Auto driver shows honesty by returning mobile to heirs. While it is difficult to trust an auto driver, the driver of Shimoga's RMC auto station has a big heart. |
ಸುದ್ದಿಲೈವ್/ಶಿವಮೊಗ್ಗ
ಆಟೋ ಚಾಲಕ ನೋರ್ವ ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಆಟೋ ಚಾಲಕನನ್ನ ನಂಬುವುದು ಕಷ್ಟ ಎನ್ನುವ ವೇಳೆ ಶಿವಮೊಗ್ಗದ ಆರ್ ಎಂ ಸಿ ಆಟೋ ನಿಲ್ದಾಣದ ಚಾಲಕ ಹೃದಯ ವೈಶಲ್ಯತೆ ಮೆರೆದಿದ್ದಾನೆ.
ದಿನಾಂಕ 18.01.2025 ರಂದು ಬಸ್ ನಿಲ್ದಾಣದಿಂದ ಗಾಡಿ ಕೊಪ್ಪಕ್ಕೆ ಹೋಗುವಾಗ ಪ್ರಯಾಣಿಕರೊಬ್ಬರು ಮೊಬೈಲ್ ನ್ನ ಆಟೋದಲ್ಲಿಯೇ ಬೀಳಿಸಿಕೊಂಡಿದ್ದರು. ಮೊಬೈಲನ್ನು ಅದರ ವಾರಸುದಾರರಿಗೆ ನೀಡಿದ ಆಟೋ ಚಾಲಕ ಪ್ರಫುಲ್ಲ ಚಂದ್ರ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರು RMC ಆಟೋ ನಿಲ್ದಾಣದ ಅಧ್ಯಕ್ಷರಾಗಿದ್ದು, ಇವರ ಕಾರ್ಯಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಪಿ ಐ ರವಿ ಸಂಗನ ಗೌಡ ಪಾಟೀಲ್ ಶ್ಲಾಘಿಸಿದ್ದಾರೆ.