An unidentified woman who was lying near the KSRTC bus stand in the city was admitted to Meggan Hospital and the woman was pronounced dead on examination. |
ಸುದ್ದಿಲೈವ್/ಶಿವಮೊಗ್ಗ
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸುಸ್ತಾಗಿ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಿಳೆ ಸಾವಪ್ಪನ್ನಪ್ಪಿರುದಾಗಿ ತಿಳಿಸಿದ್ದಾರೆ.
ಅಪರಿಚಿತ ಮಹಿಳೆಯು ಸುಮಾರು 50 ರಿಂದ 55 ವರ್ಷದವರಾಗಿದ್ದಾರೆ. ಸುಮಾರು 5 ಅಡಿ 5 ಇಂಚು ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ. ಸುಮಾರು 8 ಇಂಚಿನ ಉದ್ದದ ಕಪ್ಪು ಬಿಳಿಯ ಬಣ್ಣದ ತಲೆ ಕೂದಲು, ಹಣೆಯ ಮೇಲ್ಬಾಗದ ಮಧ್ಯದಲ್ಲಿ ಜೋಳದ ಕಾಳು ಗಾತ್ರದ ಕಪ್ಪು ನರಗುಳ್ಳೆ, ಮೈಮೇಲೆ ಕೆಂಪು ಬಣ್ಣದ ರವಿಕೆ, ಹಸಿರು ಬಣ್ಣದ ಸೀರೆ ಹಾಗು ಗುಲಾಬಿ ಬಣ್ಣದ ಲಂಗ ಇದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182261414/9916882544 ಗೆ ಸಂಪರ್ಕಿಸಬಹುದೆAದು ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.