ಗ್ರಾಪಂ‌ನ ಕರವಸೂಲಿಗಾರನ ವಿರುದ್ಧ ಎಫ್ಐಆರ್

A complaint has been filed against the Revenue collectir of Grampam for misappropriation of money collected from People


ಸುದ್ದಿಲೈವ್/ಭದ್ರಾವತಿ

ಗ್ರಾಪಂನ  ಕರವಸೂಲಿಗಾರನೋರ್ವನ ವಿರುದ್ಧ ಕರವಸೂಲಿಯಿಂದ ಸಂಗ್ರಹವಾಗಿದ್ದ ಹಣ ದುರುಪಯೋಗದ ಆರೋಪ ಕೇಳಿಬಂದಿದ್ದು ದೂರು ದಾಖಲಾಗಿದೆ. 

ಭದ್ರಾವತಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಕರವಸೂಲಿಗಾರ ಪ್ರದೀಪ ಟಿ,ಎಂ ತಂದೆ ಮದ್ದು ವೀರಪ್ಪ ವಿರುದ್ಧ 2019-20 ರಿಂದ 2023-24 ನೇ ಸಾಲಿನವರೆಗೆ ಪ್ರತಿ ವರ್ಷವು ಕಂದಾಯ ವಸೂಲಿ ಹಣದಲ್ಲಿ ಗ್ರಾಮ ಪಂಚಾಯಿತಿಯ ವರ್ಗ-01 ರ ಖಾತೆಗೆ ಸರಿಯಾಗಿ ಜಮೆ ಮಾಡದೇ ಹಣ ದುರುಪಯೋಗ ಮಾಡಿರುವುದರ ವಿರುದ್ಧ ಆನ್ವೇರಿ ಪಿಡಿಒ ದೂರು ದಾಖಲಿಸಿದ್ದಾರೆ. 

ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಛೇರಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಕಛೇರಿಗೆ ದೂರನ್ನು ಸಲ್ಲಿಸಿದ್ದು ಈ ದೂರಿನ ಸಂಬಂಧ ತಾಲ್ಲೂಕು. ಪಂಚಾಯಿತಿಯ ನಿಯೋಜಿತ ಪರಿಶೀಲನಾಧಿಕಾರಿಗಳಾದ ಸಹಾಯಕ ಲೆಕ್ಕಾಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು (ಪಂ.ರಾ), (ಪ್ರಭಾರ) ಹಾಗೂ ವಿಷಯ ನಿರ್ವಾಹಕರೊಂದಿಗೆ ಮಾರಶೆಟ್ಟಿಹಳ್ಳಿ, ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯತ್ ಅಭಿವುದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಮ್ಮುಖದಲ್ಲಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ.  

2019-20 ರಲ್ಲಿ 10905 ರೂ, 2020-21 ರಲ್ಲಿ 46486 ರೂ., 2021-22 ರಲ್ಲಿ 166779 ರೂ., 2022-23 ರಲ್ಲಿ 71043 ರೂ. ಒಟ್ಟು 295213 ರೂ   ದುರುಪಯೋಗ ವಾಗಿರುವ ಬಗ್ಗೆ ಕಂಡುಬಂದಿರುತ್ತದೆ, ಎಂದು ವರದಿ ನೀಡಲಾಗಿದೆ. ಈ ರೀತಿ ಮನೆ ಕಂದಾಯ ಹಣವನ್ನು ಗ್ರಾಮ ಪಂಚಾಯಿತಿ ವರ್ಗ -01 ರ ನಿಧಿಗೆ ಜಮಾ ಮಾಡದೇ ಹಣ ದುರುಪಯೋಗ ಮಾಡಿರುವ ಮಾರಶೆಟ್ಟಿಹಳ್ಳಿ, ಗ್ರಾಮ ಪಂಚಾಯಿತಿ ಕರವಸೂಲಿಗಾರ ಪ್ರದೀಪ ಟಿ.ಎಂ ವಿರುದ್ಧ ಪಿಡಿಒ ಸುರೇಶ್ ಎಫ್.ಐ.ಆರ್ ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close