್ಮಳಿಗೆ ಕಾಲು ಮುರಿದು, ತಲೆಗೆ ಹೊಡೆತಬಿದ್ದಿತ್ತು.