After Vijayendra became the president of BJP, there is a lot of confusion going on. MP Raghavendra opined that it has come to the level of using singular. |
ಸುದ್ದಿಲೈವ್/ಶಿವಮೊಗ್ಗ
ವಿಜೇಂದ್ರ ಬಿಜೆಪಿ ಅಧ್ಯಕ್ಷರಾದ ಮೇಲೆ ಸಾಕಷ್ಟು ಗೊಂದಲಗಳನ್ನ ಸೃಷ್ಟಿ ಮಾಡುವ ಕೆಲಸ ಆಗುತ್ತಿದೆ. ಅದೀಗ ಏಕವಚನ ಬಳಸುವ ಮಟ್ಟಕ್ಕೆ ಬಂದು ನಿಂತಿದೆ ಎಂದು ಸಂಸದ ರಾಘವೇಂದ್ರ ಅಭಿಪ್ರಾಯಪಟ್ಟರು.
ಅವರು, ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿ ದಿನ ಮಾಧ್ಯಮಗಳಿಗೆ ವಿಷಯ ಕೊಡುವಂತಹ ಕೆಲಸವನ್ನು ಚೆನ್ನಾಗಿಯೇ ಮಾಡುತ್ತಿದ್ದಾರೆ. ಇದಕ್ಕೆಲ್ಲದಕ್ಕೂ ಇನ್ನೂ ಒಂದು ವಾರದಲ್ಲಿ ತೆರೆ ಬೀಳಲಿದೆ. ಇದೀಗ ಪಕ್ಷದಲ್ಲಿ ಸಂಘಟನಾ ಪರ್ವ ನಡೆಯುತ್ತದೆ. ವರಿಷ್ಠರ ಗಮನಕ್ಕೆ ಈ ವಿಚಾರ ಬಂದಿದೆ ಎಂದು ತಿಳಿಸಿದರು.
ಇದೆ ವೇಳೆ ದೆಹಲಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲೂ ಪಕ್ಷದ ಆಂತರಿಕ ಚುನಾವಣೆ ಆರಂಭಗೊಂಡಿದೆ. ಶೀಘ್ರದಲ್ಲೇ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಆಗುತ್ತದೆ. ಬಿ.ವೈ.ವಿಜೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೂರಕ್ಕೆ ನೂರರಷ್ಟು ಮುಂದುವರಿಯುವ ವಿಶ್ವಾಸ ನನ್ನಲ್ಲಿದೆ.
ಅವರಿಗೆ ಇರುವ ಅನುಭವ ತೆಗೆದುಕೊಂಡ ನಿರ್ಧಾರಗಳು ಯಾವುದೇ ಹೊಂದಾಣಿಕೆ ರಾಜಕೀಯ ಮಾಡದೆ ಮುಖ್ಯಮಂತ್ರಿಗಳ ವಿರುದ್ಧವೇ ಹೋರಾಟ ಮಾಡಿದ್ದಾರೆ. ಸಂಘಟನೆ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಆದರೆ ಕೆಲವರು ನಾವೇ ಎಲ್ಲಾ ಎಂದುಕೊಂಡಿದ್ದಾರೆ ಆದರೆ ನಮ್ಮಲ್ಲಿ ಸಂಘಟನೆಯನ್ನು ಕಟ್ಟಿದ ಹಿರಿಯರು ಶಾಸಕರು ನಾಯಕರು ಇದ್ದಾರೆ ಹಾಗಾಗಿ ನನಗೆ ಪಕ್ಷದ ಇತ್ತೀಚಿನ ಬೆಳವಣಿಗೆಗೆ ತೆರೆ ಬೀಳಲಿದೆ ಎಂಬ ವಿಶ್ವಾಸ ಇದೆ ಎಂದರು.
ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ರೆಡ್ಡಿ ಮಧ್ಯ ನಡೆಯುತ್ತಿರುವ ಗುದ್ದಾಟದ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಸಂಸದರು, ಶ್ರೀರಾಮುಲುವರ ಮಾತನ್ನು ಕೇಳಿ ನನಗೂ ಕೂಡ ನೋವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಏನೂ ಚರ್ಚೆಯಾಗಿದೆ ಎಂಬುದು ನಮಗೆ ಗೊತ್ತಿಲ್ಲಆದರೂ ಶ್ರೀರಾಮುಲು ಅವರು ನಮ್ಮ ನಾಯಕರು ನಮ್ಮ ಪಕ್ಷದಲ್ಲಿ ಹಿರಿಯರು ಎಂದು ಹೇಳಿದರು.
ವಿರೋಧ ಪಕ್ಷ ಇಂತಹ ಸಮಯವನ್ನು ಕಾಯುವುದು ಸಹಜ. ಪಕ್ಷದ ಬೆಳವಣಿಗೆಯಿಂದ ನೂರಕ್ಕೆ ನೂರರಷ್ಟು ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ. ಅವರು ಕೂಡ ನೋವಿನಲ್ಲಿದ್ದಾರೆ. ಕಳೆದ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಅವರು ನೊಂದಿದ್ದಾರೆ ಎಂದು ಹೇಳಿದರು.
ಇದರಿಂದ ಪಕ್ಷಕ್ಕೂ ಸಾಕಷ್ಟು ಹಾನಿಯಾಗಿದೆ. ಹಾಗಾಗಿ ಈ ಗೊಂದಲಗಳಿಗೆ ಆದಷ್ಟು ಬೇಗ ತೆರೆ ಎಳೆಯಬೇಕಾಗಿದೆ. ಮೂಡಾ ಪ್ರಕರಣದಲ್ಲಿ ಲೋಕಾಯುಕ್ತ ಸಿಎಂ ಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿದೆ, ಈ ಬೆಳವಣಿಗೆಯನ್ನು ನಾವು ಯಾವಾಗಲೂ ನಿರೀಕ್ಷೆ ಮಾಡಿದ್ದೇವು ಎಂದರು.
ಆದರೆ ಈಗಾಗಲೇ ಈ ಪ್ರಕರಣದಲ್ಲಿ ಇಡಿ ಎಂಟ್ರಿ ಆಗಿದೆ. ಅನೇಕ ಆಸ್ತಿಗಳನ್ನ ಈಗಾಗಲೇ ಮುಟ್ಟುಗೊಲು ಹಾಕಿಕೊಂಡಿದೆ. ಲೋಕಾಯುಕ್ತದ ಈ ಕ್ರಮ ತಾತ್ಕಾಲಿಕ ತಾತ್ಕಾಲಿಕ ಅಷ್ಟೇ ನ್ಯಾಯಾಂಗ ಶಾಶ್ವತವಾದ ನಿಲುವು ತೆಗೆದುಕೊಳ್ಳುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.