ಸುದ್ದಿಲೈವ್/ಶಿವಮೊಗ್ಗ
ಮದುವೆ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಇರುವ 12 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿರುವ ಘಟನೆ ವರದಿಯಾಗಿದೆ.
ಜ. 04 ರಂದು ಶಿವಮೊಗ್ಗ ಮುರಾದ್ ನಗರದ ಕಲ್ಯಾಣ ಮಂದಿರದಲ್ಲಿ ಸಂಬಂಧಿಕರ ಮದುವೆ ಇದ್ದುದರಿಂದ ಮಂಗಳೂರಿನಿಂದ ಮಹಿಳೆಯೊಬ್ಬರು ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ಬಂದು ಮದುವೆ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.
ಊಟ ಮುಗಿಸಿಕೊಂಡು ಮದುವೆ ಮಂಟಪದ ಹತ್ತಿರ ಮಕ್ಕಳೊಂದಿಗೆ ಮಹಿಳೆಯ 7 ವರ್ಷದ ಮಗಳು ಆಟ ಆಡುತ್ತಿದ್ದರಿಂದ ಮಹಿಳೆ ಮದ್ಯಾಹ್ನ 01-30 ಗಂಟೆಗೆ ಊಟಕ್ಕೆ ಹೋಗಿದ್ದು, ಊಟ ಮುಗಿಸಿಕೊಂಡು ಮದ್ಯಾಹ್ನ 02-30 ಗಂಟೆಗೆ ಬಂದಾಗ ಮಗಳು ಕೂದಲ ಜುಟ್ಟು ಬಿಚ್ಚಿಕೊಂಡು ಆಟ ಆಡುತ್ತಿದ್ದನ್ನ ತಾಯಿ ಗಮನಿಸಿದ್ದಾಳೆ. ಮಗಳನ್ನು ಕರೆದು ನೋಡಿದಾಗ ಮಗಳ ಕೊರಳಿನಲ್ಲಿದ್ದ ಸುಮಾರು 90,000/-ರೂ ಬೆಲೆಬಾಳುವ 12 ಗ್ರಾಂ ತೂಕದ ಬಂಗಾರದ ಸರ & ಪೆಂಡೆಂಟ್ ಇರುವ ಸರ ಇರಲಿಲ್ಲ.
ಈ ಬಗ್ಗೆ ಮಗಳಿಗೆ ಕೇಳಿದಾಗ ಯಾರೋ ಇಬ್ಬರು ಮಹಿಳೆಯವರು ಮಂಟಪದ ಡ್ರೆಸಿಂಗ್ ರೂಮ್ ಗೆ ಕರೆದುಕೊಂಡು ಹೋಗಿ ರೂಮ್ ನಲ್ಲಿ ಮಗಳ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಗಂಡನಿಗೆ ಹಡಗಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ತುರ್ತು ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಮಂಗಳೂರಿಗೆ ಹೋಗಿದ್ದು, ನಿನ್ನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ.
ಕ್ರೌನ್ ಪ್ಯಾಲೇಸ್ ನಲ್ಲಿ ಈ ಘಟನೆ ನಡೆದಿದ್ದು ನಹೀಲಾ ಬಾನು ದೂರು ನೀಡಿದ್ದಾರೆ.